Advertisement

ಬುಲೆಟ್‌ ಲೇಡಿ ಟ್ರೈನರ್‌: ಆತ್ಮವಿಶ್ವಾಸದ ಮತ್ತೊಂದು ಹೆಸರು

07:54 PM Apr 10, 2021 | Team Udayavani |

ಹೆಣ್ಣು ಪ್ರಕೃತಿಯ ನೈಜ ಸೌಂದರ್ಯ ಎನ್ನುವ ಮಾತಿದೆ. ಅದನ್ನು ಹೆಣ್ಣು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರತೀತಿಯಿದೆ. ಹೆಣ್ಣು ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆಯಿದ್ದು ತನ್ನ ಕಲೆ, ಕನಸನ್ನು ಮುಚ್ಚಿ ಬದುಕುವುದಲ್ಲ.

Advertisement

ಪ್ರತಿಯೊಂದು ಹೆಜ್ಜೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಮುಂದೆ ತೋರ್ಪಡಿಸಿ ದಿಟ್ಟ ಮಹಿಳೆಯಂತೆ ಬದುಕಬೇಕು. ಇರುವ ಒಂದು ಜೀವನವನ್ನು ಖುಷಿ ಖುಷಿಯಾಗಿ ಮುಂದೆ ಸಾಗಿಸುತ್ತಿರಬೇಕು ಎಂಬೆಲ್ಲ ಕನಸುಗಳನ್ನು ಬಾಲ್ಯದಿಂದಲೇ ಕಟ್ಟಿಕೊಂಡವರು. ಇನ್ನೊಬ್ಬರಿಗೆ ನಾನು ಮಾದರಿಯಾಗಬೇಕು ಎನ್ನುವ ಛಲ ಹೊಂದಿದವರು ಬುಲೆಟ್‌ ಸೋನಿಯಾ ಗ್ರೇಶಿಯಸ್‌.

ಇವರು ಮೂಲತ ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯವರು. ತನ್ನ 10ನೇ ವಯಸ್ಸಿಗೆ ಸ್ಕೂಟಿ ಕಲಿತು, 14 ನೇ ವಯಸ್ಸಿಗೆ ಬುಲೆಟ್‌ ಕಲಿತವರು. 18ನೇ ವಯಸ್ಸಿಗೆ ಕಾರು ಚಲಾಯಿಸುವುದನ್ನು ಕಲಿತು ತನಗೆ ತಾನೇ ಧೈರ್ಯ ತುಂಬಿಕೊಂಡರು.

ಇವರ ಮೊದಲ ಗುರು ಇವರ ಅಪ್ಪನೇ. ಇವರು ನೀಡಿದ ಸ್ಫೂರ್ತಿ, ಪೋ›ತ್ಸಾಹವೇ ಇಂದು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ. ಇವರು ಮೊದಲು ಏಈಊಇ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸದ ಒತ್ತಡ, ನೆಮ್ಮದಿಯಿಲ್ಲ.

ಸಾಕು ಸಾಕಾಯಿತು ಎನ್ನುವಾಗಲೇ ತಟ್ಟನೆ ಹೊಳೆದದ್ದು ನಾನು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿ ಕೊಡಬೇಕು, ನನ್ನಿಂದಾಗಿ ಇನೊಬ್ಬರು ಬೆಳೆಯಬೇಕು ಎಂಬ ತೀರ್ಮಾನ. BBLR(ಬೈಕ್‌ ಬುಲೆಟ್‌ ಲೇಡಿ ಟ್ರೈನರ್‌ )ಎಂಬ ಡ್ರೈವಿಂಗ್‌ ಸ್ಕೂಲ್‌ ಆರಂಭಿಸಿದರು. ಎರಡು ಮಕ್ಕಳ ತಾಯಿಯಾದ ಇವರು ಮನೆ ಕೆಲಸ, ಮಕ್ಕಳ ಕೆಲಸ ಮುಗಿಸಿ ಡ್ರೈವಿಂಗ್‌ ಕ್ಲಾಸ್‌ಗೆ ಹಾಜರಾಗ ತೊಡಗಿದರು. ಬೆಳಗ್ಗೆ 6 ಗಂಟೆಯಿಂದ ಶುರುವಾದರೆ ಸಂಜೆಯ ವರೆಗೂ ಎಲ್ಲ ರೀತಿಯ ವಾಹನಗಳನ್ನು ಕಲಿಸಿ ಕೊಡುವುದೇ ಇವರ ದಿನಚರಿ. ಯಾರು ಏನೂ ಹೇಳಿದರೂ ಅದನ್ನು ಲೆಕ್ಕಿಸದೇ ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತಿದ್ದರು. 2017ರಲ್ಲಿ 15 ಜನರಿಂದ ಶುರುವಾದ ಈ ಕ್ಲಾಸ್‌ ಇಂದು 106 ಜನರವರೆಗೂ ಮುಂದುವರಿದು ದೊಡ್ಡ ಶಾಖೆಯಾಗಿದೆ.

Advertisement

ಇವರು ಹಲವು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದು, ಅದರಲ್ಲಿ ಕೇಂದ್ರ ಮೀಸಲು ಪಡೆ, ಡಾಕ್ಟರ್‌, ಲೆಕ್ಚರ್‌, ಗೃಹಿಣಿ, ಸೀರಿಯಲ್‌ ಸಿನಿಮಾ ಆ್ಯಕ್ಟರ್‌, ಪವರ್‌ ಲಿಫ್ಟರ್‌, ಫೋಟೋಗ್ರಾಫ‌ರ್‌, ಬ್ಯೂಟಿಶಿಯನ್‌ ಹೀಗೆ ಅನೇಕ‌ರಿದ್ದಾರೆ. ಇವರಲ್ಲಿ ಅಪಾಚ್ಚಿ, ಬುಲೆಲ್‌, ಎಮೋಜಿ, ಹೀರೋ ಹಿಟ್‌ ಡಿಲೇಕ್ಸ್‌, ಟೀವಿಸ್‌, ಕಾರ್‌, ಸ್ಕೂಟಿ, ಇನ್ನೂ ಹಲವಾರು ವಾಹನಗಳಿವೆ. ಈ ಗುಂಪಿನಲ್ಲಿ 18 ವರ್ಷದಿಂದ ಹಿಡಿದು 54 ವರ್ಷದವರೆಗಿನ ಮಹಿಳೆಯರು ಇದ್ದಾರೆ.

ಮೊದಲ ಮಹಿಳಾ ಟ್ರೈನರ್‌
ಕೇರಳದ ಕೊಚ್ಚಿಯಲ್ಲಿ ಮೊದಲ ಮಹಿಳಾ ಟ್ರೈನರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ಕೇರಳ ಮಾತ್ರವಲ್ಲದೆ ಬೆಂಗಳೂರಿನಲ್ಲೂ ಟ್ರೈನಿಂಗ್‌ ನೀಡಿದ ಅನುಭವವಿದೆ. ಯು ಎನ್‌ ಎ ಮುನ್ನಾರ್‌ ಹಾಗೂ ಇನ್ನಿತರ ಪ್ರಶಸ್ತಿಗಳು ಇವರ ಕೈ ಸೇರಿವೆ.

ಮಾರಾರಿಕುಲಂನಿಂದ ಹಿಡಿದು ಅಲೆಪ್ಪಿ,ಬೆಂಗಳೂರುವರೆಗೆ ಬುಲೆಟ್‌ನಲ್ಲಿಯೇ ತೆರಳುತ್ತಾರೆ. ಇಂದು ಇವರು “ಕೇರಳದ ಗಂಡು ಹುಲಿ’ ಎಂದೇ ಪ್ರಸಿದ್ಧರಾಗಿ¨ªಾರೆ. ಇಷ್ಟು ಮಾತ್ರವಲ್ಲದೆ ಇವರು ವೈಟ್‌ ಲಿಫ್ಟಿಂಗ್‌ ಹಾಗೂ ರಸ್ಲಿಂಗ್‌ನಲ್ಲಿ ರಾಜ್ಯ ಮಟ್ಟದಲ್ಲಿ ಚಾಂಪಿಯನ್‌ ಆಗಿ ಮಿಂಚಿದವರು. ಸಮಾಜಕ್ಕೆ ಹೆದರಿ ತನ್ನ ಕಲೆ, ಪ್ರತಿಭೆಯನ್ನು ಹೊರತರಲು ಅವಕಾಶ ಸಿಗದ ಮಹಿಳೆಯರನ್ನು ಹುಡುಕಿ ತರುವುದೇ ಇವರ ಮೊದಲ ಉದ್ದೇಶ.


ಕಾವ್ಯಾ ಪ್ರಸಾದ್‌ ಭಟ್‌, ಎರ್ನಾಕುಲಂ

Advertisement

Udayavani is now on Telegram. Click here to join our channel and stay updated with the latest news.

Next