ಭೋಪಾಲ್: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬುಲ್ಡೋಜರ್ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಆಂಬುಲೆನ್ಸ್ ಬಾರದ ಕಾರಣ, ಅನಿವಾರ್ಯವಾಗಿ ಜೆಸಿಬಿಯಲ್ಲಿ ಆತನನ್ನು ಸಾಗಿಸಲಾಗಿದ್ದು, ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಪ್ರಹಾರ ವ್ಯಕ್ತವಾಗಿದೆ.
ಇದನ್ನೂ ಓದಿ: ಉತ್ತರಪ್ರದೇಶ; ಮಸೀದಿಯಲ್ಲಿ ಮಕ್ಕಳ ಅಪಹರಣಕಾರರ ವದಂತಿ- ನಗರದಲ್ಲಿ ಉದ್ವಿಗ್ನತೆ
ಗೈರ್ಟಲೈ ಪ್ರದೇಶದ ನಿವಾಸಿಯಾಗಿರುವ ಮಹೇಶ್ ಬರ್ಮನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ. ಅಪಘಾತದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾದರೂ ಆಂಬುಲೆನ್ಸ್ ಅಪಘಾತದ ಸ್ಥಳಕ್ಕೆ ಬಂದಿರಲಿಲ್ಲ. ತೀವ್ರ ಗಾಯಗೊಂಡಿದ್ದ ವ್ಯಕ್ತಿ ದೇಹದಿಂದ ವಿಪರೀತ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆತನ ಜೀವ ಉಳಿಸಲು ಜನರು ಬೇರೆ ಮಾರ್ಗ ಹುಡುಕಲೇಬೇಕಾಗಿತ್ತು. ಹೀಗಾಗಿ ಪುಷ್ಪೇಂದ್ರ ಎಂಬವರು ಗಾಯಾಳುವನ್ನು ಜೆಸಿಬಿಯ ಮುಂಭಾಗದ ಲೋಡರ್‌ನಲ್ಲಿ ಮಲಗಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ.
ಇದೀಗ ಬುಲ್ಡೋಜರ್‌ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವಿಡಿಯೋ ವೈರಲ್ ಆಗಿದ್ದು, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಬಜೆಟ್ ಮೀಸಲಿಡುವ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಪ್ರಹಾರ ವ್ಯಕ್ತವಾಗಿದೆ.