Advertisement

“Bulldozer’ justice: ಉ.ಪ್ರ.ಯೋಗಿ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

08:30 AM Oct 23, 2024 | Team Udayavani |

ಲಕ್ನೋ: “ಬುಲ್ಡೋಜರ್‌ ನ್ಯಾಯ’ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆ ತೆಗೆದುಕೊಂಡಿದೆ.

Advertisement

“ನಮ್ಮ ನಿರ್ದೇಶನಗಳನ್ನೂ ಮೀರಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ ಎಂದು ರಾಜ್ಯ ಸರಕಾರಗಳು ಭಾವಿಸಿದರೆ ಅವುಗಳದ್ದೇ ಆಯ್ಕೆ’ ಎಂದು ತಾಕೀತು ಮಾಡಿದೆ.

ಅ.13ರಂದು ಬಹ್ರೈಚ್‌ ಗಲಭೆ ಪ್ರಕರಣದ ಆರೋಪಿಯೊಬ್ಬನ ನಿವಾಸ ಕೆಡವಿ ಹಾಕಲು ನೀಡಲಾಗಿದ್ದ ನೋಟಿಸ್‌ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಪೀಠ ಅಕ್ರಮ ಕಟ್ಟಡಗಳ ತೆರವಿಗೂ ನೋಟಿಸ್‌ಗೆ ಸ್ಪಂದಿಸಲು 15 ದಿನಗಳ ಮಿತಿ ನೀಡಬೇಕು ಸರಕಾರಕ್ಕೆ ಸೂಚಿಸಿದ್ದೇವೆ. ಮುಂದಿನ ವಿಚಾರಣೆ ವರೆಗೆ ಕ್ರಮ ಬೇಡ ಎಂದು ಯೋಗಿ ಸರಕಾರಕ್ಕೆ ಕೋರ್ಟ್‌ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next