Advertisement

Madhya Pradesh: ಬುಲ್ಡೋಜರ್ ಕಾರ್ಯಾಚರಣೆ ಶುರು ಮಾಡಿದ ನೂತನ ಸಿಎಂ ಯಾದವ್

09:25 PM Dec 14, 2023 | Team Udayavani |

ಭೋಪಾಲ್ : ಅಧಿಕಾರ ಸ್ವೀಕರಿಸಿ ವಾರದ ಒಳಗೆ ಉತ್ತರಪ್ರದೇಶ ಮಾದರಿಯಲ್ಲೇ ಮಧ್ಯಪ್ರದೇಶದಲ್ಲಿ ಸಿಎಂ ಮೋಹನ್ ಯಾದವ್ ಅವರು ಬುಲ್ಡೋಜರ್ ಕಾರ್ಯಾಚರಣೆ ಶುರು ಮಾಡಿಸಿದ್ದಾರೆ.

Advertisement

ಮೋಹನ್ ಯಾದವ್ ಅವರು ಗುರುವಾರ (ಡಿ14) ಭೋಪಾಲ್‌ನಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಠಾಕೂರ್ ಅವರ ಮೇಲೆ ದಾಳಿ ಮಾಡಿದ ವ್ಯಕ್ತಿಯ ಮನೆ ಮೇಲೆ ಬುಲ್ಡೋಜರ್ ಕ್ರಮಕ್ಕೆ ಆದೇಶಿಸಿದ್ದಾರೆ. ಬಿಜೆಪಿ ನಾಯಕನ ಕೈಗಳನ್ನು ಕತ್ತರಿಸಿದ ಆರೋಪದ ಮೇಲೆ ಫಾರೂಖ್ ರೈನ್ ಅಲಿಯಾಸ್ ಮಿನ್ನಿ ಯ ಮನೆಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಮತ್ತು ಭೋಪಾಲ್ ಕಲೆಕ್ಟರ್ ಸಮ್ಮುಖದಲ್ಲಿ ಕೆಡವಲಾಯಿತು.

ಭೋಪಾಲ್ ನ ಜನತಾ ಕಾಲೋನಿಯಲ್ಲಿರುವ ಫಾರೂಖ್ ರೈನ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಡಿಸೆಂಬರ್ 3 ರಂದು ಬಿಜೆಪಿ ಕಾರ್ಯಕರ್ತ ದೇವೇಂದ್ರ ಠಾಕೂರ್ ಮೇಲೆ ನಾಲ್ವರು ಆರೋಪಿಗಳೊಂದಿಗೆ ಹಲ್ಲೆ ನಡೆಸಿ ಕೈಯನ್ನು ಕತ್ತರಿಸಿದ್ದ. ಪ್ರಕರಣದಲ್ಲಿ ಐವರು ಆರೋಪಿಗಳಾದ ಫಾರೂಖ್, ಅಸ್ಲಂ, ಶಾರುಖ್, ಬಿಲಾಲ್ ಮತ್ತು ಸಮೀರ್ ಎಂಬವರನ್ನು ಬಂಧಿಸಲಾಗಿದೆ.

ಮೋಹನ್ ಯಾದವ್ ಅವರು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬುಲ್ಡೋಜರ್‌ ಕಾರ್ಯಾಚರಣೆ ಇದಾಗಿದೆ. ಅಧಿಕಾರ ಸ್ವೀಕರಿಸಿದ ನಂತರ ಒಂದರ ಹಿಂದೆ ಒಂದರಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ಅವಧಿಯಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಹಲವು ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next