Advertisement

ಸಾಗರ: 10 ಅಡಿ ಆಳದ ಸಂಪಿಗೆ ಬಿದ್ದ ಗೂಳಿಯ ರಕ್ಷಣೆ

03:53 PM Jul 12, 2022 | Suhan S |

ಸಾಗರ: ನಗರಸಭೆ ವ್ಯಾಪ್ತಿಯ 31ನೇ ವಾರ್ಡಿನ ಎಸ್‌ಎನ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂಭಾಗದ 10 ಅಡಿ ಆಳದ ಸಂಪಿನಲ್ಲಿ ಕಾಲು ಜಾರಿ ಬಿದ್ದಿದ್ದ ಗೂಳಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಜೀವಂತವಾಗಿ ಹೊರತೆಗೆಯುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

Advertisement

ಎಸ್‌ಎನ್ ನಗರದ ಮಧು ಎನ್ನುವವರ ಸಂಪಿನಲ್ಲಿ ಆಕಸ್ಮಿಕವಾಗಿ ಗೂಳಿ ಬಿದ್ದಿದ್ದು ಮೇಲೆ ಬರಲು ಪರದಾಟಪಟ್ಟಿರುವ ಘಟನೆ ನಡೆದಿದೆ. ಮನೆ ಮಾಲೀಕ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಗೂಳಿಯನ್ನು ಹೊರ ತೆಗೆದಿದ್ದಾರೆ.

ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಿಡದೆ ಭಾರಿ ಮಳೆ ಆಗುತ್ತದೆ. ಈ ಸಂದರ್ಭದಲ್ಲಿ ಅನಾಹುತಗಳು ಆಗೋದು ಹೆಚ್ಚು. ಅದರಲ್ಲೂ ಸಾಗರ ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಮುಂಭಾಗದಲ್ಲಿ ತೆರೆಯಲಾಗಿರುವ ಬಾವಿಗಳು ಹಾಗೂ ಸಂಪು ಮುಚ್ಚದೇ ಇರುವುದು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ತೆರೆಯಲಾಗಿರುವ ಬಾವಿಗಳು ಹಾಗೂ ಸಂಪು ಪರಿಶೀಲನೆ ನಡೆಸಿ ಕ್ರಮ ಜರುಗಿಸುವ ಮೂಲಕ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು. ಇನ್ನು ನಿರ್ಮಾಣ ಹಂತದ ಕಟ್ಟಡಗಳ ಮಾಲೀಕರು ತೆರೆದಿರುವ ಸಂಪನ್ನು ಮುಚ್ಚಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದೆ ಇರುವ ರೀತಿ ನೋಡಿಕೊಳ್ಳಬೇಕು ಎಂದು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ. ತಿಮ್ಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸಂತೋಷ್ ಬಿ., ಜಯಂತ್ ಎಚ್.ಡಿ., ಆನಂದ ಕಡ್ಡರ್, ಪ್ರಕಾಶ್ ಈಳಗೇರ, ಸತೀಶ್‌ಕುಮಾರ್, ಶ್ರೀನಿವಾಸ್ ದೇಸಳ್ಳಿ, ಶಿವಾನಂದ ಸ್ವಾಮಿ, ಶ್ರೀಧರ್ ಎನ್.ಡಿ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next