Advertisement

ಉದ್ದ ಕುತ್ತಿಗೆ ಮರಕುಟುಕ

01:01 PM Aug 04, 2018 | |

ಈ ಹಕ್ಕಿ ನಡೆಸುವ ಸಂಭಾಷಣೆ ಮತ್ತೂಂದು ಕೌತುಕ. ಹೇಗೆಂದರೆ, ಮರವನ್ನು ಕುಟ್ಟಿ, ಶಬ್ದ ಹೊರಡಿಸುವ ಮೂಲಕ ಇತರ ಸಹವರ್ತಿಗಳೊಂದಿಗೆ ಸಂಭಾಷಿಸುತ್ತದೆ. ಇದರ ಮೂಲಕವೇ ತನ್ನ ಸಂಗಾತಿಯನ್ನು ಘೋಷಣೆ ಮಾಡುವುದು. ವೈರಿಗಳಿಗೆ ಎಚ್ಚರಿಕೆ ಕೂಡುವುದೂ ಕೂಡ ಮರವನ್ನು ಕುಟ್ಟಿಯೇ. Eurasian Wryneck-(Jynx torquilla)  M  Bull Bull +

Advertisement

ಇದು ಮರಕುಟುಕ “ಪಿಸಿಡಿಯಾ’ ಕುಟುಂಬಕ್ಕೆ ಸೇರಿದ ಪಕ್ಷಿ.  ಯುರೋಪ್‌ ಮತ್ತು ಏಷಿಯಾ ಖಂಡದಲ್ಲಿ ಈ ಜಾತಿಯ ಹಕ್ಕಿ ಇದೆ. ಇದು ತನ್ನ ಕತ್ತನ್ನು ಮುಂದಕ್ಕೆ ಚಾಚುವುದು, ಆಚೆ ಈಚೆ, ತಿರುಗಿಸುವುದು, ಮೊದಲಾದ ವಿಶೇಷ

ಚಲನೆಯಿಂದಲೇ ಆಕರ್ಷಿಸುತ್ತದೆ. ಈ ಜಾತಿಯ ಹಕ್ಕಿಗಳು ಆಸ್ಟ್ರೇಲಿಯಾ , ಮಡಗಾಸ್ಕರ್‌ನಲ್ಲಿ ಮಾತ್ರವಲ್ಲ, ಅತ್ಯಂತ ಶೀತ ಪ್ರದೇಶವಾದ ಕಾಶ್ಮೀರದಲ್ಲೂ ಕಾಣಸಿಗುತ್ತವೆ. ಬೆಟ್ಟ , ಗುಡ್ಡ, ಹುಲ್ಲುಗಾವಲು, ಇರುವೆಗಳಿರುವ ಜಾಗ ಇವಕ್ಕೆ ತುಂಬಾ ಇಷ್ಟ. ಮರ ಕೊರೆವ ಹುಳು -ಅದರಲ್ಲೂ ಭಿನ್ನ ಜಾತಿಯ ಇರುವೆಗಳೇ ಇದರ ಆಹಾರ. ಕೆಲವೊಮ್ಮೆ ಬಯಲು ಪ್ರದೇಶದಲ್ಲೂ ನೆಲದಮೇಲೆ ಓಡಾಡಿಕೊಂಡು -ನೆಲವನ್ನು ಚುಂಚಿನಿಂದ ಕುಕ್ಕಿ, ಅಲ್ಲಿರುವ ಹುಳಗಳನ್ನು, ಅವುಗಳ ಮೊಟ್ಟೆಗಳನ್ನು ತಿನ್ನುತ್ತವೆ. 

ಮರದ ದಿಮ್ಮಿ, ಟೊಂಗೆ, ಇಲ್ಲವೇ  ನೆಲ , ಒರಲೆ ಹುತ್ತ, ಅಲ್ಲಿರುವ ಒರಲೆ ಹುಳ, ಅವುಗಳ ಮೊಟ್ಟೆಗಳನ್ನು ತಿನ್ನುತ್ತವೆ.  ಮರಿಗಳಿಗೆ ರೆಕ್ಕೆ ಬಂದಾಗ ಮಾಡುವ ಮೊದಲ ಕೆಲಸ ಮಣ್ಣನ್ನು ತನ್ನ ಚುಂಚಿನಿಂದ ಕೆದಕಿ, ಅಲ್ಲಿರುವ ಹುಳಗಳನ್ನು ತಿನ್ನುವುದು. ಈ ಕುಟುಂಬದ ಎಲ್ಲಾ ಹಕ್ಕಿಗಳು ಹೀಗೆ ಹುಳ ತಿನ್ನುವುದಕ್ಕೆ ಪ್ರಸಿದ್ಧಿ ಪಡೆದಿವೆ. ಗುಂಪಿನ ಎಲ್ಲಾ ಹಕ್ಕಿಗಳ ದೇಹರಚನೆ ಒಂದೇ. ಅದಲ್ಲದೇ ಇವು ಬೇಟೆ ಆಡುವ ಪರಿ, ಹುಳಗಳನ್ನು ಅನ್ವೇಶಿಸುವ ರೀತಿ ,ಕೆಲವೊಮ್ಮೆ ಮರದ ದಿಮ್ಮಿ ಕುಟ್ಟಿ ಅಲ್ಲಿರುವ ಹುಳು ಹೊರಗೆ ಬರುವಂತೆ ಮಾಡಿ- ಅದನ್ನು ಕಬಳಿಸುವ ಮೂಲಕ ತನ್ನ ಆಹಾರವನ್ನು ದೊರಕಿಸಿಕೊಳ್ಳುತ್ತದೆ. 

ಇವುಗಳ ಕಾಲಿನ ರಚನೆ -ಕೆಲವೊಮ್ಮೆ ಚಿಕ್ಕ ಕಾಲು ಇರುತ್ತದೆ. ಈ ಗುಂಪಿನ ಕೆಲವು ಹಕ್ಕಿಗಳಲ್ಲಿ ಕಾಲು ಸ್ವಲ್ಪ ಉದ್ದವಾಗಿರುತ್ತದೆ.  ಈ ಪಕ್ಷಿಯ ಕಾಲಿನಲ್ಲಿ ಮುಂದೆ ಎರಡು-ಹಿಂದೆ ಎರಡು ಬೆರಳುಗಳಿವೆ. ಮೋಟು ಇಲ್ಲವೇ ಕೆಲವು ಪ್ರಬೇಧದಲ್ಲಿ ಉದ್ದ ಬಾಲ ಕೂಡ ಕಾಣಬಹುದು.  ಈ ಬಾಲವನ್ನು ಮರ ಏರಲು ಮೂರನೆ ಕಾಲಿನಂತೆ ಉಪಯೋಗಿಸುವುದೂ ಉಂಟು. ಮರಗಳ ಟೊಂಗೆಯ ಮೇಲೆ ಸರಾಗವಾಗಿ ಓಡಾಡುವುದು ಇದರ ವಿಶೇಷತೆ.

Advertisement

ಈ ಹಕ್ಕಿ ನಡೆಸುವ ಸಂಭಾಷಣೆ ಮತ್ತೂಂದು ಕೌತುಕ. ಹೇಗೆಂದರೆ, ಮರವನ್ನು ಕುಟ್ಟಿ, ಶಬ್ದ ಹೊರಡಿಸುವ ಮೂಲಕ ಇತರ ಸಹವರ್ತಿಗಳೊಂದಿಗೆ ಸಂಭಾಷಿಸುತ್ತದೆ. ಇದರ ಮೂಲಕವೇ ತನ್ನ ಸಂಗಾತಿಯನ್ನು ಘೋಷಣೆ ಮಾಡುವುದು. ವೈರಿಗಳಿಗೆ ಎಚ್ಚರಿಕೆ ಕೂಡುವುದೂ ಕೂಡ ಮರವನ್ನು ಕುಟ್ಟಿಯೇ. 

ಇದು ಬುಲ್‌ ಬುಲ್‌ ಹಕ್ಕಿಯಷ್ಟು ದೊಡ್ಡದಿದೆ. ಚುಂಚು ಮಾತ್ರ ಚಿಕ್ಕದು. ಇತರೆ ಮರಕುಟಕಗಳಿಗೆ ಹೋಲಿಸಿದರೆ, ಅದರಷ್ಟು ದೊಡ್ಡದಾದ, ಚೂಪಾದ, ಕೊರೆಯಲು ಬೇಕಾದ ಉದ್ದವಾದ ಚುಂಚು ಇದಕ್ಕಿಲ್ಲ. ಆದರೆ ಚುಂಚು ಬಹಳ ಚೂಪಾಗಿರುವುದರಿಂದ ಸಣ್ಣ ಇರುವೆಗಳನ್ನೂ ಹಿಡಿದು ತಿನ್ನಲು ಸುಲಭವಾಗಿದೆ. 

ನಾಲಿಗೆ ಗರಗಸವೇ.  ಇರುವೆ, ಗೊದ್ದದ ಗೂಡುಗಳಿಗೆ ನಾಲಿಗೆ ಚಾಚಿ ಅವುಗಳನ್ನು ಹಿಡಿದು ತಿನ್ನುತ್ತವೆ. ಇದರ ಮೈ ಬಣ್ಣ ,ರೆಕ್ಕೆ ಮತ್ತು ಬಾಲದಲ್ಲಿ ಚಿತ್ತಾರದ ರೇಖೆಗಳಿವೆ.  ಚುಂಚಿನಿಂದ ಆರಂಭಿಸಿ ಕಣ್ಣಿನ ಸುತ್ತ ಸ್ವಲ್ಪ ದಟ್ಟವಾದ ಬಣ್ಣವಿದೆ. 

ಕುತ್ತಿಗೆ ಹಿಂಭಾಗದ ರೇಖೆ ದಟ್ಟ ಬಣ್ಣದಿಂದ ಕೂಡಿದೆ. ಅಲ್ಲದೇ, ರೆಕ್ಕೆಯ ಬುಡದಲ್ಲಿ ಮತ್ತು ರೆಕ್ಕೆ ತುದಿಯ ಅಂಚಿನಲ್ಲೂ ಸಹ -ಕಂದು ಗಪ್ಪು ಬಣ್ಣದ ರೇಖೆ ಇದೆ. ಕುತ್ತಿಗೆ ಅಡಿಯಲ್ಲಿ ಅಡ್ಡ-ಅಡ್ಡ ಗೆರೆ ತಿಳಿ ಕೆನೆಬಣ್ಣದ ಮೇಲೆ ಎದ್ದು ಕಾಣುವುದು .ಇದರ ಹೊಟ್ಟೆಯ ಭಾಗ ತಿಳಿ ಕ್ರೀಂ ಬಣ್ಣದಿಂದ ಕೂಡಿದೆ. 

ಪಿ. ವಿ. ಭಟ್‌ ಮೂರೂರು 

Advertisement

Udayavani is now on Telegram. Click here to join our channel and stay updated with the latest news.

Next