Advertisement

ಮೂರು ವರ್ಷ ಅಗೆದು ರಸ್ತೆ ನಿರ್ಮಿಸಿದ!

03:45 AM Jan 13, 2017 | Team Udayavani |

ತಿರುವನಂತಪುರ: ಅನಾರೋಗ್ಯ ಎಂದರೆ ಸುಮ್ಮನೆ ಕೂರುವುದೇ ಹೆಚ್ಚು. ಆದರೆ, ಅರೆ ಪಾರ್ಶ್ವವಾಯು ಸಮಸ್ಯೆ ಇದ್ದಾಗ್ಯೂ ಕೇರಳದ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. 

Advertisement

ಶಶಿ (58) ತೆಂಗಿನ ಕಾಯಿ ಕೀಳುವ ವೃತ್ತಿ ನಡೆಸುತ್ತಿದ್ದು, ಮರದಿಂದ ಬಿದ್ದ ಪರಿಣಾಮ, 18 ವರ್ಷಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದರು. ಅವರ ಒಂದು ಕೈ ಮತ್ತು ಕಾಲು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಧಾನವಾಗಿ ಕಷ್ಟಪಟ್ಟು ನಡೆಯುತ್ತಾರೆ. 

ತಮ್ಮ ಇಂತಹ ಸ್ಥಿತಿಯ ಹಿನ್ನೆಲೆಯಲ್ಲಿ ಶಶಿ ಅವರು ಪಂಚಾಯತ್‌ಗೆ ಮೂರು ಚಕ್ರದ ವಾಹನಕ್ಕೆ ಕೇಳಿಕೊಂಡಿದ್ದರು. ಇದರಿಂದ ಸಣ್ಣ ವ್ಯಾಪಾರವನ್ನಾದರೂ ನಡೆಸಬಹುದು ಎನ್ನುವುದು ಅವರ ಆಲೋಚನೆಯಾಗಿತ್ತು. ಆದರೆ ಊರಾಚೆಗೆ ಇರುವ ಅವರ ಮನೆಗೆ ಸರಿಯಾದ ರಸ್ತೆ ಸಂಪರ್ಕವೇ ಇರಲಿಲ್ಲ. 

ಒಂದು ವೇಳೆ ಪಂಚಾಯತ್‌ ವಾಹನ ನೀಡಿದರೆ, ರಸ್ತೆ ಇಲ್ಲ ಎನ್ನುವ ಕಾರಣಕ್ಕೆ ಸಮಸ್ಯೆಯಾಗಬಾರದು ಎಂದು ಶಶಿ, ಅನಾರೋಗ್ಯದ ಹೊರತಾಗಿಯೂ 3 ವರ್ಷದ ಹಿಂದೆ ರಸ್ತೆ ಅಗೆಯಲು ಶುರುಮಾಡಿದ್ದರು. ಇದೀಗ ರಸ್ತೆ ಕೆಲಸ ಕೊನೆ ಹಂತಕ್ಕೆ ಬಂದಿದೆ. ಆದರೆ ಪಂಚಾಯ್ತಿಯಿಂದ ವಾಹನ ಬರಲಿಲ್ಲ. ಶಶಿ ಅವರ ಕಾರ್ಯ ಪಕ್ಕದ ನಿವಾಸಿಗಳಿಗೂ ಉಪಕಾರಿಯಾಗಿದೆ. ದಿನದ 6 ಗಂಟೆ ರಸ್ತೆ ಅಗೆಯುತ್ತಿದ್ದು ಅವರ ಕೆಲಸ ಖುಷಿ ತಂದಿದೆ. ತಾವು ಸಾಲದಲ್ಲಿ ಮುಳುಗಿದ್ದು, ಪಂಚಾಯ್ತಿಯಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next