Advertisement

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಕಟ್ಟಡ ಅನುಮತಿ ನೀಡುವಾಗ ಎಚ್ಚರ: ಜಿಲ್ಲಾಧಿಕಾರಿ

08:35 PM Jul 31, 2021 | Team Udayavani |

ಮಹಾನಗರ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ- 2019 ಕುರಿತ ಹೊಸ ಕರಡು ನಕ್ಷೆ ಅಂತಿಮ ಹಂತದಲ್ಲಿದ್ದು, ಪ್ರಸ್ತುತ ಸಂದರ್ಭ ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಮುಡಾ ತಮ್ಮ ಸರಹದ್ದಿನ ಜನರಿಗೆ ಮನೆ ಕಟ್ಟಿಸಲು ಅಥವಾ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವಾಗ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿ ಕಾರಿ ಡಾ| ರಾಜೇಂದ್ರ ಕೆ.ವಿ.  ಅವರು ತಿಳಿಸಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ- 2019 ಇದರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ಅವರು ವಹಿಸಿ

ದ್ದರು.  ಮಂಗಳೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ), ಮಂಗಳೂರು ಮಹಾ ನಗರ ಪಾಲಿಕೆ, ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆ, ಕೋಟೆಕಾರ್‌ ಪ. ಪಂ., ತಲಪಾಡಿ ಗ್ರಾ.ಪಂ.ಗಳು ಮನೆ ಮತ್ತು ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವಾಗ ಎಚ್ಚರಿಕೆ ವಹಿಸದಿದ್ದರೆ ಹಾಗೂ ಸಿಆರ್‌ಝಡ್‌ ನಿಯಮ ಉಲ್ಲಂಘನೆ ಮಾಡಿದರೆ ಮುಂದೆ ಎದುರಾಗಬಹುದಾದ ಎಲ್ಲ ಸಮಸ್ಯೆಗಳಿಗೆ ಈ ಸಂಸ್ಥೆಗಳೇ ಹೊಣೆ ಯಾಗಬೇಕಾದೀತು. ಮುಡಾ ಇದನ್ನು ಗಂಭೀರವಾಗಿ ಪರಿಗಣಿ ಸಬೇಕು ಎಂದರು.

ಪ್ರವಾಸೋದ್ಯಮಕ್ಕೆ ಒತ್ತು :

ಸಿಆರ್‌ಝಡ್‌ ಅಧಿಸೂಚನೆ ಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ದಿಶೆ ಯಲ್ಲಿ ನಮ್ಮಲ್ಲಿರುವ ಕುದ್ರು ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿ ಸಲಾಗಿದೆ ಎಂದರು.

Advertisement

ಮೀನುಗಾರರ ಪರವಾಗಿ ಮೊಗ ವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಯತೀಶ್‌ ಬೈಕಂಪಾಡಿ, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಐಸಾಕ್‌ ವಾಸ್‌, ಕಾನ್‌ ಫೆಡರೇಶನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಗೌರವ್‌ ಹೆಗ್ಡೆ, ನವಮಂಗಳೂರು ಬಂದರು ಮತ್ತು ಎಂಎಸ್‌ರkುಡ್‌ ಪ್ರತಿ ನಿಧಿಗಳು, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ| ದಿನೇಶ್‌ ಕುಮಾರ್‌ ವೈ.ಕೆ. ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮಹೇಶ್‌ ಕುಮಾರ್‌ ಅವರು ಸಿಆರ್‌ಝಡ್‌ ಅಧಿಸೂಚನೆ- 2019 ಮತ್ತು ಕರಡು ನಕ್ಷೆಯ ವಿವರ ನೀಡಿದರು.

ಆಕ್ಷೇಪ, ಸಲಹೆಗಳಿದ್ದರೆ ಲಿಖೀತವಾಗಿ ಸಲ್ಲಿಸಿ :

ಕರಡು ನಕ್ಷೆಗೆ ಸಂಬಂಧಿಸಿದ ಆಕ್ಷೇಪ, ಸಲಹೆಗಳನ್ನು ಲಿಖೀತ ವಾಗಿ ಸಲ್ಲಿಸುವಂತೆ ವಿನಂತಿಸಿದ ಜಿಲ್ಲಾಧಿಕಾರಿಗಳು ಆಕ್ಷೇಪ, ಸಲಹೆ- ಸೂಚನೆಗಳನ್ನು ಪರಿಶೀಲಿಸಿ ಮುಂದಿನ 3-4 ತಿಂಗಳುಗಳಲ್ಲಿ ಅಂತಿಮ ನಕ್ಷೆಯನ್ನು ಸಿದ್ಧಪಡಿ ಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next