Advertisement
ಕಟ್ಟಡ
Related Articles
Advertisement
ಹಸ್ತಾಂತರವಾಗಿಲ್ಲ
ಎಸಿ, ಸ್ಟ್ರೆಚರ್, 6 ಫ್ಯಾನ್, ವಯರಿಂಗ್, ಮರದ 6 ಬಾಗಿಲು, ಬೋರ್ಡ್, ನೆಲಕ್ಕೆ ಟೈಲ್ಸ್ ಇತ್ಯಾದಿ ಎಲ್ಲ ಅಳವಡಿಸಿ ಸಿದ್ಧವಾಗಿದೆ. ಆದರೆ ಹಸ್ತಾಂತರವಾಗಿಲ್ಲ.
ಅವಶ್ಯ
ಕಟ್ಟಡ ಪೂರ್ಣವಾಗಿದ್ದರೂ ಅದರೊಳಗೆ ಚಿಕಿತ್ಸಾ ವಿಭಾಗಗಳು, ಡಯಾಗ್ನಸ್ಟಿಕ್ ಕೊಠಡಿ, ಹೊರರೋಗಿ ವಿಭಾಗ, ಸೌಂಡ್‌ಟ್ರೀಟೆಡ್ ಕೊಠಡಿ ಮೊದಲಾದವುಗಳ ನಿರ್ಮಾಣವಾಗಬೇಕಿದೆ. ಇದನ್ನು ನಿರ್ಮಿಸಿಕೊಡಲು ರೋಟರಿ ಸಂಸ್ಥೆ ಮುಂದೆ ಬಂದಿದೆ. ವಾಕ್ ಶ್ರವಣ ಸಂಸ್ಥೆಯಿಂದ ಒಂದಷ್ಟು ಉಪಕರಣಗಳು ಬಂದಿವೆ. ಕಟ್ಟಡದೊಳಗೆ ಎಲ್ಲ ಸಿದ್ಧಗೊಂಡು ಅದಕ್ಕೆ ಅವಶ್ಯವುಳ್ಳ ವಾಕ್‌ಶ್ರವಣ ಚಿಕಿತ್ಸಾ ಉಪಕರಣಗಳನ್ನು ಅಳವಡಿಸಿದ ಬಳಿಕ ಉದ್ಘಾಟನೆಯಾಗಲಿದೆ.
ಮಂಜೂರು
ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಕೇಂದ್ರ ಆರೋಗ್ಯ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ಗೆ ಸಾರ್ವಜನಿಕರ ಹಿತಕ್ಕಾಗಿ ಔಟ್ರೀಚ್ ಸೇವಾ ಕೇಂದ್ರವನ್ನು ಕುಂದಾಪುರದಲ್ಲಿ ತೆರೆಯಬೇಕು ಎಂದು ಮನವಿ ಮಾಡಲಾಗಿತ್ತು. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಆರಂಭಕ್ಕೆ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಿತ್ತು. ಅವರ ಮನವಿಯಂತೆ ಮಂಜೂರಾದ ಈ ಕೇಂದ್ರ ಕುಂದಾಪುರ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿದೆ.
ನಿರ್ಮಾಣ ಪೂರ್ಣ: ಕುಂದಾಪುರ ಸರಕಾರಿ ಆಸ್ಪತ್ರೆಯ ಸಿಬಂದಿಯಾಗಿ ಪತ್ನಿ ವಿಜಯಾ ಬಾಯಿ ಸುದೀರ್ಘ ಸೇವೆ ನೀಡಿದ್ದರು. ಆಸ್ಪತ್ರೆಗೆ ಅಖಿಲ ಭಾರತ ಮಟ್ಟದ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಮಂಜೂರಾಗಿದ್ದನ್ನು ತಿಳಿಸಿ, ವೈದ್ಯರು, ಪ್ರತಾಪಚಂದ್ರ ಶೆಟ್ಟರು, ಶ್ರೀನಿವಾಸ ಶೆಟ್ಟರ ಮನವಿ ಮೇರೆಗೆ ಕಟ್ಟಡ ನಿರ್ಮಿಸಿದ್ದೇವೆ. ಗುಣಮಟ್ಟದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು ಯಂತ್ರೋಪಕರಣಗಳ ಅಳವಡಿಕೆ ನಂತರ ಉದ್ಘಾಟನೆಯಾಗಲಿದೆ. –ಶಿವರಾಮ ಪುತ್ರನ್, ಹಿರಿಯ ಸಮಾಜ ಸೇವಕರು
ನಿರ್ಮಾಣ ಪೂರ್ಣ: ಭಾರತ ವಾಕ್ ಶ್ರವಣ ಸಂಸ್ಥೆಯ ಔಟ್ರೀಚ್ ಸೆಂಟರ್ ಕಾರ್ಯನಿರ್ವಹಿಸಲಿದ್ದು ದಾನಿಗಳ ಮೂಲಕ ಕಟ್ಟಡ ನಿರ್ಮಾಣ ನಡೆದಿದೆ. ಈ ಹಿಂದೆ ಇಲ್ಲಿಯೇ ಸೇವೆ ಸಲ್ಲಿಸಿದ್ದ ದಿ| ವಿಜಯಾ ಬಾಯಿ ಅವರ ನೆನಪಿನಲ್ಲಿ ಅವರ ಪತಿ, ಮಕ್ಕಳು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ. ಈಗ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಸುಸಜ್ಜಿತವಾಗಿ ಕೇಂದ್ರವಾದ ಬಳಿಕ ಅಲ್ಲೇ ಚಿಕಿತ್ಸೆ ಆರಂಭಿಸಲಾಗುವುದು. –ಡಾ| ರಾಬರ್ಟ್ ರೆಬೆಲ್ಲೂ, ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ, ಸರಕಾರಿ ಉಪವಿಭಾಗ ಆಸ್ಪತ್ರೆ, ಕುಂದಾಪುರ