Advertisement
ಎಂಜಿವಿಸಿ, ವಿಬಿಸಿ, ಅಂಜುಮನ್ ಸಂಸ್ಥೆಯವರು ತಮ್ಮ ಆಸ್ತಿಯಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಪುರಸಭೆ ಅನುಮತಿನೀಡಿಲ್ಲ. ಅನುಮತಿ ಇಲ್ಲದೆ ಕಟ್ಟಡ ಕಾಮಗಾರಿ ಕಾನೂನು ಬಾಹಿರ. ಇದಕ್ಕೆ ಅವಕಾಶ ಕೊಡಬಾರದು. ಕಾಮಗಾರಿ ತಡೆಯಬೇಕು
ಎಂದು ದಲಿತ ಯುವ ಸೇನೆ ಅಧ್ಯಕ್ಷ ಪರಶುರಾಮ ಮುರಾಳ, ಮಹಾಂತೇಶ ದಡ್ಡಿ ಅವರು ಪುರಸಭೆಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳದಿದ್ದರೆ ಪುರಸಭೆ ಎದುರು ಪ್ರತಿಭಟಿಸುವ ಎಚ್ಚರಿಕೆಯನ್ನೂ
ಮುರಾಳ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಾಧಿಕಾರಿ ಗೋಪಾಲ ಕಾಸೆಯವರು ಸಂಬಂಧಿಸಿದವರಿಗೆ ನೋಟಿಸ್ ನೀಡಿ ಅನುಮತಿ ಪಡೆದುಕೊಂಡ ನಂತರವೇ ಕಟ್ಟಡ ಕೆಲಸ ಪ್ರಾರಂಭಿಸುವಂತೆ ಸೂಚಿಸಿದ್ದರು.
ಅಧ್ಯಕ್ಷ ಬಸನಗೌಡ ಪಾಟೀಲ, ಪಿಂಟು ಸಾಲಿಮನಿ ಅವರು ಪೊಲೀಸರ ಮಧ್ಯಪ್ರವೇಶವನ್ನೇ ಪ್ರಶ್ನಿಸಿ ಪಿಎಸೈ ಜೊತೆ ವಾಗ್ವಾದಕ್ಕಿಳಿದರು. ಇದನ್ನೂ ಓದಿ: ಬೈಕ್ ಗೆ ಜೆಸಿಬಿ ಢಿಕ್ಕಿಯಾಗಿ ಕಾರ್ಮಿಕ ಸಾವು: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
Related Articles
ದೂರು ಅರ್ಜಿ ಕೊಟ್ಟವರ ಮೇಲೆ ಗುಂಡಾ ಆ್ಯಕ್ಟ್ ಅದಾವು, ರೌಡಿ ಶೀಟ್ ಅದಾವು ಎಂದು ಅಂಜುಮನ್ ಸಂಸ್ಥೆಯವರು ಮತ್ತೇ ಕೆಣಕಿದ್ದು ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. ಅರ್ಜಿ ಕೊಟ್ಟವರ ರಕ್ಷಣೆಗೆ ಪುರಸಭೆ ಸದಸ್ಯ ಶಿವು ಶಿವಪುರ ಸೇರಿದಂತೆ ಕೆಲವರು ಧಾವಿಸಿ ಬಂದರು.
Advertisement
ಪರಿಸ್ಥಿತಿ ಅರಿತ ಉಪಾಧ್ಯಕ್ಷ ಗೋಲಂದಾಜ್ ಎದ್ದು ನಿಂತು ನೋಟಿಸ್ ಕೊಟ್ಟು 7 ದಿನ ಉತ್ತರ ನೀಡಲು ಅವಕಾಶ ಇದ್ದರೂ ನೋಟಿಸ್ ಕೊಟ್ಟ ಕೂಡಲೇ ಪೊಲೀಸ್ ಠಾಣೆಗೆ ಕರೆದದ್ದೇಕೆ ಎಂದು ಪ್ರಶ್ನಿಸಿ ವಿಷಯಾಂತರಕ್ಕೆ ಯತ್ನಿಸಿದರು. ಈ ವೇಳೆಗೊಂದಲ ಸೃಷ್ಟಿಯಾಗಿ ಯಾರ ಮಾತೂ ಸರಿಯಾಗಿ ಕೇಳದಂತಾಯಿತು. ನೋಟಿಸ್‌ಗೆ ಉತ್ತರ: ಬಹು ಹೊತ್ತಿನವರೆಗೂ ಇದೇ ವಿಷಯದ ಮೇಲೆ ಚರ್ಚೆ ನಡೆದರೂ ಕಾನೂನು ಬಿಟ್ಟು ಏನೂ ಮಾಡುವಂತಿಲ್ಲ ಎನ್ನುವ ತೀರ್ಮಾನಕ್ಕೆ ಬಂದ ಮುಖ್ಯಾಧಿಕಾರಿ ಯಾವುದೇ ಆಸ್ತಿ ಇದ್ದರೂ ಕಟ್ಟಡ ಕಾಮಗಾರಿ ನಡೆಸಲು
ಪುರಸಭೆ ಅನುಮತಿ ಪಡೆದುಕೊಳ್ಳಲೇಬೇಕು. ಎಂಜಿವಿಸಿಯವರು, ವಿಬಿಸಿಯವರು ಒಪ್ಪಿದ್ದಾರೆ. ನಿಮ್ಮದ್ಯಾಕೆ ತಕರಾರು. ಕಾನೂನು ಎಲ್ಲರಿಗೂ ಒಂದೇ ಎಂದು ಗಟ್ಟಿಯಾಗಿ ಹೇಳಿದರು. ಕೊನೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರು ಸಿಟಿಎಸ್ ನಂಬರ್ 2552 ವಕ್ಫ್ ಆಸ್ತಿಯಾಗಿದ್ದು ಪರವಾನಗಿ ಪಡೆಯುವುದು ಅವಶ್ಯವಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರ ಪುರಸಭೆ ಕಚೇರಿಗೆ ತಲುಪಿಸಲಾಗುತ್ತದೆ ಎಂದು 30-12-2020ರಂದು ನೀಡಿದ ನೋಟಿಸ್‌ಗೆ ಉತ್ತರ ನೀಡುವುದಾಗಿ ಲಿಖೀತ
ಮನವಿ ಪತ್ರವನ್ನು ಮುಖ್ಯಾಧಿಕಾರಿಗೆ ಸಲ್ಲಿಸಿ ಕಾಲಾವಕಾಶ ಪಡೆದುಕೊಂಡರು.