Advertisement
ವಾಡಿಕೆಯಂತೆ ಈ ದಿನವೂ ಆತನ ಹೆಜ್ಜೆಗಳು ನ್ಯೂಪಡು³ವಿನ ಸೋಗೆ ಗುಡಿಸಲನ್ನು ಬಿಟ್ಟು ಅಂಗಳ ದಾಟಿ ಕಾಲುಹಾದಿಯನ್ನು ತುಳಿಯತೊಡಗಿದವು. ಆತನ ತಲೆಯ ಮೇಲಿದ್ದ ಖಾಲಿ ಕಿತ್ತಳೆಬುಟ್ಟಿಯನ್ನೇರಿ ಸಂಸಾರ ಹೊಣೆಯನ್ನು ನೆನಪಿಸುವವನಂತೆ ದಿನದ ಖ್ಯಾಲನ್ನು ಹಾಡುತ್ತ ಕೆಂಪಗೆ ಹೊಳೆಯುತ್ತ ಕುಳಿತಿದ್ದ, ಕಿತ್ತಳೆಯಂಥ ಉರುಟು ನೇಸರ. ಡಾಮರು ರಸ್ತೆಯನ್ನಾತ ತಲುಪಿದಾಗ ಅಲ್ಲೊಂದು ಇಲ್ಲೊಂದು ಮಾಲು ತುಂಬಿ ಭಾರವಾಗಿದ್ದ ದುರಂಧರ ಲಾರಿಗಳು ಒಂದು ಪಕ್ಕಕ್ಕೆ ವಾಲಿಕೊಂಡು ತೆವಳುತ್ತಿದ್ದವು. ಎಂದಿನಂತೆ ಇಂದೂ ಮಂಗಳೂರು ಬಸ್ಸನ್ನು ಹತ್ತಿ ಚಾಲಕನತ್ತ ಪರಿಚಯದ ಸಣ್ಣ ನಗುಬೀರಿ ಕುಳಿತು, ಕಿಟಕಿಯಾಚೆ ಚಲಿಸುವ ಅದೇ ಲೋಕವನ್ನು ಅದೇ ಕಂಗಳಿಂದ ದಿಟ್ಟಿಸತೊಡಗಿದ. ಅಲ್ಲಲ್ಲಿ ಹತ್ತುವವರನ್ನು ಹತ್ತಿಸಿಕೊಳ್ಳುತ್ತ, ಇಳಿಯುವವರನ್ನು ಇಳಿಸುತ್ತ ಬಸ್ಸು ಹಂಪನಕಟ್ಟೆಯ ಹಳೆಬಸ್‌ನಿಲ್ದಾಣದಲ್ಲಿ ಬಂದುನಿಂತಾಗ ಬೆಳ್ಳಂಬೆಳಗಾಗಿತ್ತು.
Related Articles
Advertisement
ಸೂರ್ಯಾಸ್ತದೊಂದಿಗೆ ನಿಧಾನವಾಗಿ ಕತ್ತಲು ಆವರಿಸಿಕೊಳ್ಳತೊಡಗಿತ್ತು. ಇಲ್ಲ! ನನಗೆ ಈಗ ಆದ ಮುಜುಗರ ಅವಮಾನ ನನ್ನ ಊರಿನ ಬಡಮಕ್ಕಳಿಗೆ ಆಗಲೇಬಾರದು. ಅವರು ತಲೆಯೆತ್ತಿ ಬಾಳಬೇಕು. ಹಾಗೆ ಬಾಳಬೇಕಾದರೆ ಅವರಿಗೆ ಸರಿಯಾದ ಶಿಕ್ಷಣ ಸಿಗಬೇಕು, ಅದಕ್ಕಾಗಿ ಶಾಲೆ ಬೇಕು. ಕಿತ್ತಳೆ ಮಾರಿಯಾದರೂ ಸರಿಯೇ, ನಾನು ಶಾಲೆ ತೆರೆಯಲೇಬೇಕು! ಎದೆಯಲ್ಲಿ ಈ ಅಮೂರ್ತ ಅಕ್ಷರಕನಸು ಹುಟ್ಟಿಕೊಂಡದ್ದೇ ತಡ, ತಲೆಬಾಗಿ ಸೊನ್ನೆಯಂತೆ ಕುಳಿತಿದ್ದವ ಸಟ್ಟ ಎದ್ದು ಕುಳಿತ !
ನಿತ್ಯ ಹೊಸ ನೇಸರನ ಉದಯ ಕಂಡು ಹೊರಡುವ ಆತನ ಪ್ಲಾಸ್ಟಿಕ್ ಚಪ್ಪಲಿಗಳ ಚರ್ ಚರ್ ಭಾಷೆಯು ಈಗ ಹಾದಿಬೀದಿಗಳಿಗೆಲ್ಲ ಪರಿಚಿತವಾಗಿವೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸರಕಾರಿ ಕಚೇರಿಯಿಂದ ಕಚೇರಿಗೆ, ಮನೆಯಿಂದ ಮನೆಗೆ ಅಲೆದ ಪರಿಣಾಮ ಬಾಸಿಂಗ ಕಟ್ಟಿಕೊಂಡ ಮದುಮಕ್ಕಳಂತೆ ನಿಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಈ ಛಲಬಿಡದ ತ್ರಿವಿಕ್ರಮನನ್ನು ಕಂಡೊಡನೆ ತಲೆಯೆತ್ತಿ ಸೆಲ್ಯೂಟ್ ಹೊಡೆಯುತ್ತವೆ, “ಕಾಲೇಜು ಯಾವಾಗ ಕಟ್ಟುವಿ?’ ಎಂದು ಹುಬ್ಬುಹಾರಿಸಿ ಕೇಳುತ್ತವೆ.
ಇದು ಕಲ್ಪಿತ ಕತೆಯಲ್ಲ. ನಿಸ್ವಾರ್ಥ, ಆತ್ಮವಿಶ್ವಾಸ ಹಾಗೂ ಛಲದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿರುವ, ಈಗ ಲೋಕಕ್ಕೇ ದಂತಕತೆಯಾಗಿರುವ ಈ ವ್ಯಕ್ತಿ ಹರೇಕಳದ ಹಾಜಬ್ಬ. ಇವರು ಸುಮಾರು ಮೂರು ದಶಕಗಳ ಹಿಂದೆ ವಿದೇಶಿಯರಿಂದ ಸಂತೆಯÇÉಾದ ಘಟನೆಯಿಂದ ಕಡುನೊಂದು ತನ್ನಂತೆ ತನ್ನೂರ ಬಡಮಕ್ಕಳಿಗೆ ಆಗಲೇಬಾರದು ಎಂಬ ನಿರ್ಧಾರ ಮಾಡಿ ಕಿತ್ತಳೆ ಮಾರಿದ ದುಡ್ಡಲ್ಲಿ ಹರೇಕಳದ ನ್ಯೂಪಡು³ವಿನಲ್ಲಿ ಸರಕಾರಿ ಶಾಲೆಗಳನ್ನು ತೆರೆದು ಲೋಕಕ್ಕೇ ಅಪರೂಪದ ಅಕ್ಷರಸಂತರಾದ ಹಟಯೋಗಿ. ದಿಲ್ಲಿಗ ಮಾಡಲಾಗದ್ದನ್ನು ಹಳ್ಳಿಗನೊಬ್ಬ ಮಾಡಿದ ಸಾಧನೆಯ ಯಶೋಗಾಥೆಯಿದು. .
ಹರೇಕಳವು ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಂದಾಯಗ್ರಾಮ. ಅಲ್ಲಿಯ ಪಂಜಿಮಾಡಿ ಕುಟ್ಟುಮಾಕ ಹಾಗೂ ಬಿ. ಫಾತಿಮಾ ದಂಪತಿಗಳ ಆರು ಮಕ್ಕಳಲ್ಲಿ ಹಾಜಬ್ಬನವರು ಮೂರನೆಯವರು. ಬೀಡಿಕಟ್ಟಿ ಬದುಕುತ್ತಿದ್ದ ಕಡು ಬಡಕುಟುಂಬ. ಶಾಲೆಯ ಮುಖವನ್ನೇ ಕಾಣದ ಮಕ್ಕಳೂ ಹೊಟ್ಟೆಬಟ್ಟೆಗಾಗಿ ತಮ್ಮ ಆರನೆಯ ವಯಸ್ಸಿನÇÉೇ ಬೀಡಿಕಟ್ಟಲಾರಂಭಿಸಿದ್ದವು. ಹದಿವಯಸ್ಸಿನಲ್ಲಿ , ಅಂದರೆ ಸುಮಾರು 1976ರಿಂದ ಹಾಜಬ್ಬರು ಹಂಪನಕಟ್ಟೆ ಹಳೆ ಬಸ್‌ಸ್ಟ್ಯಾಂಡ್ ಬಳಿ ಆರಂಭಿಸಿದ ಸಣ್ಣ ಅಲೆಮಾರಿ ಉದ್ಯಮ, ನಿತ್ಯ ಮುಂಜಾನೆ ರಖಂ ಹಣ್ಣು ವ್ಯಾಪಾರಿಗಳಿಂದ ಕಿತ್ತಳೆಹಣ್ಣುಗಳನ್ನು ಸಾಲಪಡೆದು ಬುಟ್ಟಿಹೊತ್ತು ಬಸ್ಸುಗಳಲ್ಲಿ ಸಂಜೆತನಕ ಮಾರುವುದು ಮತ್ತು ಕತ್ತಲಾಗುತ್ತಿದ್ದಂತೆ ಸಾಲ ತೀರಿಸಿ ಉಳಿದ ಕಾಸಿನೊಂದಿಗೆ ಮನೆ ಸೇರುವುದು. ಎರಡು ದಶಕಗಳ ಹಿಂದೆ ಹರೇಕಳದಲ್ಲಿದ್ದದ್ದು ಒಂದು ಖಾಸಗಿಶಾಲೆ. ಅಲ್ಲಿನ ಶೇಕಡ 75ರಷ್ಟು ಕುಟುಂಬಗಳು ಕಡು ಬಡಕೂಲಿಕಾರ್ಮಿಕ ಕುಟುಂಬಗಳು. ಬೀಡಿಕಟ್ಟುವ ಉದ್ಯಮವನ್ನೇ ನಂಬಿಕೊಂಡಿರುವ ಈ ಕುಟುಂಬಗಳ ಮಕ್ಕಳಿಗೆ ಹೊಟ್ಟೆಗೇ ಹಿಟ್ಟಿಲ್ಲ ,ಇನ್ನು ಖಾಸಗಿ ಶಾಲೆಗೆ ಶುಲ್ಕ ಕಟ್ಟುವ ಮಾತು ಎಲ್ಲಿಂದ ಬರಬೇಕು? ಹಾಜಬ್ಬರ ಕೈಯಲ್ಲಿ ಕವಡೆಕಾಸಿಲ್ಲ, ಆದರೆ, ಮನದಲ್ಲಿ ಸಾಧಿಸಲೇಬೇಕೆಂಬ ಬತ್ತದ ಛಲ. ಆಗ ಉಳ್ಳಾಲದ ಶಾಸಕರಾಗಿದ್ದ ಯು. ಟಿ. ಫರೀದರ ಮನೆಗೆ ಹೋಗಿ ತಮ್ಮ ಆಸೆಯನ್ನು ತಿಳಿಸಿದರು. ಬಹಿರಂಗದ ಅರುವೆ ಹಳೇ ಮಾಸಲು ಬಿಳಿ ಅಂಗಿ, ಅಡ್ಡ ಸುತ್ತಿಕೊಂಡಿರುವ ಹಳೇ ಬಿಳಿ ಮುಂಡು ! ಅಂತರಂಗದ ಅರಿವೆ ಮಾನವೀಯ ಕಳಕಳಿ ! ಬೆರಗಾದ ಶಾಸಕರು ಆಶ್ವಾಸನೆ ಮಾತ್ರವಲ್ಲ ತಮ್ಮಿಂದಾದ ಎಲ್ಲ ಬೆಂಬಲವನ್ನು ನೀಡಿದರು. ಜಿÇÉಾ ಪಂಚಾಯತ್ ಸದಸ್ಯರಾಗಿದ್ದ ಅಬ್ದುಲ್ ಅಜೀಜರು ಕೂಡ ಸಹಾಯಹಸ್ತ ಚಾಚಿದರು. ಹಾಜಬ್ಬರು ಸರಕಾರಿ ಕಚೇರಿಗಳಿಗೆ ಎಡೆಬಿಡದೆ ಅಲೆದಾಡಿದ ಫಲವಾಗಿ 1999ರಲ್ಲಿ ನ್ಯೂಪಡು³ಗೆ ಸರಕಾರಿ ಪ್ರಾಥಮಿಕಶಾಲೆ ಮಂಜೂರಾಯಿತು. ಮತ್ತೆ ಮಕ್ಕಳ ದಾಖಲಾತಿಗಾಗಿ ಮನೆ ಮನೆ ತಿರುಗಾಟ. ಮದ್ರಸದ ಕೊಠಡಿಯೊಂದರಲ್ಲಿ ಚಾಪೆ ಹಾಸಿ ಇಪ್ಪತ್ತೆಂಟು ಮಕ್ಕಳಿಗೆ ಪಾಠ ಶುರು. ಮತ್ತೆ ಕಟ್ಟಡಕ್ಕೆ ಬೇಕಾದ ಜಾಗಕ್ಕಾಗಿ ಅಲೆದಾಡಿ 40 ಸೆಂಟ್ಸ್ ಜಾಗ ಸರಕಾರದಿಂದ ಮಂಜೂರು. ಶಾಲಾಕಟ್ಟಡ ನಿರ್ಮಾಣಕ್ಕಾಗಿ ಚಪ್ಪಲಿ ಸವೆಸಿ ಸರಕಾರದ ಅನುದಾನ ಮಾತ್ರವಲ್ಲ; ರಾಷ್ಟ್ರೀಕೃತ ಬ್ಯಾಂಕ್, ಸಂಘಸಂಸ್ಥೆ, ಧಾರ್ಮಿಕ ಸ್ಥಾವರ, ಕಂಪೆನಿಗಳು ಹಾಗೂ ದಾನಿಗಳಿಂದ ಇದುವರೆಗೆ 50 ಲಕ್ಷಕ್ಕೂ ಮೀರಿ ದೇಣಿಗೆ ಸಂಗ್ರಹ ಮಾಡಿ¨ªಾರೆ. ಶಾಲೆಗಳ ಭಿತ್ತಿಗಳಲ್ಲಿ ದಾನಿಗಳ ಹೆಸರುಗಳು ದಾಖಲಾತಿಯಾಗಿವೆ, ಎಲ್ಲೂ ಹಾಜಬ್ಬರ ಹೆಸರಿಲ್ಲ, ಹಾಕಲು ಅವರೇ ಒಪ್ಪುತ್ತಿಲ್ಲ. ಓದುಬರಹ ಬಾರದ ಹಾಜಬ್ಬ ಪ್ರತಿಯೊಂದು ದಾನಿಯ ಹೆಸರನ್ನು ಹಾಗೂ ದಾನಮೊತ್ತವನ್ನು ಹೃದಯದ ಪುಟಗಳಲ್ಲಿ ಕೃತಜ್ಞತೆಯಿಂದ ನಿತ್ಯ ನೆನೆದು ನೆನಪಾಗಿಸಿಕೊಂಡಿ¨ªಾರೆ. ಇವತ್ತು ದ. ಕ. ಜಿ. ಪ. ಸಂಯುಕ್ತ ಪ್ರೌಢಶಾಲೆಯ ಹೆಸರಲ್ಲಿ ಒಂದು ಎಕರೆ ಮೂವತೂ¾ರುವರೆ ಸೆಂಟ್ಸ್ ಜಮೀನು ಇದೆ. ಈ ಜಮೀನನ್ನು ಹಾಜಬ್ಬನವರು ಖರೀದಿಸಿದ್ದು ತಮ್ಮ ಪ್ರಶಸ್ತಿಗಳ ಮೊತ್ತದಿಂದ. 2001ರ ಆಗಸ್ಟ್ ತಿಂಗಳಲ್ಲಿ ಉದ್ಘಾಟನೆಯಾದ ಶಾಲಾಕಟ್ಟಡವು ಮಕ್ಕಳ ದಿನಾಚರಣೆಯಂದು ಮಕ್ಕಳ ಒಡ್ಡೋಲಗದೊಂದಿಗೆ ಜೀವಪಡೆದು ಉಸಿರಾಡತೊಡಗಿತು. 2008ರಲ್ಲಿ ಪ್ರೌಢಶಾಲೆಯೂ ಆರಂಭವಾಯಿತು. ಇದೀಗ ಕಾಲೇಜಿನ ಆಸೆ ಅವರ ಕಣ್ಣ ತುದಿಯಲ್ಲಿ ಇಣುಕುತ್ತಿದೆ.
.
ಇತ್ತೀಚೆಗೆ ಬೀಯಿಂಗ್ ಸೋಶಿಯಲ್ ಸಂಸ್ಥೆ ಅವರನ್ನು ಕರೆಸಿದಾಗ ಕುತೂಹಲದಿಂದ ಬಂದಿದ್ದ ಉಡುಪಿಯ ಜನತೆ ಇವರ ಸೀದಾಸಾದಾ ಹೃದಯ ಭಾಷೆಗೆ ತಲೆಬಾಗಿತು. ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ಇವರೊಂದಿಗೆ ನಡೆಸಿದ ಮಾತುಕತೆಯಲ್ಲಿ, ಹಾಜಬ್ಬರು, “ದೇವರು ಒಬ್ಬನೇ. ಸೂರ್ಯ ಎಲ್ಲರಿಗೂ ಬೆಳಕು ಕೊಡುತ್ತಾನೆ, ಅವನಿಗೆ ಬೇಧವಿಲ್ಲ. ನನಗೆ ಎಲ್ಲ ಜಾತಿಯವರೂ ಶಾಲೆ ಕಟ್ಟಲು ಸಹಾಯ ಮಾಡಿ¨ªಾರೆ. ನಾನು ಈಗ ಇದ್ದೇನೆ, ನಾಳೆ ಇರುತ್ತೇನಾ ನಂಗೆ ಗೊತ್ತಿಲ್ಲ. ಇವತ್ತು ನನ್ನಿಂದಾದ ಒಳ್ಳೆಯ ಕೆಲಸ ಮಾಡುತ್ತೇನೆ. ಕೊನೆಗೆ ಉಳಿಯುವುದೇನು? ಈ ನೀರು ಮತ್ತು ಮಣ್ಣು ಮಾತ್ರ !’
ಅಬ್ಬಬ್ಬ ! ಹಾಜಬ್ಬ ! – ಕಾತ್ಯಾಯಿನಿ ಕುಂಜಿಬೆಟ್ಟು