Advertisement

ಜ್ಞಾನದ ತಳಹದಿ ಮೇಲೆ ಭವಿಷ್ಯ ನಿರ್ಮಿಸಿಕೊಳ್ಳಿ

04:20 PM Mar 24, 2017 | Team Udayavani |

ಕಲಬುರಗಿ: ಜ್ಞಾನದ ತಳಹದಿ ಮೇಲೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದು ಪ್ರಜ್ಞಾವಂತರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಸಚಿವ ಡಾ| ಸಿ.ಎಸ್‌. ಪಾಟೀಲ ಹೇಳಿದರು. 

Advertisement

ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ಭಾರತ ರತ್ನ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಜ್ಞಾನ ಎನ್ನುವುದು ಸಂಪಾದಿಸಿಕೊಂಡಷ್ಟು ಹೆಚ್ಚುತ್ತದೆ.

ಅದಿಲ್ಲದೆ ಗಳಿಸಿದ ಸಂಪತ್ತು ಹೆಚ್ಚು ದಿನ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರಯತ್ನ ಮಾಡಬೇಕು. ಅದಕ್ಕಾಗಿ ಪಠ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಕಲಿಯಬೇಕು ಎಂದರು. 

ಮುಖ್ಯ ಬಾಷಣಕಾರರಾಗಿದ್ದ ಬೀದರಿನ ಸಾಹಿತಿ ಎಸ್‌.ಎಮ್‌.ಜಾನವಾಡಕರ ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ್‌ ರ ಚಿಂತನೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮೂಢ ನಂಬಿಕೆ ಬಿಟ್ಟು, ಸನ್ಮಾರ್ಗದ ಬೆಳಕಿನಡೆಗೆ ಹೋಗಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ| ನಂದಗಿರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. 

ಅಂಬೇಡ್ಕರ್‌ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಕೆ.ಟೆಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಸೋಮನಾಥ ರೆಡ್ಡಿ ಸಿ. ಪಾಟೀಲ ಸ್ವಾಗತಿಸಿದರು. ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ| ನಾಗರಾಜ ಕುಲಕರ್ಣಿ ಅತಿಥಿ ಪರಿಚಯ ಮಾಡಿದರು. ಡಾ| ರಾಜೇಂದ್ರಸಿಂಗ್‌ ಬಯಾಸ್‌ ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು.

Advertisement

ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ| ಮೂರ್ತಿ ಶರಣಪ್ಪ ಕ್ರೀಡಾ ವರದಿ ವಾಚಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಧಿಕಾರಿ ಡಾ| ಪುರುಷೋತ್ತಮ ಜೋಷಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಚಂದ್ರಕಲಾ ಪಾರ್ಥಿಸಿದರು. ಡಾ| ಅನೀಲಕುಮಾರ ಬಿ.ಹಾಲು ನಿರೂಪಿಸಿದರು.

ಡಾ| ಗೀತಾ ಪಾಟೀಲ, ಡಾ| ಇಂದುಮತಿ ಪಾಟೀಲ, ಡಾ| ಹುಜೂರ್‌ ಮಹ್ಮದ ಮೈನೋದ್ದಿನ್‌, ಡಾ| ಮೀನಾಕ್ಷಿ ಭರತನೂರ, ಡಾ| ಸವಿತಾ ತಿವಾರಿ, ಡಾ| ಜ್ಯೊತಿ ಕಿರಣಗಿ, ಡಾ| ಪ್ರಶಾಂತಕುಮಾರ ಎಂ, ಡಾ| ಶಿವಲಿಂಗಪ್ಪಾ ಪಾಟೀಲ, ಡಾ| ರೇಣು ಅಣ್ಣಿಗೇರೆ, ಡಾ| ಶಶಿಕಾಂತ ಮಜಗಿ, 

ಪ್ರೊ| ರಾಜ ಸಮರಸೇನೆ ಮೋದಿ, ಪ್ರೊ| ಕೊತಲೆ ಬೀಮರಾಯ, ಪ್ರೊ| ಚಂದ್ರಶೇಖರ ಆರ್‌. ಚಿಕ್ಕೇಗೌಡ, ಡಾ| ರಾಮಕೃಷ್ಣ, ಪ್ರೊ|  ಬಸವಂತರಾವ ಪಾಟೀಲ, ಪ್ರೊ| ವಿಜಯ ಕುಮಾರ ಎನ್‌. ಹೆಬ್ಟಾಳಕರ್‌, ಡಾ| ನಾಗಪ್ಪ ಟಿ.ಗೋಗಿ, ಈರಮ್ಮ ಭಾವಿಕಟ್ಟಿ, ಫುಲಾಬಾಯಿ ಜಲದೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next