Advertisement

ದೇಗಲಮಡಿ ಸೇತುವೆ ರಕ್ಷಣಾಗೋಡೆ ನಿರ್ಮಿಸಿ

12:18 PM Dec 04, 2021 | Team Udayavani |

ಚಿಂಚೋಳಿ: ತಾಲೂಕಿನ ದೇಗಲಮಡಿ ಗ್ರಾಮದ ಹತ್ತಿರ ಹರಿಯುವ ಸಣ್ಣ ನದಿಗೆ ನಿರ್ಮಿಸಿದ ಸೇತುವೆಗೆ ರಕ್ಷಣಾಗೋಡೆ ಕಟ್ಟಲು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಮಸ್ತಾನ್‌ ಪಟೇಲ ಕೋಡ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಗಲಮಡಿ ಗ್ರಾಮದ ಕೂಡು ರಸ್ತೆಗೆ ಅನೇಕ ವರ್ಷಗಳ ಹಿಂದೆ ಕೆಳಮಟ್ಟದ ಸೇತುವೆ ನಿರ್ಮಿಸಲಾಗಿದೆ. ಆದರೆ ಎರಡು ಬದಿಗಳಲ್ಲಿ ರಕ್ಷಣಾಗೋಡೆ ನಿರ್ಮಿಸದೇ ಇರುವುದರಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ನಾಲೆ ದಾಟಲು ಜನತೆ ಭಯಪಡುವಂತೆ ಆಗಿದೆ ಎಂದು ಹೇಳಿದರು.

ರಾತ್ರಿ ಸಮಯದಲ್ಲಿ ಸೇತುವೆ ಕಾಣದೇ ಇರುವುದರಿಂದ ದನಕರುಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಅಲ್ಲದೇ ದ್ವಿಚಕ್ರ ವಾಹನ ಸವಾರರು ಸೇತುವೆ ಮೇಲೆ ಸಂಚರಿಸುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಈ ಸೇತುವೆಗೆ ರಕ್ಷಣಾಗೋಡೆ ನಿರ್ಮಿಸಿಕೊಡಿ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಅವರಿಗೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಗಲಮಡಿ ಗ್ರಾಮದೊಳಗೆ ಸರಕು ತುಂಬಿದ ಭಾರವಾದ ಲಾರಿ, ಆಟೋ, ಜೀಪು, ಬಸ್‌ ಗಳು ಆಗಮಿಸಲು ತೊಂದರೆ ಪಡುವಂತೆ ಆಗಿದೆ. ಆದ್ದರಿಂದ ಶಾಸಕರು ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.