ಯಳಂದೂರು: ಸರ್ಕಾರದ ಪ್ರತಿ ಕಾಮಗಾರಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಎನ್. ಮಹೇಶ್ ಸೂಚಿಸಿದರು. ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರಾಜಕಾಲುವೆ ಕಾಮಗಾರಿ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಪ್ರತಿ ಮಳೆಗಾಲದಲ್ಲೂ ಕಲುಷಿತ ನೀರು ಮನೆಗಳಿಗೆ ನುಗ್ಗುತ್ತಿತ್ತು. ಹಾಗಾಗಿ ಈ ಕೆಲಸ ತುರ್ತಾಗಿ ಆಗಬೇಕಿತ್ತು. ಇದಕ್ಕೆ ವಿಶೇಷ ಘಟಕ ಯೋಜನೆಯಡಿ 41 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಜೊತೆಗೆ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 3.45 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ 2.25 ಕೋಟಿ ರೂ. ವೆಚ್ಚದ ರಸ್ತೆ, ಕನಕ ಭನವ, ಎಸ್‌ಇಪಿ ಯೋಜನೆಯಡಿಯಲ್ಲಿನ ರಸ್ತೆಗಳು ಸೇರಿವೆ ಎಂದರು.
ಇದನ್ನೂ ಓದಿ:ತುಂಬು ಕುಟುಂಬದ ಪ್ರೀತಿ ಮಕ್ಕಳಿಗೂ ಸಿಗಲಿ
ಈ ವೇಳೆ ಜಿಪಂ ಸದಸ್ಯೆ ಉಮಾವತಿ, ಕಾವೇರಿ ನೀರಾವರಿ ನಿಗಮದ ಎಇಇ ಕೈಲಾಸ ಮೂರ್ತಿ, ಜೆಇ ಬಸವೇಶ್, ಗುತ್ತಿಗೆದಾರ ಮಾಲೇಗೌಡ, ಶಿವಣ್ಣ, ಗ್ರಾಪಂ ಸದಸ್ಯ ಪ್ರಸಾದ್, ಕಾರ್ಯದರ್ಶಿ ನಿರಂಜನ್, ಶಾಸಕರ ಆಪ್ತ ಕಾರ್ಯದರ್ಶಿ ಮಹಾದೇವಸ್ವಾಮಿ, ಕೇಶವಮೂರ್ತಿ, ರಘು, ಶಾಂತರಾಜು, ರಾಜು ಮಂಟೇಲಿಂಗಯ್ಯ, ಶಿವಮಲ್ಲು, ರಾಚಯ್ಯ ಇತರರು ಹಾಜರಿದ್ದರು.