Advertisement

ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಿ: ಸ್ವಾಮೀಜಿ

02:47 PM May 12, 2019 | Suhan S |

ತುಮಕೂರು: ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ಜೊತೆಗೆ ರಚನಾತ್ಮಕ ಕಾರ್ಯ ಕ್ರಮಗಳಾದ ಕೃಷಿ ಮಂಥನ ಕಾರ್ಯಕ್ರಮ ಮಾಡುವುದರಿಂದ ಕೃಷಿ ತೋಟಗಾರಿಕೆ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀಧೀರಾನಂದ ಸ್ವಾಮೀಜಿ ತಿಳಿಸಿದರು.

Advertisement

ನಗರದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕೃಷಿ ತೋಟಗಾರಿಕೆ ಪದವಿ ಪ್ರವೇಶ ಪ್ರಾಯೋಗಿಕ ಪರೀಕ್ಷೆಗಾಗಿ ಉಚಿತ ತರಬೇತಿ ಶಿಬಿರ ಕೃಷಿ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನತೆ ದೇಶದ ಆಸ್ತಿ ಆಗಿರುವುದರಿಂದ ಸ್ವಾಮಿ ವಿವೇಕಾನಂದ, ಭಗತ್‌ ಸಿಂಗ್‌ ಜೀವನ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯ ಮಾಡಬೇಕು. ಕೃಷಿ ಮಂಥನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೃಷಿ ಪದವಿ, ತೋಟಗಾರಿಕೆ ಪದವಿ ಹಾಗೂ ಮುಂತಾದ ಪದವಿಗಳಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ತುಮಕೂರು ಎಬಿವಿಪಿ ಜಿಲ್ಲಾ ಪ್ರಮುಖ್‌ ಪ್ರೊ.ರವೀಂದ್ರ, ಎಬಿವಿಪಿ ಕಾರ್ಯಕರ್ತರಾದ ರಾಧಾಕೃಷ್ಣ, ಅಪ್ಪು ಪಾಟೀಲ್, ವೀರೇಶ್‌, ವಿ.ನಾಗೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next