Advertisement

ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ: ಬಸವರಾಜ

01:10 PM Feb 05, 2018 | Team Udayavani |

ಬಸವಕಲ್ಯಾಣ: ವಿದ್ಯಾರ್ಥಿಗಳು ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ತಿಳಿದುಕೊಂಡು ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಲಹೆ ನೀಡಿದರು.

Advertisement

ನಗರದ ಡಾ| ಶರಣಬಸವಪ್ಪ ಅಪ್ಪ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಹಾಗೂ ವಿಜ್ಞಾನ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಮಾತನಡಿದ ಅವರು, ಸಾಧನೆಗೆ ದೃಢ ಸಂಕಲ್ಪ, ಅದಕ್ಕೆ ಪೂರಕ ಪರಿಶ್ರಮ ಇದ್ದಾಗ ಸಾಧನೆಯ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಡಿ.ಟಿ ಅಂಗಡಿ ಮಾತನಾಡಿದರು. ಸಹ ಸಂಯೋಜಕ ಪ್ರೊ| ಆರ್‌.ಡಿ. ಬಾಲಿಕಿಲೆ ಉಪಸ್ಥಿತರಿದ್ದರು, ಪ್ರೊ| ವಿಠೊಬಾ ಡೊಣ್ಣೆಗೌಡರು ಸ್ವಾಗತಿಸಿದರು. ಡಾ.ಕೇದರನಾಥ ನಿರೂಪಿಸಿದರು. ಪ್ರೊ|ಎಸ್‌. ಜಿ. ಕರಣೆ ವಂದಿಸಿದರು.

ಬಹುಮಾನ ವಿತರಣೆ: ಸಮ್ಮೇಳನ ಹಾಗೂ ಪ್ರದರ್ಶನ ನಿಮಿತ್ತ ವಸ್ತು ಪ್ರದರ್ಶನ, ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ನಡೆಸಿ ಪ್ರತ್ಯೇಕವಾಗಿ ಮೂರು ವಿಭಾಗಗಳಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ವಸ್ತು ಪ್ರರ್ದಶನದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಎಸ್‌ಎಸ್‌ ಕೆಬಿ ಕಾಲೇಜು ವಿದ್ಯಾರ್ಥಿಗಳು ಪಡೆದಿದ್ದು, ರಜನಿಕಾಂತ, ಶುಷ್ಮಾ, ವಿಜಯಲಕ್ಷ್ಮೀ, ಶಿವಲೀಲಾ ಪ್ರಥಮ ಬಹುಮಾನ ಪಡೆದಿದ್ದಾರೆ, ಶೃತಿ, ರಾಧಿಕಾ, ಅಂಜಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 

ಮೀರಮುಸ್ತಾಖ ಅಲಿ, ಸಬಾನೇಹಾ, ಕಾಶಿನಾಥ ನಿಣ್ಣೆ ತೃತೀಯ ಬಹುಮಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಬೀದರಿನ ಬಿವಿಬಿ ಮಹಾವಿದ್ಯಾಲಯದ ವಿದ್ಯಾರ್ಥಿ ಜಗದೀಶ ಪ್ರಥಮ, ಹುಮನಾಬಾದಿನ ಎಸ್‌ಬಿಸಿ ಮತ್ತು ಎಸ್‌.ವಿ. ಮಹಾವಿದ್ಯಾಲಯದ ವಿದ್ಯಾರ್ಥಿನಿಗಳಾದ ವಿಜಯಲಕ್ಷ್ಮೀ, ಮತ್ತು ಕುಸುಮ ಗೋಪಾಲ ದ್ವಿತೀಯ ಬಹುಮಾನ ಪಡೆದಿದ್ದಾರೆ. ಎಸ್‌ಎಸ್‌ಕೆಬಿ ಕಾಲೇಜು ವಿದ್ಯಾರ್ಥಿಗಳಾದ ಸಿಮ್ರನಜಿತ್‌ ಕೌರ ಹಾಗೂ ಸೇಖ ಸೋಯಬ ತೃತೀಯ ಬಹುಮಾನ ಪಡೆದಿದ್ದಾರೆ.

Advertisement

ಪ್ರಬಂಧ ಸ್ಪರ್ಧೆಯಲ್ಲಿ ಎಸ್‌ಎಸ್‌ಕೆಬಿ ಕಾಲೇಜಿನ ವಿದ್ಯಾರ್ಥಿಗಳಾದ ಸುಷ್ಮಾ ಆರ್‌ ಪ್ರಥಮ ಮತ್ತು ಮಿನಾಕ್ಷಿ ಎಸ್‌. ಪ್ರಥಮ ಬಹುಮಾನ ಪಡೆದಿದ್ದಾರೆ. ಹುಮನಾಬಾದನ ಎಸ್‌ಬಿಸಿ ಮತ್ತು ಎಸ್‌.ವಿ. ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಂಧ್ಯಾಶ್ರೀ ತೃತೀಯ ಬಹುಮಾನ ಪಡೆದಿದ್ದಾರೆ.

ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಲ್ಲಿನ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next