Advertisement

ಪ್ರಮುಖ ಸ್ಥಳಗಳಲ್ಲಿ ಬಸ್‌ ಶೆಲ್ಲ ರ್‌ ನಿರ್ಮಿಸಿ

01:19 PM Jan 10, 2020 | Team Udayavani |

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್‌ ಶೆಲ್ಟರ್‌ ನಿರ್ಮಿಸಬೇಕು ಎಂದು ಡಿ. ದೇವರಾಜ್‌ ಅರಸ್‌ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಂ.ನಾಗಬಸವಣ್ಣ ಒತ್ತಾಯಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಡಿ. ದೇವರಾಜ್‌ ಅರಸ್‌ ಹಿಂದುಳಿದ ವರ್ಗಗಳ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬರುವ ಜನರು ಸಂತೇಮರಹಳ್ಳಿ ಬಸ್‌ನಿಲ್ದಾಣ, ಗುಂಡ್ಲುಪೇಟೆ ವೃತ್ತ, ಎಲ್‌ಐಸಿ ಕಚೇರಿ ಎದುರು, ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರು ಹಾಗೂ ಲಾರಿ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಲ್ಲಿ ಗಂಟೆಗಟ್ಟಲೇ ನಿಂತು ಬಸ್‌ ಏರಬೇಕಿದೆ. ಇವರ ಅನುಕೂಲಕ್ಕಾಗಿ ಜಿಲ್ಲಾಡಳಿತ, ನಗರಸಭೆ ಬಸ್‌ ಶೆಲ್ಟರ್‌ ನಿರ್ಮಿಸಬೇಕು ಎಂದರು.

ಗ್ರಾಪಂನಲ್ಲಿ ಆಧಾರ್‌ ಕೇಂದ್ರ ತೆರೆಯಿರಿ: ವೇದಿಕೆಯ ಗೌರವ ಅಧ್ಯಕ್ಷ ಪಿ. ಲಿಂಗರಾಜು ಮಾತನಾಡಿ, ಗ್ರಾಮೀಣ ಜನತೆ ಚಾ.ನಗರದ ಆಧಾರ್‌ ಕೇಂದ್ರಕ್ಕೆ ಮಕ್ಕಳ ಸಮೇತವಾಗಿ ಮುಂಜಾನೆಗೆ ಬಂದು ಕಾದುಕುಳಿತರೂ ಕೇವಲ 20 ಮಂದಿಗೆ ಮಾತ್ರ ಆಧಾರ್‌ ಕಾರ್ಡ್‌ ಮಾಡಲಾಗುತ್ತಿದೆ. ಇದರಿಂದ ಪ್ರತಿ ಗ್ರಾಪಂನಲ್ಲೂ ಆಧಾರ್‌ ಕೇಂದ್ರ ತೆರೆದು ಸಾರ್ವಜನಕರಿಗೆ ಆಧಾರ್‌ ಸೇವೆ ದೊರೆಯುವಂತೆ ಮಾಡಬೇಕು ಎಂದರು. ಸಭೆಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರೇವಣ್ಣ, ಸಂಘಟನಾ ಕಾರ್ಯದರ್ಶಿ ಕೆ.ನೀಲಶೇಖರ್‌, ಕೃಷ್ಣರಾಜು, ಸಂಚಾಲಕ ರಂಗಸ್ವಾಮಿ, ನಟರಾಜು, ಗೌರವ ಸಲಹೆಗಾರ ಅಬ್ಟಾಸ್‌, ಶಂಕರಶೆಟ್ಟಿ, ಅಲ್ತಾಫ್, ಕಮರಶೆಟ್ಟಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next