Advertisement

ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ: ನಡಹಳ್ಳಿ

06:28 PM Sep 21, 2020 | Suhan S |

ಮುದ್ದೇಬಿಹಾಳ: ಪಟ್ಟಣದ ಹೊರ ವಲಯದ ಬಿದರಕುಂದಿ ಗ್ರಾಮ ವ್ಯಾಪ್ತಿಯಲ್ಲಿರುವ ತಾಲೂಕು ಮಟ್ಟದ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲು ಯೋಜನೆ ರೂಪಿಸಬೇಕು ಮತ್ತು ಈಗಾಗಲೇ ಅರ್ಧಮರ್ಧ ಕಾಮಗಾರಿ ನಡೆದಿರುವ ಕ್ರೀಡಾಂಗಣದ ಸಮಗ್ರ ಮಾಹಿತಿ ತಮಗೆ ಒದಗಿಸಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಕ್ರೀಡಾಂಗಣಕ್ಕೆ ಮೀಸಲಿಟ್ಟಿರುವ ಸರ್ಕಾರಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಹಿಂದಿನ ಶಾಸಕರ ಅವ ಧಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗಿತ್ತು. ಆದರೆ ಆ ಸ್ಥಳದ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಎಷ್ಟು ಜಾಗ ಬೇಕು ಎನ್ನುವ ಮಾಹಿತಿಯೂ ಇರಲಿಲ್ಲ. ಸದ್ಯ ಕ್ರೀಡಾಂಗಣಕ್ಕೆ ಆಯ್ಕೆ ಮಾಡಿಕೊಂಡಿರುವಜಾಗ ಚಿಕ್ಕದಾಗುತ್ತದೆ. ಹೀಗಾಗಿ ಪಕ್ಕದಲ್ಲೇ ಇರುವ ಇನ್ನೊಂದು ಸರ್ವೇ ನಂಬರ್‌ನಲ್ಲಿನ ಜಾಗೆಯನ್ನೂ ಬಳಸಿಕೊಂಡು ಕ್ರೀಡಾಂಗಣವನ್ನು ದೊಡ್ಡದಾಗಿಸಿಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ತಾವು ಬದ್ಧರಾಗಿದ್ದೇವೆ ಎಂದರು.

ಆರ್‌ಎಂಎಸ್‌ಎ ರಸ್ತೆ ಪರಿಶೀಲನೆ: ಕ್ರೀಡಾಂಗಣ ಪಕ್ಕದಲ್ಲೇ ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದಹೊಸ ಕಟ್ಟಡ ರಸ್ತೆ ಇಲ್ಲದೆ ಅನಾಥವಾಗಿ ನಿಂತಿದೆ. ಈ ಶಾಲೆಗೆ ರಸ್ತೆ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರೈತ ವೀರಣ್ಣ ತಡಸದ ಅವರ ಜಮೀನಿನಲ್ಲಿ ರಸ್ತೆ ಪಡೆದುಕೊಳ್ಳಲಾಗಿದೆ. ತಾರನಾಳ ಕೂಡು ರಸ್ತೆಯಿಂದ ಶಾಲೆವರೆಗಿನ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯ ಮುದ್ದೇಬಿಹಾಳದ ಮಾರುತಿ ನಗರದಿಂದ ತಾರನಾಳ ಕೂಡು ರಸ್ತೆವರೆಗಿನ ಕಾಮಗಾರಿ ಪ್ರಾರಂಭಗೊಂಡಿದೆ. ಆದಷ್ಟು ಬೇಗ ಈ ರಸ್ತೆಯನ್ನೂ ಗುಣಮಟ್ಟದಲ್ಲಿ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಸಾಧ್ಯವಾದಷ್ಟು ತ್ವರಿತವಾಗಿ ಕೆಲಸ ಮಾಡಿ ಅಕ್ಟೋಬರ್‌ 2ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಅಂದು ಉಪ ಮುಖ್ಯಮಂತ್ರಿಯವರಿಂದ ನಡೆಯಲಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ಈ ರಸ್ತೆಯನ್ನೂ ಲೋಕಾರ್ಪಣೆಗೊಳಿಸುವುದು ಸಾಧ್ಯವಾಗುತ್ತದೆ ಎಂದು ಗುತ್ತಿಗೆದಾರ ಕೆ.ಎಸ್‌. ಪಾಟೀಲಗೆ ಸೂಚಿಸಿದ ಶಾಸಕರು, ರಸ್ತೆಯಲ್ಲಿ ಕಪ್ಪು ಎರೆ ಮಣ್ಣು ಇದೆ. ಮಳೆ ಬಂದಾಗ ಇದು ಕೆಸರಾಗುತ್ತದೆ. ಹೀಗಾಗಿ ಎರೆ ಮಣ್ಣನ್ನು ತೆಗೆದು ಆ ಸ್ಥಳದಲ್ಲಿ ಬೇರೆ ಕಡೆಯಿಂದ ಗುಣಮಟ್ಟದ ಗಟ್ಟಿಮುಟ್ಟಾದ ಗರಸು ಮಣ್ಣನ್ನು ತುಂಬಬೇಕು ಎಂದರು.

ಬೈಕ್‌ ಏರಿದ ಶಾಸಕ: ಆರ್‌ಎಂಎಸ್‌ಎ ಶಾಲೆಯ ಎರೆ ಮಣ್ಣಿನ ರಸ್ತೆಯಲ್ಲಿ ಸಂಚರಿಸಲು ಶಾಸಕರ ಕಾರ್‌ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ರಸ್ತೆಯನ್ನು ಪರಿಶೀಲಿಸಲು ಪತ್ರಕರ್ತ ಸಾಗರ ಉಕ್ಕಲಿ ಅವರ ಬುಲೆಟ್‌ ಏರಿದ ಶಾಸಕರು ಸವಾರನ ಹಿಂದೆ ಕುಳಿತು ರಸ್ತೆಯನ್ನು ಸಂಪೂರ್ಣ ಪರಿಶೀಲಿಸಿದರು. ನಂತರ ಗುತ್ತಿಗೆದಾರರಿಗೆ ಕೆಲ ಸಲಹೆ ಸೂಚನೆ ನೀಡಿ ಗುಣಮಟ್ಟದ ರಸ್ತೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

Advertisement

ಶಾಸಕರು ಬೈಕ್‌ ಏರಿದ್ದನ್ನು ಕಂಡು ಶಾಸಕರ ಜೊತೆಗಿದ್ದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಗುತ್ತಿಗೆದಾರ ಕೆ.ಎಸ್‌. ಪಾಟೀಲ ಮತ್ತಿತರರು ತಮ್ಮ ಕಾರುಗಳನ್ನು ದೂರದಲ್ಲೇ ಬಿಟ್ಟು ಮಾಧ್ಯಮದವರ ಬೈಕ್‌ ಏರಿ ಶಾಸಕರ ಹಿಂದೆ ಸಾಗಿ ಬಂದರು.

Advertisement

Udayavani is now on Telegram. Click here to join our channel and stay updated with the latest news.

Next