ಕಾಳಗಿ: ಮನುಷ್ಯ ತನ್ನಲ್ಲಿರುವುದನ್ನು ಇತರರಿಗೆ ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಖಾಪುರದ ಶಿವಾಚಾರ್ಯರತ್ನ ಸಿದ್ದರಾಮ ಶಿವಾಚಾರ್ಯರು ಹೇಳಿದರು. ಅರಜಂಬಗಾ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.
ತನ್ನ ಸಂಪತ್ತನ್ನು ತಾನು ಅನುಭವಿಸಿದರೆ ಯೋಗ್ಯ ವಾಗುವುದಿಲ್ಲ. ಆ ಸಂಪತ್ತಿನ್ನ ಸ್ವಲ್ಪ ಭಾಗವಾದರೂ ಇತರರಿಗೆ ದಾನ ಮಾಡಬೇಕು. ಬದುಕಿನಲ್ಲಿ ಎಷ್ಟು ಸಂಪಾದಿಸಿದ್ದಿಯಾ ಎಂಬುದು ಮುಖ್ಯವಲ್ಲ. ಎಷ್ಟು ದಾನ ಮಾಡಿದಿಯಾ ಎಂಬುದು ಮುಖ್ಯ. ದಾನ ಮಾಡುವುದರಿಂದ ಜೀವನ ಸುಃಖ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.
ಟೆಂಗಳಿ- ಮಂಗಲಗಿಯ ಡಾ| ಶಾಂತಸೋಮನಾಥ ಶಿವಾಚಾ ರ್ಯರು ಮಾತನಾಡಿ, ದೇವರ ಹೆಸರಿನಲ್ಲಿ ಮಾಡುವ ಉಪವಾಸ ಭಕ್ತಿಯಿಂದ ಕೂಡಿರಬೇಕು. ಅಂದಾಗ ಮಾತ್ರ ಮನಸ್ಸು ಹಿಡಿತದಲ್ಲಿಡಲು ಸಾಧ್ಯ. ಜನರು ತೋರಿಕೆಗೆ ತಿಂಗಳಿಗೆ ಮೂರ್‍ನಾಲ್ಕು ಉಪವಾಸ ಮಾಡುವುದಕ್ಕಿಂತ ವರ್ಷಕ್ಕೆ ಒಂದು ಬಾರಿ ನಮ್ಮ ಮನಸ್ಸು, ದೇಹ, ಭಾವ, ಚಿತ್ತ ಎಲ್ಲವನ್ನು ದೇವರತ್ತ ಕೇಂದ್ರಿಕರಿಸಿ ಉಪವಾಸ ಮಾಡಿದರೆ ಮನಸ್ಸು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಳಖೇಡದ ಹಜರತ್ ಸೈಯ್ಯದ್ ಶಹಾ ಮುಸ್ತಾಫ್ ಖಾದೀರ್ ಸಜ್ಜಾದ್ ನಾಸೀನ್ ಮಾತನಾಡಿ, ತನಗಿಂತಲೂ ಮಿಗಿಲಾದ ಶಕ್ತಿ ಇರುವುದನ್ನು ನಂಬಿ ಅದಕ್ಕೆ ತಲೆಬಾಗಿ ನಡೆಯುವುದೇ ಧರ್ಮ. ಆಯಾ ಧರ್ಮಗಳ ಆಚಾರ- ವಿಚಾರಗಳು ಬೇರೆ ಬೇರೆಯಾಗಿದ್ದರೂ ತತ್ವಾದರ್ಶಗಳು ಮಾತ್ರ ಒಂದೆಯಾಗಿರುತ್ತವೆ ಎಂದು ಹೇಳಿದರು.
ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಈರಣ್ಣ ಕೇಶ್ವಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಂದೂರ, ಮುಖಂಡರಾದ ಫಕ್ಕಿರಯ್ಯ ಸ್ಥಾವರಮಠ, ಬಸವರಾಜ ತುಪ್ಪದ, ವೀರಭದ್ರಯ್ಯ ಸಾಲಿಮಠ, ಸಂಗಣ್ಣ ದೊಡ್ಡಮನಿ, ಸಂಗನಗೌಡ ಬಿರೆದಾರ, ಭೀಮಾಶಂಕರ ಪೊಲೀಸ್‌ಪಾಟೀಲ, ವಿಲಾಸಬಾಬು ಬಿರೆದಾರ, ನಾಗರಾಜ ಮಹಾಗಾಂವ, ವಿಶ್ವನಾಥ ಬಾಳದೆ,
ಚಂದ್ರಶೇಖರಯ್ಯ ಸೋಲಾಪುರ, ಬಸವರಾಜ ಬಸ್ತೆ, ಶಿವಾನಂದ ದೊಡ್ಡಮನಿ, ಶ್ರೀಮಂತ ಮಲಕೂಡ, ಗುಂಡಪ್ಪ ಬಿರೆದಾರ, ಮಲ್ಲಿಕಾರ್ಜುನ ಆಲಗೂಡ, ಗುರುಲಿಂಗಪ್ಪ ದಂಡೋತಿ, ಮಲ್ಲಿನಾಥ ಹಲಕರ್ಟಿ, ಚಂದ್ರಶೇಖರ ಭಂಕಲಗಿ, ಗುರುಲಿಂಗಪ್ಪ ತಳವಾರ, ಬಸವರಾಜ ಭಂಕಲಗಿ, ನಾಗಣ್ಣ ಕಡ್ಲಿ, ಕುಮಾರಸ್ವಾಮಿ, ಸಿದ್ದಯ್ಯಸ್ವಾಮಿ, ಬಸವರಾಜ ಬೂದನಮಠ, ಶಿವಶರಣಪ್ಪ ಹೂಗಾರ, ಎಎಸ್‌ಐ ವೆಂಟೇಶ್ವರ ಕುಲಕರ್ಣಿ ಇದ್ದರು.