ಮುಂಬಯಿ, ಡಿ. 24: ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಿದೌªಷಧಿಯಾಗಿದೆ. ವಿದ್ಯಾರ್ಥಿಗಳು ಎಳವೆಯಿಂದಲೇ ಕ್ರೀಡಾಭಿರುಚಿ ಬೆಳೆಸಿಕೊಂಡು ಆರೋಗ್ಯವಂತರಾಗಿರುವುದರ ಜತೆಗೆ ಕ್ರೀಡಾ ಸ್ಪೂರ್ತಿಯ ಮೂಲಕ ಸ್ಪರ್ಧಾತ್ಮಕ ಜೀವನ ಸ್ಫೂರ್ತಿ ಪಡೆಯಲು ಸಾಧ್ಯ ಎಂದು ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ನುಡಿದರು.
ಡಿ. 20 ರಂದು ಕಾಂಜೂರುಮಾರ್ಗ ಪಶ್ಚಿಮದ ನೇವಲ್ ಡಾರ್ಕ್‌ಯಾರ್ಡ್ ಮೈದಾನದಲ್ಲಿ ಜರಗಿದ ಬಂಟರ ಸಂಘ ಉನ್ನತ ಶಿಕ್ಷಣ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ-2019 ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ ಪದಾಧಿಕಾರಿಗಳ ಪ್ರೋತ್ಸಾಹದೊಂದಿಗೆ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಶಿಕ್ಷಣದ ಜತೆಗೆ ಆಟೋಟ ಸ್ಪರ್ಧೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.ವಿದ್ಯಾರ್ಥಿ ಗಳು ಕ್ರೀಡಾಭಿರುಚಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ ಸಶಕ್ತ ಸಮಾಜ ನಿರ್ಮಾಣ ಕಾರ್ಯ ದಲ್ಲಿ ಶಕ್ತಿವಂತ ಪ್ರಜೆಗಳಾಗಿ ಬೆಳೆಯಬೇಕು ಎಂದರು. ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್ ಮಾತನಾಡಿ, ಉನ್ನತ ಶಿಕ್ಷಣ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ವಿವಿಧ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಬಂಟರ ಸಂಘ ಹಾಗೂ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಘವು ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿಶೇಷ ಕಾಳಜಿ ವಹಿಸುತ್ತಿದ್ದು, ಶಾಲಾ-ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ನೂತನ ಶಿಕ್ಷಣ ಯೋಜನಾ ಸಮಿತಿಯ ಕೋಶಾಧಿಕಾರಿ ಸಿಎ ಹರೀಶ್ ಹೆಗ್ಡೆ, ಉನ್ನತ ಶಿಕ್ಷಣ ಸಮಿತಿಯ ಸದಸ್ಯ ಪ್ರಸನ್ನ ಶೆಟ್ಟಿ, ಕಾಲೇ ಜಿನ ಪ್ರಾಂಶುಪಾಲರು, ನಿರ್ದೇಶಕರು, ಸಿಬಂದಿ ವರ್ಗದವರು ಭಾಗವಹಿಸಿದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ಸುಮಾರು 1300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಅಣ್ಣಲೀಲಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಇಕನಾಮಿಕ್ಸ್, ಶೋಭಾ ಜಯರಾಮ ಶೆಟ್ಟಿ ಕಾಲೇಜ್ ಆಫ್ ಬಿಎಂಎಸ್, ಬಾರ್ಕೂರು ಧರ್ಮರಾಜ ಶೆಟ್ಟಿ ಕಾಲೇಜ್ ಫಾರ್ ಪೋಸ್ಟ್ ಗ್ರಾಜುವೇಶನ್ ಚಾಂಪಿಯನ್ ಶಿಪ್ ಟ್ರೋ ಪಡೆಯುವಲ್ಲಿ ಯಶಸ್ವಿಯಾಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಪದವಿ ಕಾಲೇಜುಗಳಾದ ಬಿಎಂಎಸ್, ಅಣ್ಣಲೀಲಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಇಕನಾಮಿಕ್ಸ್ ವಿದ್ಯಾರ್ಥಿಗಳು ವಿಜಯಿಯಾದರು. ಹಗ್ಗ ಜಗ್ಗಾಟದಲ್ಲಿ ಬಿಎಸ್‌ಸಿ ಐಟಿಅಣ್ಣಲೀಲಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಇಕೋನೊಮಿಕ್ಸ್ ವಿದ್ಯಾರ್ಥಿ ಗಳು ವಿಜೇತರಾದರೆ, 2019ರ ಅತ್ಯುತ್ತಮ ಕ್ರೀಡಾಪಟುವಾಗಿ ಪುರುಷರವಿಭಾಗದಲ್ಲಿ ಅಭಿಷೇಕ್ ಅಹಿರ್, ಯುವತಿಯರ ವಿಭಾಗದಲ್ಲಿ ಶರಧಿ ಶೆಟ್ಟಿ, ಜೂನಿಯರ್ ವಿಭಾಗದಲ್ಲಿ ಓಂಕಾರ್ ಜಾಧವ್, ಪ್ರಗತಿ ಮಿಶ್ರಾ ಬಹುಮಾನ ಪಡೆದರು. ಜೂನಿಯರ್ ಕಾಲೇಜ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಟಗ್ ಆಫ್ ವಾರ್ ಮತ್ತು ಕ್ರಿಕೆಟ್ ಪಂದ್ಯಾಟದಲ್ಲಿ ಬೆಸ್ಟ್ ಚಾಂಪಿಯನ್ ಎನಿಸಿಕೊಂಡರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು