Advertisement

ರೋಗಮುಕ್ತ ಸಮಾಜ ನಿರ್ಮಿಸಿ

06:01 AM May 29, 2020 | Suhan S |

ಬಾಗಲಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌.ದೇಸಾಯಿ ಚಾಲನೆ ನೀಡಿದರು.

Advertisement

ಗುರುವಾರ ನಗರದ 50 ಹಾಸಿಗೆ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ ಪ್ರಾರಂಭವಾಗಿ ಹರಣಶಿಕಾರಿ ಓಣಿ, ಬಸವೇಶ್ವರ ವೃತ್ತ, ವಿದ್ಯಾಗಿರಿ, ನವನಗರಗಳಲ್ಲಿ ಪ್ರಚಾರ ಸಂಚರಿಸಿ ಪುನಃ ಆಸ್ಪತ್ರೆಗೆ ಮುಕ್ತಾಯಗೊಂಡಿತು. ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖ ಎಂಬ ಧ್ಯೇಯವಾಕ್ಯದೊಂದಿಗೆ ಜಾಥಾ ನಡೆಯಿತು. ಡೆಂಘೀ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧಿಯ ಮುನ್ನವೆ ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಇತರ ಇಲಾಖೆಗಳ ಸಹಯೋಗದ ಮೂಲಕ ಡೆಂಘೀ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು.

ಜಾಥಾದಲ್ಲಿ ಜಿಲ್ಲಾ ವಿಬಿಡಿ ಅಧಿಕಾರಿ ಡಾ| ಜಯಶ್ರೀ ಎಮ್ಮಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಎಂ.ಎಲ್‌. ಹಸರಡ್ಡಿ, ಲಿಂಗರಾಜ ಹಿರೇಗೌಡರ ಹಾಗೂ 50 ಹಾಸಿಗೆ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ನಗರ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next