Advertisement
ದೇಶ ಸುತ್ತಿನೋಡು, ಕೋಶ ಓದಿ ನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲವಾಗಿದೆ. ಇ-ಬುಕ್ ಇರುವ ಈ ಕಾಲದಲ್ಲೂ ಪುಸ್ತಕಗಳು ತನ್ನ ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಪುಸ್ತಕ, ಲೇಖಕರು ಮತ್ತು ಪ್ರಕಾಶನಗಳು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1995ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಎಪ್ರಿಲ್ 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವಾದ್ಯಂತ ಯುನೆಸ್ಕೋ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಗುತ್ತದೆ.
ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಇಂದಿನ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಕೊರತೆ ಬಹಳಷ್ಟಿದೆ. ಯುವ ಜನತೆಯಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು, ಪುಸ್ತಕ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಪುಸ್ತಕದ ಉಳಿವಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕೃತಿಸ್ವಾಮ್ಯ ದಿನ
ಪುಸ್ತಕಗಳ ರಕ್ಷಕನಾಗಿ ಕೃತಿಸ್ವಾಮ್ಯ ಕೆಲಸ ಮಾಡುತ್ತದೆ. ಲೇಖಕರಿಗೆ ಪುಸ್ತಕಗಳೇ ಆಸ್ತಿ . ಈ ಆಸ್ತಿಯನ್ನು ಕದಿಯದಂತೆ ನೋಡುಕೊಳ್ಳುತ್ತದೆ ಕೃತಿಸ್ವಾಮ್ಯ ಕಾಯ್ದೆ. ಭಾರತ ಸಹಿತ ವಿಶ್ವ ದ ಅನೇಕ ರಾಷ್ಟ್ರಗಳಲ್ಲಿ ಕೃತಿ ಸ್ವಾಮ್ಯ ಕಾಯ್ದೆ ಇದೆ.
Related Articles
ಪುಸ್ತಕ ಓದುವ ಹವ್ಯಾಸ ಇರುವವರೂ ಎಲ್ಲಿ ಬೇಕಾದರೂ ಸಂತೋಷವಾಗಿರುತ್ತಾರೆ ಎನ್ನುವುದು ಮಹಾತ್ಮಾ ಗಾಂಧೀಜಿ ಅವರ ಮಾತು.
Advertisement
ಓದು ನಮ್ಮಲ್ಲಿ ತಾಳ್ಮೆಯನ್ನು ಬೆಳೆಸುತ್ತದೆ. ಹಿಂದಿನ ಮತ್ತು ಭವಿಷ್ಯದ ಪೀಳಿಗೆ ನಡುವೆ ತಲೆಮಾರುಗಳ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಪುಸ್ತಕ ನಿಲ್ಲುತ್ತದೆ. ಪುಸ್ತಕಗಳ ಮಾರಾಟ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅವುಗಳ ಪ್ರಕಟನೆಗಳು ಸ್ಥಿರವಾಗಿವೆ. ಇದು ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.
ಆಚರಣೆ ಹೇಗೆ ?ವಿಶ್ವ ಪುಸ್ತಕ ದಿನವೂ ಪುಸ್ತಕ ಪ್ರೇಮಿಗಳು ಸಂಭ್ರಮಿಸುವ ದಿನ. ಹಾಗಾಗಿ ಪುಸ್ತಕ ಓದುವ ಹವ್ಯಾಸವಿರುವವರು, ಲೇಖಕರು, ಪ್ರಕಾಶರು ಮತ್ತು ಗ್ರಂಥಾಲಯಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪುಸ್ತಕ ಮಾರಾಟ, ಗೋಷ್ಠಿಗಳು, ಉಚಿತ ಪುಸ್ತಕ ವಿತರಣೆ, ಕಥೆ, ಕವನ ಸ್ಪರ್ಧೆಗಳನ್ನು ನಡೆಸುವುದು, ಲೇಖಕರೊಂದಿಗೆ ಸಂವಾದಗಳನ್ನು ನಡೆಸಲಾಗುತ್ತದೆ. ಕಥೆಗಳನ್ನು ಹಂಚಿಕೊಳ್ಳಿ (ಶೇರ್ ಎ ಸ್ಟೋರಿ ) ಎಂಬ ಥೀಮ್ ಸಂದೇಶದೊಂದಿಗೆ ಈ ವರ್ಷದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನವನ್ನು ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. - ಧನ್ಯಶ್ರೀ ಬೋಳಿಯಾರ್