Advertisement

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳಿಂದ ಮಹಿಳೆಯನ್ನು ರಕ್ಷಿಸಿದ ಎಮ್ಮೆ.!

06:14 PM Jun 30, 2021 | Team Udayavani |

ಸವಣೂರು: ಎಮ್ಮೆ ಮೇಯಿಸಲು ತೆರಳಿದ್ದ ಮಹಿಳೆಯು ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯ ಜೊತೆಗಿದ್ದ ಎಮ್ಮೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳಿಂದ ಮಹಿಳೆಯನ್ನು ರಕ್ಷಿಸಿದ ಘಟನೆ ತಾಲೂಕಿನ ಹೀರೇಮರಳಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಬಸವರಾಜ ಗಾಳೆಪ್ಪ ದಂಡಿನ್ ಹಾಗೂ ಪರಶುರಾಮ ತಮ್ಮಣ್ಣ ಹಟ್ಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು. ಸಂತ್ರಸ್ತ ಮಹಿಳೆಯು ಹಿರೇಮರಳಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬದುವಿನ ಹತ್ತಿರವಿರುವ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದಾಗ ಬಸವರಾಜ ಎಂಬಾತ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈತನಿಂದ ಮಹಿಳೆ ತಪ್ಪಿಸಿಕೊಳ್ಳಲು ಮಹಿಳೆ ಓಡಿದಾಗ ಪರಶುರಾಮ ಎಂಬಾತ ಎದುರಿನಿಂದ ಬಂದು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಗಮನಿಸಿದ ಎಮ್ಮೆ ತನ್ನ ಮಾಲಕಿಯ ಮೇಲೆ ದೌರ್ಜನ್ಯ ನಡೆಸುತ್ತಿರುವವರನ್ನು ಅಟ್ಟಾಡಿಸಿ ಓಡಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ಭೂ ಖರೀದಿ : 2 ದಿನಗಳಲ್ಲಿ ವಸ್ತುಸ್ಥಿತಿ ವಿವರಣೆ : ಪೇಜಾವರ ಶ್ರೀ

ಸಂತ್ರಸ್ತ ಮಹಿಳೆ ನಡೆದ ಘಟನೆಯನ್ನು ಹಿರೇಮರಳಿಹಳ್ಳಿ ಗ್ರಾಮಸ್ಥರಿಗೆ ವಿವರಿಸಿದ್ದಾಳೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪರಶುರಾಮ ಹಟ್ಟಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಬಸವರಾಜ ಪರಾರಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next