ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಹೊಸ ಟ್ಯಾಕ್ಸ್ ಸ್ಲ್ಯಾಬ್ ಘೋಷಣೆ ಮಾಡಿದ್ದಾರೆ.
3 ಲಕ್ಷದ ವರೆಗೆ ವರೆಗೆ ಯಾವುದೇ ತೆರಿಗೆ ಇಲ್ಲ. 3 ಲಕ್ಷ ರೂ ನಿಂದ 7ಲಕ್ಷ- 5% , 7 ಲಕ್ಷ ರೂ. ನಿಂದ 10 ಲಕ್ಷ ರೂ.-10%, 10 ಲಕ್ಷ ರೂ ನಿಂದ 12 ಲಕ್ಷ ರೂ-15%, 12 ಲಕ್ಷ ರೂ ನಿಂದ 15 ಲಕ್ಷ ರೂ- 20% 15 ಲಕ್ಷಕ್ಕೂ ಮೇಲೆ 30% ತೆರಿಗೆ ಪಾವತಿಸಬೇಕಾಗುತ್ತದೆ.
ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ, ಸಂಬಳದ ಉದ್ಯೋಗಿಗಳಿಗೆ ಪ್ರಮಾಣಿತ ಕಡಿತವನ್ನು 50,000 ರೂ.ನಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ.
“ತೆರಿಗೆ ಮೇಲ್ಮನವಿ ಸಲ್ಲಿಸಲು ವಿತ್ತೀಯ ಮಿತಿಯನ್ನು ITATಗೆ 60 ಲಕ್ಷ ರೂ., ಹೈಕೋರ್ಟ್‌ಗಳಿಗೆ ರೂ. 2 ಕೋಟಿ ರೂ. ಮತ್ತು ಸುಪ್ರೀಂ ಕೋರ್ಟ್‌ಗೆ ರೂ. 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ಎಲ್ಲಾ ವರ್ಗದ ಹೂಡಿಕೆದಾರರಿಗೆ ರದ್ದುಪಡಿಸಿದ Angel tax ರದ್ದುಗೊಳಿಸಲು ಪ್ರಸ್ತಾಪ. ಕಾರ್ಪೊರೇಟ್ ತೆರಿಗೆ ದರ ವಿದೇಶಿ ಕಂಪನಿಗಳ ಮೇಲೆ ಶೇಕಡಾ 40 ರಿಂದ 35 ಕ್ಕೆ ಇಳಿಕೆ” ಮಾಡಲಾಗಿದೆ.
“ಮುಂದಿನ 6 ತಿಂಗಳುಗಳಲ್ಲಿ customs duty ಯ ಸಮಗ್ರ ಪರಿಶೀಲನೆ. ಇ-ಕಾಮರ್ಸ್‌ನಲ್ಲಿ TDS ದರವನ್ನು 0.1% ಕ್ಕೆ ಇಳಿಸಲಾಗುವುದು. ದತ್ತಿ ಸಂಸ್ಥೆಗಳಿಗೆ ಎರಡು ತೆರಿಗೆ ವಿನಾಯಿತಿ ನಿಯಮಗಳು ಒಂದಾಗಿ ವಿಲೀನ ಮಾಡಲಾಗಿದೆ. ತೆರಿಗೆ ದಿನಾಂಕವನ್ನು ಸಲ್ಲಿಸುವವರೆಗೆ TDS ವಿಳಂಬವನ್ನು ಅಪರಾಧವಲ್ಲ’ ಎಂದು ಸಚಿವೆ ನಿರ್ಮಲಾ ಘೋಷಿಸಿದ್ದಾರೆ.