ಸಿಎಂ ಬಸವರಾಜ ಬೊಮ್ಮಾಯಿ ಯವರು ತಮ್ಮ ನೇತೃತ್ವದ ಬಿಜೆಪಿ ಸರಕಾರ ಕೆಲವು ದಿನಗಳಲ್ಲಿ ಎದುರಿಸಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಮಂಡಿಸಿರುವ ಆಯ ವ್ಯಯದಲ್ಲಿ ಶೇ. 21ರಷ್ಟು ಅನುದಾನ ಕೃಷಿ, ನೀರಾವರಿ ಮತ್ತು ಸಂಬಂಧಿಸಿದ ವಲಯಕ್ಕೆ ದೊರೆತಿದೆ. ತಮ್ಮ ನೆಚ್ಚಿನ ನೀರಾವರಿಗೆ 25 ಸಾವಿರ ಕೋಟಿ ರೂ. ಹಣ ಒದಗಿಸಿದ್ದಾರೆ. ಆದರೆ ದೇಶದಲ್ಲಿ ರಾಜಸ್ಥಾನದ ಅನಂತರ ಅತಿ ಹೆಚ್ಚು ಒಣ ಬೇಸಾಯ ಪ್ರದೇಶ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿ, ಇತ್ತೀಚೆಗೆ ಪರಿಸರ ವಿಕೋಪಕ್ಕೆ ತೀವ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕೃಷಿಗೆ ಅಗತ್ಯವಾಗಿದ್ದ ಸಮಗ್ರ ಯೋಜನೆ ಈ ಬಜೆಟ್‌ನಲ್ಲಿ ಕಂಡುಬರುವುದಿಲ್ಲ.
ದೇಶದಲ್ಲಿ ಪ್ರಥಮ ಬಾರಿಗೆ ಕೃಷಿ ಬೆಲೆ ಆಯೋಗ ಸ್ಥಾಪಿಸಿದ ಖ್ಯಾತಿ ಕರ್ನಾಟಕದ್ದು. ದಾಖಲೆ ಪ್ರಮಾಣದ 5 ಲಕ್ಷ ಟನ್ ರಾಗಿ ಜತೆಗೆ ತೊಗರಿ, ಭತ್ತ ಇತ್ಯಾದಿಗಳ ಖರೀದಿಗೆ ಮುಂದಾಗಿರುವುದು ಈ ಬಾಬಿ¤ಗೆ 3,500 ಕೋಟಿ ರೂ.ಗಳ ಆವರ್ತನಿಧಿ ಸೃಷ್ಟಿಸಿರುವುದು ಸ್ವಾಗತಾರ್ಹ. ಆದರೆ ನಮ್ಮ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ದುರ್ಬಲಗೊಳಿಸಿರುವ ಪರಿಣಾಮ, ಅತ್ಯಲ್ಪ ಪ್ರಮಾಣದ ರೈತರ ಉತ್ಪನ್ನ ಎಪಿಎಂಸಿ ವ್ಯಾಪ್ತಿಗೆ ಬಂದು ಮಾರಾಟವಾಗುತ್ತಿದೆ. ಆದರೆ ಬಂದಂತಹ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಬಜೆಟ್‌ನಲ್ಲಿ ಗಮನ ಹರಿಸಿಲ್ಲ.
ಸಿರಿಧಾನ್ಯಗಳ ಬೇಡಿಕೆ ಹೆಚ್ಚಿಸಿ ಅದರ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕೇಂದ್ರ ಸರಕಾರ ಇತ್ತೀಚಿನ ಬಜೆಟ್‌ನಲ್ಲಿ ಪೋ›ತ್ಸಾಹ ನೀಡಿದೆ. ಇದಕ್ಕೆ ಪೂರಕವಾಗಿ ಬೆಳೆಗಾರರಿಗೆ ಪ್ರತೀ ಹೆಕ್ಟೇರ್‌ಗೆ 10,000 ರೂ. ಪ್ರೋತ್ಸಾಹಧನ ಘೋಷಿಸಿ ಮೌಲ್ಯವರ್ಧನೆಗೂ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ರೈತ ಸಿರಿ ಯೋಜನೆಯಡಿ ನೀಡಿರುವ ಸಹಾಯಧನವು ಪ್ರಮಾಣ ಕಡಿಮೆ.
ಭೂಸಿರಿ ಯೋಜನೆಯ ಅಡಿ ಅಲ್ಪಾವಧಿ ಸಾಲವನ್ನು ಶೂನ್ಯದರದಲ್ಲಿ 5 ಲಕ್ಷ ರೂ.ಗೇರಿಸಿರುವುದು ಉತ್ತಮ ಬೆಳವಣಿಗೆ. ಆದರೆ ಬೆಳೆದ ಅನಂತರ ಮಾರುಕಟ್ಟೆಗೆ ಉತ್ಪನ್ನ ತಂದಾಗ, ಧಾರಣೆ ಕುಸಿದಾಗ ಶೇಖರಣೆ ಮಾಡಿ ಅಡಮಾನ ಸಾಲ ವ್ಯವಸ್ಥೆ ಜಾರಿಗೆ ತರುವುದು ಅಗತ್ಯ. ಅಡಮಾನ ಸಾಲ ಕೂಡ ರೈತರಿಗೆ ಸಿಗುವಂತೆ ಆಗಬೇಕು. ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ನಮ್ಮ ತೋಟಗಾರಿಕೆಗೆ, ತೃತೀಯ ಸ್ಥಾನದಲ್ಲಿರುವ ಮತ್ಸéಗಾರಿಕೆ ವಲಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ಸಿಕ್ಕಿಲ್ಲ. 9 ಲಕ್ಷ ಹಾಲು ಉತ್ಪಾದಕರಿಗೆ ನೀಡುವ ಪೋ›ತ್ಸಾಹ ಧನ ಮುಂದುವರಿಸಿದ್ದರೂ ಉತ್ಪಾದನೆ ಜಾಸ್ತಿಯಾಗಿ ರಸ್ತೆಗೆ ತಂದು ಸುರಿಯುವ ರೈತರ ದುಃಸ್ಥಿತಿಗೆ ಸೂಕ್ತ ಪರಿಹಾರ ಕಂಡುಬರುತ್ತಿಲ್ಲ.
-ಪ್ರಕಾಶ್ ಕಮ್ಮರಡಿ,ಕೃಷಿ ತಜ್ಞ