Advertisement

Budget; ಕೊೖಲ: ಈ ವರ್ಷ ಪಶು ವೈದ್ಯಕೀಯ ಮಹಾವಿದ್ಯಾಲಯ ಕಾರ್ಯಾರಂಭ

11:49 PM Feb 16, 2024 | Team Udayavani |

ಪುತ್ತೂರು: ಕಡಬ ತಾಲೂಕಿನ ಕೊೖಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ 2024ರ ಡಿಸೆಂಬರ್‌ ಹೊತ್ತಿನಲ್ಲಿ ಕಾರ್ಯಾರಂಭಿಸುವ ಬಗ್ಗೆ ಬಜೆಟಿನಲ್ಲಿ ಘೋಷಿಸಲಾಗಿದೆ.

Advertisement

ಮಹಾವಿದ್ಯಾಲಯವು 247 ಎಕ್ರೆ ಜಾಗ ಹೊಂದಿದ್ದು, ಪ್ರಥಮ ಹಂತದ ಕಾಮಗಾರಿ 136 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಕಾಲೇಜು ಕಟ್ಟಡ, ಬಾಲಕರ, ಬಾಲಕಿಯರ ವಸತಿಗೃಹ, ಅತಿಥಿ ಗೃಹ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ಕಟ್ಟಡಗಳ ನಿರ್ಮಾಣವಾಗಿದೆ. ನಾಲ್ಕು ಹಂತ ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಎರಡನೇ ಹಂತದಲ್ಲಿ ಗ್ರಂಥಾಲಯ, ಸಭಾಂ ಗಣ, ಕಾಂಕ್ರೀಟ್‌ ರಸ್ತೆ, ಆವರಣ ಗೋಡೆ, ಸಿಬಂದಿ ವಸತಿಗೃಹ, ವಿದ್ಯಾರ್ಥಿ ಕಲಿಕಾ ಸಭಾಂ ಗಣ, ಹಾಸ್ಟೆಲ್‌ಗ‌ಳು, ಕುರಿ, ಮೇಕೆ, ಹಸು ಸಾಕಣೆಯ ಕಟ್ಟಡ ನಿರ್ಮಾಣಗೊಳ್ಳಲಿವೆ. ಉಪಕರಣ, ಪ್ರಯೋಗಾಲಯಗಳ ಸ್ಥಾಪನೆ ಮತ್ತು ಬೋಧಕರ ನೇಮಕಾತಿ ಮೂರು ಮತ್ತು ನಾಲ್ಕನೇ ಹಂತದಲ್ಲಿ ನಡೆಯುತ್ತದೆ. ಇದಕ್ಕಾಗಿ 245 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

57 ಹುದ್ದೆ ಮಂಜೂರು
ಕೊೖಲ ಪಶು ವೈದ್ಯಕೀಯ ಮಹಾವಿದ್ಯಾ ಲಯಕ್ಕೆ ಬೋಧಕ ಹಾಗೂ ಬೋಧಕೇತರ ಸಿಬಂದಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ 175 ಹುದ್ದೆಗಳ ಬೇಡಿಕೆಯನ್ನು ಸರ ಕಾರಕ್ಕೆ ಸಲ್ಲಿಸಲಾಗಿದೆ. ಪ್ರಥಮ ವರ್ಷದ ತರಗತಿ ಆರಂಭಿಸಲು 25 ಮಂದಿ ಬೋಧಕರು, 15 ಮಂದಿ ಬೋಧಕೇತರರು ಹಾಗೂ 17 ಅಧಿಕಾರಿ ಹುದ್ದೆಗಳು ಸೇರಿ ಒಟ್ಟು 57 ಹುದ್ದೆಗಳನ್ನು ಪ್ರಥಮ ಹಂತದಲ್ಲಿ ಮಂಜೂರುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next