Advertisement

Budget: ಉಡುಪಿ- ಈ ಬಾರಿಯದ್ದೂ ನಿರೀಕ್ಷೆಯಷ್ಟೇ !

12:25 AM Jul 08, 2023 | Team Udayavani |

ಉಡುಪಿ: ಪ್ರತೀ ಬಾರಿ ರಾಜ್ಯ ಬಜೆಟ್‌ ಸಂದರ್ಭದಲ್ಲಿ ಉಡುಪಿ ಜಿಲ್ಲೆಯು ಒಂದಿಷ್ಟು ಹೊಸ ಯೋಜನೆ, ಕಾರ್ಯಕ್ರಮಗಳ ನಿರೀಕ್ಷೆಯಲ್ಲಿರುತ್ತದೆ. ಕೆಲವೇ ಬಾರಿ ಈಡೇರಿದರೆ, ನಿರಾಸೆ ಮೂಡಿಸಿದ್ದೇ ಹಲವು ಬಾರಿ.

Advertisement

ಈ ಬಾರಿ ಅದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಗೆ ಸರಕಾರಿ ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ಕೃಷಿ ಕಾಲೇಜು, ಕಡಲ್ಕೊರೆತಕ್ಕೆ ಶಾಶ್ವತ ಯೋಜನೆ, ವಿಮಾನ ನಿಲ್ದಾಣ ಇತ್ಯಾದಿ ನಿರೀಕ್ಷೆಗಳಿದ್ದವು. ಅವುಗಳಲ್ಲಿ ಯಾವುವೂ ದಡ ಸೇರಲಿಲ್ಲ.

ಜಿಲ್ಲೆಗೆಂದೇ ಯಾವುದೇ ವಿಶೇಷ ಯೋಜನೆ ಅಥವಾ ಕಾರ್ಯಕ್ರಮವಿಲ್ಲ. ಆದರೆ, ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ರಚನೆಯಾಗಲಿದೆ. ಕಡಲ ತೀರದ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನೆ ತಯಾರಾಗಲಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳಾದ ಮಲ್ಪೆ, ಸೈಂಟ್‌ ಮೆರೀಸ್‌ ದ್ವೀಪ, ಮರವಂತೆ, ಕಾಪು, ಸೋಮೇಶ್ವರ ಮೊದಲಾದ ಕಡೆ ಅಭಿವೃದ್ಧಿಗೆ ಆದ್ಯತೆ ಸಿಗುವ ಸಾಧ್ಯತೆಯಿದೆ.

ಉಳಿದಂತೆ ಕರಾವಳಿಯ ಮೀನುಗಾರ ಮಹಿಳೆಯರಿಗೆ ಮೂರು ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ, ಮೀನುಗಾರಿಕೆ ದೋಣಿಗಳಿಗೆ ನೀಡುವ ರಿಯಾಯತಿ ದರದ ಡೀಸೆಲ್‌ ಮಿತಿ 1.50 ಲಕ್ಷ ಕಿ.ಲೀ.ನಿಂದ 2 ಲಕ್ಷಕ್ಕೆ ಏರಿಕೆ, ಮೀನುಗಾರಿಕೆ ಬೋಟುಗಳ ಸೀಮೆಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್‌/ ಡೀಸೆಲ್‌ ಇಂಜಿನ್‌ಗಳಾಗಿ ಬದಲಾಯಿಸಲು ಸಹಾಯಧನ-ಇವಷ್ಟೇ ಮೀನುಗಾರರಿಗೆ ಲಾಭ.

ಮಲ್ಪೆ, ಗಂಗೊಳ್ಳಿ ಬಂದರಿನ ಜಟ್ಟಿ ಪ್ರದೇಶದಲ್ಲಿ ಎರಡು ವರ್ಷಕ್ಕೊಮ್ಮೆ ಹೂಳೆತ್ತುವುದು, ನೈಸರ್ಗಿಕ ಮೀನುಗಾರಿಕೆ ಬಂದರುಗಳ ಸುಸ್ಥಿತಿಗೆ ಸಮಗ್ರ ಕರಾವಳಿ ನಿರ್ವಹಣ ಸಮಿತಿಯ ಸಬಲೀಕರಣದಿಂದ ಮೀನುಗಾರಿಕೆಗೆ ಅನುಕೂಲ ಆಗಬಹುದು.

Advertisement

ಜಿಲ್ಲೆಯ ಗುಡ್ಡಗಾಡು ಪ್ರದೇಶಗಳ ರೈತರು ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕ್‌ಅಪ್‌ ವ್ಯಾನ್‌ ಖರೀದಿಸಲು 7 ಲ. ರೂ.ಗಳ ವರೆಗೂ ಶೇ.4ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸಿಗಲಿದೆ. ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ರಾಜ್ಯದಲ್ಲಿ ಮೀನಿನ ರಫ್ತು ಮತ್ತು ಬಲವರ್ಧನೆಗೆ ಹಿಂದಿನ ಸರಕಾರ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಸೀಫ‌ುಡ್‌ ಪಾರ್ಕ್‌ ರಚಿಸುವುದಾಗಿ ಹಿಂದಿನ ಸರಕಾರ ಘೋಷಿಸಿತ್ತು. ಆದರೆ, ಅದಕ್ಕೆ ಅನುದಾನವೂ ನೀಡಿಲ್ಲ. ಕಾರ್ಕಳದಲ್ಲಿ ಜವಳಿ ಪಾರ್ಕ್‌ ನಿರ್ಮಾಣಕ್ಕೆ ವೇಗ ನೀಡುವ ಬಗ್ಗೆಯೂ ಹೇಳಿಲ್ಲ. ಬೈಂದೂರಿನಲ್ಲಿ ಮರಿನಾ( ಖಾಸಗಿ ಮಿನಿ ಹಡಗು ತಂಗುದಾಣ) ನಿರ್ಮಾಣ ಕುರಿತೂ ಪ್ರಸ್ತಾಪಿಸಿಲ್ಲ. ಹೊಸ ತಾಲೂಕುಗಳಾದ ಕಾಪು, ಹೆಬ್ರಿ, ಬೈಂದೂರು ಹಾಗೂ ಬ್ರಹ್ಮಾವರದ ತಾಲೂಕು ಆಸ್ಪತ್ರೆಯ ಕನಸು ನನಸಾಗಿಲ್ಲ. ಜಿಲ್ಲೆಗೆ ರಾಜ್ಯ ವಿಪತ್ತು ನಿರ್ವಹಣ ಪಡೆಯ(ಎಸ್‌ಡಿಆರ್‌ಎಫ್) ಘಟಕ ಬೇಕು ಎಂಬು ಬೇಡಿಕೆಯೂ ಈಡೇರಿಲ್ಲ. ಪಶ್ಚಿಮವಾಹಿನಿ ಯೋಜನೆ, ಜವಳಿ ಪಾರ್ಕ್‌, ಸೀಫ‌ುರ್ಡ್‌ ಪಾರ್ಕ್‌ ಬಗ್ಗೆಯೂ ಪ್ರಸ್ತಾವಿಸಿಲ್ಲ.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next