Advertisement
ನಿರ್ಮಲಾ ಸೀತಾರಾಮನ್ ಅವರ ಬಹು ನಿರೀಕ್ಷಿತ ಬಜೆಟ್-2020 ಇದೀಗ ಹೊರಬಂದಿದೆ. ಅಭೂತಪೂರ್ವ ಮಾದರಿಯಲ್ಲಿ ಈ ಬಜೆಟ್ ನಮ್ಮ ಮುಂದೆ ಎರಡೆರಡು ಕರಪಟ್ಟಿಯನ್ನು ಇರಿಸಿ ಬೇಕಾದ್ದನ್ನು ಆಯ್ದುಕೊಳ್ಳುವಂತೆ ಹೇಳಿದೆ. ಇದು ಭರತ ಖಂಡದಲ್ಲಿಯೇ ಮೊತ್ತ ಮೊದಲ ಬಾರಿ. ಒಂದು ಕರಪಟ್ಟಿ ಇರುವಾಗಲೇ ಅರ್ಥವಾಗದ ಕಬ್ಬಿಣದ ಕಡಲೆಯಂತಿದ್ದ ಕರ ಕಾನೂನು ಇದೀಗ ಎರಡೆರಡು ಪಟ್ಟಿಗಳನ್ನು ಎದುರಿಟ್ಟು ಜನ ಸಾಮಾನ್ಯರ ಗೊಂದಲವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ನಮ್ಮಂತಹ ಕುಡಿಕೆ ಪಾರ್ಟಿಗಳಿಗೆ ಒಂದೊಳ್ಳೆಯ ಸುಗ್ಗಿಯ ಕಾಲ. ಎಲ್ಲವೂ ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾದರೆ ಮತ್ತೆ ನಮ್ಮಂತಹ ಕೊರೆಯಪ್ಪಂದಿರಿಗೆ ಮತ್ತೇನು ಕೆಲಸ. ಅಲ್ಲವೇ? ಆಲ್ ರೈಟ್! ಮುಂದಕ್ಕೆ ಹೋಗೋಣ! ಎರಡೆರಡು ಪಟ್ಟಿಗಳ ಈ ಹೊಸ ಗೊಂದಲವನ್ನು ತುಸು ಸೂಕ್ಷವಾಗಿ ನೋಡೋಣ:
Related Articles
(ಟೇಬಲ್ ನೋಡಿ) ಸಂಕ್ಷಿಪ್ತವಾಗಿ ಹೇಳುವುದಾದರೆ ರೂ 5 ಲಕ್ಷ ಆದಾಯ ಇರುವವರಿಗೆ ಯಾವ ಪದ್ಧತಿಯಾದರೂ ಒಂದೇ. ಯಾಕೆಂದರೆ ಸೆಕ್ಷನ್ 87ಎ ಪ್ರಕಾರ ಎರಡೂ ಪದ್ಧತಿಯಲ್ಲೂ ರೂ 5 ಲಕ್ಷಕ್ಕಿಂತ ಕಡಿಮೆ ಕರಾರ್ಹ ಆದಾಯ ಉಳ್ಳವರಿಗೆ ಯಾವುದೇ ಆದಾಯ ಕರ ಇರುವುದಿಲ್ಲ. ರೂ 7.5 ಲಕ್ಷ ಸಂಪಾದನೆ ಮಾಡುವವರಿಗೆ ಹೊಸ ಪದ್ಧತಿಯಲ್ಲಿ ರೂ 26,000 ಲಾಭ ಎಂದು ತೋರಿದರೂ ರೂ 1,25,000 ಮೀರಿದ ಹೂಡಿಕೆ/ರಿಯಾಯಿತಿ ಉಳ್ಳವರಿಗೆ ಚಾಲ್ತಿ ಪದ್ಧತಿಯೇ ಲಾಭದಾಯಕ. ಇನ್ನು, ರೂ 10 ಲಕ್ಷ ಆದಾಯ ಉಳ್ಳವರು ಹೊಸ ಪದ್ಧತಿಯಲ್ಲಿ ರೂ 39,000 ಉಳಿಸುವಂತೆ ಕಾಣುತ್ತದಾದರೂ ಅವರ ಹೂಡಿಕೆ/ರಿಯಾಯಿತಿಗಳು ರೂ 1,87,500 ದಾಟಿದಲ್ಲಿ ಚಾಲ್ತಿ ಪದ್ಧತಿಯೇ ಲಾಭದಾಯಕ. ಇನ್ನು ರೂ 12.5 ಲಕ್ಷ ಆದಾಯದವರು ಕನಿಷ್ಠ ರೂ 2,08,333 ಲಕ್ಷದ ವಿವಿಧ ಹೂಡಿಕೆ/ರಿಯಾಯಿತಿಗಳ ಮೂಲಕ ಚಾಲ್ತಿ ಪದ್ಧತಿಯಲ್ಲಿಯೇ ಉಳಿದುಕೊಂಡು ಲಾಭ ಗಳಿಸಬಹುದು. ಹಾಗೆಯೇ ರೂ 15 ಲಕ್ಷ ಮೀರಿದ ಆದಾಯ ಇರುವ ಎಲ್ಲರೂ ಕೂಡಾ ಕನಿಷ್ಠ ರೂ 2,50,000 ಹೂಡಿಕೆ/ರಿಯಾಯಿತಿ ಪಡ ಕೊಂಡು ಚಾಲ್ತಿ ಪದ್ಧತಿಯಲ್ಲಿ ಮುಂದುವರಿಯುವುದೇ ಉತ್ತಮ. ಇಲ್ಲಿ ನೀಡಿದ ಹೂಡಿಕಾ/ರಿಯಾಯಿತಿ ಮೊತ್ತ ಈ ಎರಡೂ ಸಿಸ್ಟಮ್‌ಗಳು ಬರಾಬರಿಯಾಗಲು ಬೇಕಾಗುವ ಕನಿಷ್ಠ ಮೊತ್ತಗಳು. ಕನಿಷ್ಠಕ್ಕಿಂತ ಜಾಸ್ತಿ ಹೂಡಿದಂತೆÇÉಾ ಚಾಲ್ತಿ ಪದ್ಧತಿ ಹೊಸ ಪಟ್ಟಿಗಿಂತ ಜಾಸ್ತಿ ಲಾಭದಾಯಕ ವಾಗುತ್ತಾ ಹೋಗುತ್ತದೆ. ಅಲ್ಲದೆ, ವಾಸ್ತವದಲ್ಲಿ ತುಂಬಾ ಜನರು ಅದಕ್ಕೂ ಮೀರಿದ ಹೂಡಿಕೆಗಳನ್ನು ರಿಯಾಯಿತಿ ಗಳನ್ನು ಗಳಿಸುತ್ತಾ ಇ¨ªಾರೆ ಕೂಡಾ.
Advertisement
ಈ ಹೂಡಿಕೆ ರಿಯಾಯಿತಿಗಳಲ್ಲಿ ನಿಮ್ಮ ಸ್ಟಾಂಡರ್ಡ್ ಡಿಡಕ್ಷನ್, ಪಿಪಿಎಫ್, ವಿಮೆ, ಹೌಸಿಂಗ್ ಲೋನ್, ಎನ್. ಪಿ.ಎಸ್ ಇತ್ಯಾದಿಗಳು ಇರುವ ಕಾರಣ ಸರ್ವರಿಗೂ ಬಹುತೇಕ ಹೂಡಿಕೆ ನಿರಾಯಾಸವಾಗಿ ಆಗುತ್ತದೆ ಮತ್ತು ಅಂಥವರಿಗೆ ಈಗ ಇರುವ ಚಾಲ್ತಿ ಪದ್ಧತಿಯೇ ಉತ್ತಮ.
ನಿಜವಾಗಿ ಹೇಳುವುದಾದರೆ ಯಾವ ವರ್ಗಕ್ಕೆ ಈ ಹೊಸ ಪಟ್ಟಿ ಸೂಕ್ತವಾಗಲಿದೆ ಮತ್ತು ಯಾವ ಲೆಕ್ಕಾಚಾರ ಇಟ್ಟುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ ಎನ್ನುವುದು ತುಸು ಗೊಂದಲಮಯ ವಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತೋರಿಸಿದ ಲಾಭ (ರೂ 78,000) ಒಂದು ಪೈಸೆ ಹೂಡಿಕೆ/ರಿಯಾಯಿತಿ ಇಲ್ಲದ ವರಿಗೆ ಮಾತ್ರ. ವಾಸ್ತವದಲ್ಲಿ ಅಂತವರು ಯಾರೂ ಇಲ್ಲ. ಹಾಂ! ಸರಿ ಸುಮಾರು ರೂ 5-7 ಲಕ್ಷದ ಆದಾಯ ವರ್ಗದಲ್ಲಿ ಕರವಿನಾಯಿತಿಗಾಗಿ ಇಲ್ಲಿ ಕೊಟ್ಟ ಮೊತ್ತದಷ್ಟು ಹೂಡಿಕೆ ಮಾಡಲಾಗದವರು ಎÇÉಾದರು ಇದ್ದರೆ (ಕೆಲವರಿರಬಹುದು) ಅಂತಹ ಬೆರಳೆಣಿಕೆಯ ಸೀಮಿತ ಮಂದಿಗೆ ಮಾತ್ರ ಹೊಸ ಪಟ್ಟಿ ಸಹಕಾರಿಯಾದೀತು. ಅದಕ್ಕಿಂತ ಜಾಸ್ತಿ ಆದಾಯ ಇರುವವರಿಗೆ ಖಂಡಿತವಾಗಿ ಹೂಡಿಕೆ/ರಿಯಾಯಿತಿ ಅಸಾಧ್ಯವಲ್ಲ.
ಹಾಗಾಗಿ ಬಹುತೇಕ ಸಾರ್ವಜನಿಕರಿಗೆ ಈ ಹೊಸ ಪಟ್ಟಿ ಊಟಕ್ಕೆ ಇಲ್ಲದ ಉಪ್ಪಿನಕಾಯಿಯೇ ಸರಿ. ಅಷ್ಟೇ ಏಕೆ? ಅರಿವಿಲ್ಲದೆ ಹೊಸ ಪಟ್ಟಿಗೆ ಹೋದರೆ ಹೆಚ್ಚುವರಿ ಹೂಡಿಕೆ ರಿಯಾಯಿತಿಗಳ ಲಾಭ ಕಳಕೊಂಡು ತೀವ್ರವಾದ ನಷ್ಟಕ್ಕೆ ಕೈ ಹಾಕುವಿರಿ.
ಇನ್ನೊಂದು ವಿಪರ್ಯಾಸ ಈ ಬಾರಿ ನಡೆದುದೇನೆಂದರೆ ಈ ಪಟ್ಟಿಯ ಆಯ್ಕೆಯನ್ನು ಒಂದೇ ಬಾರಿ ಮಾಡಬಹುದಾಗಿದೆ. ಒಮ್ಮೆ ಆಯ್ದ ಪಟ್ಟಿಯಲ್ಲಿಯೇ ಮುಂದುವರಿಯಬೇಕು. ಮುಂದಕ್ಕೆ ನಮ್ಮ ಆದಾಯದಲ್ಲಿ ವ್ಯತ್ಯಾಸವಾದಂತೆ ಪಟ್ಟಿಯಿಂದ ಪಟ್ಟಿಗೆ ಹಾರುವಂತಿಲ್ಲ. ಮುಂದಕ್ಕೆ ಈ ಎರಡು ಪಟ್ಟಿಗಳಲ್ಲಿ ಯಾವ ಬದಲಾವಣೆಗಳು ಬರುತ್ತವೋ ದೇವನೇ ಬಲ್ಲ.
ನೀವು ಆಯ್ದ ಪಟ್ಟು ಕೆಳಕ್ಕೆ ಹೋಗಿ ಆಯದ ಪಟ್ಟಿಯಲ್ಲಿ ಕಡಿತ ನೀಡಿದರೆ ನಿಮಗೆ ಆ ಲಾಭ ಸಿಗಲಾರದೇನೋ? ಒಟ್ಟಿನಲ್ಲಿ ಈ ಹೊಸ ಪದ್ಧತಿಯ ಮೂಲಕ ನಿರ್ಮಲಾ ಸೀತಾರಾಮನ್ ಆದಾಯ ಕರದಲ್ಲಿ ಮತ್ತಷ್ಟೂ ಗೊಂದಲಗಳನ್ನು ಸೃಷ್ಟಿ ಮಾಡಿ¨ªಾರೆ. ಏನೇ ಇರಲಿ ಸದ್ಯಕ್ಕಂತೂ ಚಾಲ್ತಿ ಪಟ್ಟಿಯೇ ಮೇಲು.
– ಜಯದೇವ ಪ್ರಸಾದ ಮೊಳೆಯಾರ