Advertisement
ನಿರ್ಮಲಾ ಮಾತಿನಲ್ಲಿ ನಿಸ್ಸೀಮರು: ಖರ್ಗೆಲೋಕಸಭೆ ಮತ್ತು ರಾಜ್ಯ ಸಭೆ ಕಲಾಪಗಳಲ್ಲೂ ಕೇಂದ್ರ ಬಜೆಟ್ ವಿರೋಧಿಸಿ ವಿಪಕ್ಷಗಳು ಘೋಷಣೆ ಮೊಳಗಿಸಿವೆ. ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾ ಟಕದಿಂದ ಆಯ್ಕೆ ಯಾ ದವರು, ಬಜೆಟ್‌ನಲ್ಲಿ ಕರ್ನಾಟಕಕ್ಕೂ ಸಿಹಿ ನೀಡುವರೆಂದು ಭಾವಿಸಿ ದ್ದೆವು. ಆದರೆ ಅದು ಹುಸಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ. ನಿರ್ಮಲಾ ಅವರಿಗೆ ಪ್ರತಿಕ್ರಿಯಿಸಲು ಸಭಾ ಧ್ಯಕ್ಷರು ಅವಕಾಶ ನೀಡುವ ಮುನ್ನವೇ “ಮಾತೆ ಮಾತಿನಲ್ಲಿ ನಿಸ್ಸೀಮರು ‘ಎಂದು ನನಗೆ ತಿಳಿದಿದೆ. ನಾನು ಹೇಳಬೇಕಿರುವುದನ್ನು ಹೇಳಿದ್ದೇನೆ. ಎಲ್ಲಾ ರಾಜ್ಯಗಳ ತಟ್ಟೆ ಖಾಲಿ ಇಟ್ಟು ಆಂಧ್ರ- ಬಿಹಾರದ ತಟ್ಟೆಗೆ ಮಾತ್ರ ಕೇಂದ್ರದ ಬಜೆಟ್‌ನಲ್ಲಿ ಜಿಲೇಬಿ, ಪಕೋಡವನ್ನು ನೀಡಲಾಗಿದೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ತೆಲಂಗಾಣಕ್ಕೆ ನೀಡಬೇಕಾದ ಹಣವನ್ನೂ ನೀಡದೇ, ಕೊಡಬೇಕಾದ ಅನುಮತಿಗಳನ್ನೂ ಕೊಡದೇ ರಾಜ್ಯದ ಹಿತಾಸಕ್ತಿಗೆ ಕೇಂದ್ರ ಸರಕಾರ ಧಕ್ಕೆ ತಂದಿದೆ. ಈ ಕಾರಣ ಜು.27ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ತೆಲಂಗಾಣ ಸಿಎಂ ಆಗಿ ನಾನು ಬಹಿಷ್ಕರಿಸು ತ್ತಿದ್ದೇನೆ. ಪ್ರಧಾನಿ ನೇತೃತ್ವದ ಈ ಸಭೆಗೆ ಹಾಜರಾಗಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಮೋದಿ, ಹಗೆ ಸಾಧಿಸಿದರೆ ಒಂಟಿಯಾಗ್ತಿàರಿ: ಸ್ಟಾಲಿನ್
ಕೇಂದ್ರ ಬಜೆಟ್ ನಿಮ್ಮ ಅಧಿಕಾರವನ್ನು ಕಾಪಾಡಬಹುದು ಆದರೆ ದೇಶವನ್ನು ಕಾಪಾ ಡಲಾರದು. ಚುನಾವಣೆ ಮುಗಿದಿದೆ. ವಿಪಕ್ಷಗಳ ವಿರುದ್ಧ ಇನ್ನೂ ಹಗೆ ಸಾಧಿಸಿದರೆ ನೀವು ಒಬ್ಬಂಟಿಯಾಗ ಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಅವ ರನ್ನು ಉಲ್ಲೇಖೀಸಿ ತಮಿ ಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ಬಜೆಟ್ ವಿರೋಧಿಸಿ ಟ್ವೀಟ್ ಮಾಡಿರುವ ಸ್ಟಾಲಿನ್, ನಿಮ್ಮನ್ನು ಸೋಲಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಮಯ ಇದಲ್ಲ. ಈಗ ದೇಶಕ್ಕಾಗಿ ಯೋಚಿಸುವ ಸಮಯ. ನೀವು ನಿಮ್ಮ ಇಷ್ಟ ಕಷ್ಟದಂತೆ ಆಡಳಿತ ನಡೆಸಿದರೆ ಖಂಡಿತವಾಗಿ ಒಬ್ಬಂಟಿಯಾಗ ಬೇಕಾಗುತ್ತದೆ. ದ್ವೇಷ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಆಡಳಿತ ನಡೆಸಿ ಎಂದು ಆಗ್ರಹಿಸಿದ್ದಾರೆ.
Related Articles
ಕೇಂದ್ರ ಅನುದಾನ ಬಿಡುಗಡೆಗೆ ಸಂಬಂಧಿ ಸಿದಂತೆ ಬಜೆಟ್‌ನಲ್ಲಿ ಪಶ್ಚಿಮ ಬಂಗಾಲದ ಹೆಸರು ಉಲ್ಲೇಖೀಸಿಲ್ಲ ಎಂದು ಟಿಎಂಸಿ ನಾಯಕಿ ಸುಷ್ಮಿತಾ ದೇವ್ ಟೀಕಿಸಿದ್ದಾರೆ. ವಿಶೇಷ ಅನು ದಾನ ನೀಡುವಲ್ಲಿ ಸರಕಾರ ಮುತುವರ್ಜಿ ವಹಿಸಿಲ್ಲ ಎಂದು ಟ್ವೀಟ್ ಮಾಡಿ ಆರೋಪಿ ಸಿದ್ದರು. ಅದಕ್ಕೆ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 10 ವರ್ಷಗಳಿಂದ ಪಶ್ಚಿಮ ಬಂಗಾಲ ಸರಕಾರ ಕೇಂದ್ರ ಸರಕಾರದ ಯೋಜನೆಗಳನ್ನು ಸರಿ ಯಾಗಿ ಅನುಷ್ಠಾನ ಮಾಡಿಲ್ಲ. ಈಗ ಬಜೆಟ್ ಅನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಬಜೆಟ್‌ನಲ್ಲಿ ಯಾವ ರಾಜ್ಯಗಳ ಹೆಸರಿಲ್ಲವೋ ಅವುಗಳಿಗೆ ಕೇಂದ್ರದ ಯೋಜನೆ ತಲುಪುವುದಿಲ್ಲ ಎಂದೇನೂ ಇಲ್ಲ ಎಂದೂ ಸಚಿವೆ ಹೇಳಿದರು.
Advertisement