Advertisement

Mallikarjun Kharge; ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್‌

09:30 PM Jul 23, 2024 | Team Udayavani |

ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್‌ “ಕಾಪಿಕ್ಯಾಟ್‌’ ಬಜೆಟ್‌ ಆಗಿದ್ದು, ಇದು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್‌ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Advertisement

ಮೋದಿ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಬಜೆಟ್‌ ಮಂಡನೆಯಾಗಿದೆ ಎಂದಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆ ದು ಕೊಂಡಿ ರುವ ಖರ್ಗೆ, “ಮೋದಿ ಸರ್ಕಾರದ “ಕಾಪಿಕ್ಯಾಟ್‌ ಬಜೆಟ್‌’ಗೆ ಸರಿಯಾಗಿ ಕಾಂಗ್ರೆಸ್‌ನ ನ್ಯಾಯಪತ್ರವನ್ನು ನಕಲು ಮಾಡಲೂ ಬಂದಿಲ್ಲ. ತಮ್ಮ ಮಿತ್ರ ಪಕ್ಷಗಳಿಗಾಗಿ ಅರೆ ಮನಸ್ಸಿನಲ್ಲಿ ಉಚಿತ ಕೊಡುಗೆಗಳನ್ನು ನೀಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ದೇಶದ ಪ್ರಗತಿಗಾಗಿ ಮಂಡನೆಯಾದ ಬಜೆಟ್‌ ಅಲ್ಲ. ಇದು “ಸೇವ್‌ ಮೋದಿ ಗೌರ್ನಮೆಂಟ್‌ ಬಜೆಟ್‌’ ಎಂದು ಹೇಳಿದ್ದಾರೆ.

ಹತ್ತು ವರ್ಷಗಳಿಂದ ಉದ್ಯೋಗ ಸೃಷ್ಟಿಯ ಘೋಷಣೆಯನ್ನು ಮಾತ್ರ ಹೇಳಿ ಯುವಕರನ್ನು ಹತಾಶಗೊಳಿಸಿದ್ದು, ಈ ಬಾರಿಯೂ ಕನಿಷ್ಠ ಘೋಷಣೆ ಮಾಡಲಾಗಿದೆ. ರೈತವರ್ಗ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ ಸೇರಿದಂತೆ ಸಾಮಾಜಿಕವಾಗಿ ಶೋಷಿತ ವರ್ಗಗಳಿಗಾಗಿ ಯಾವುದೇ ಕ್ರಾಂತಿಕಾರಿ ಯೋಜನೆಯನ್ನು ಘೋಷಿಸಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ.

ಕಾಪಿ ಆ್ಯಂಡ್‌ ಪೇಸ್ಟ್‌ ಮಾಡಿರುವ ಬಜೆಟ್‌:
ಇನ್ನು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಕೂಡ ಬಜೆಟ್‌ ಅನ್ನು “ಕಾಪಿ ಆ್ಯಂಡ್‌ ಪೇಸ್ಟ್‌’, ಹಾಗೂ “ಕುರ್ಚಿ ಉಳಿಸಿ ಬಜೆಟ್‌’ ಎಂದು ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ, ಇತರ ರಾಜ್ಯಗಳ ವೆಚ್ಚದಲ್ಲಿ ಮಿತ್ರಪಕ್ಷಗಳಿಗೆ ಸುಳ್ಳು ಭರವಸೆಗಳನ್ನು ನೀಡಲಾಗಿದೆ.

2024ರ ಚುನಾವಣೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್‌ಗಳ “ಕಾಪಿ-ಪೇಸ್ಟ್‌’ ಮಾಡಿ ಈ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ತಮ್ಮ ಮಿತ್ರರಿಗೆ ತೃಪ್ತಿ ಪಡಿಸಲಷ್ಟೇ ಈ ಬಜೆಟ್‌ ಮಂಡನೆಯಾಗಿದ್ದು, ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಹುಲ್‌ ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next