Advertisement
ಹೀಗಾಗಿ, ಎಲ್ಲ ಸಲಹೆಗಳೂ ಕೂಡ ಕೇಂದ್ರ ಬಜೆಟ್ ಮಾಹಿತಿ ವ್ಯವಸ್ಥೆಯಲ್ಲಿ ಸೇರಿಸಬೇಕು ಎಂದು ಆರ್ಥಿಕ ವ್ಯವಹಾರಗಳ ವಿಭಾಗ ಸೂಚನೆ ನೀಡಿದೆ.2020-21ನೇ ಸಾಲಿಗಾಗಿ ಇರುವ ಬಜೆಟ್‌ಗೆ ಸಂಬಂಧಿಸಿದ ಪೂರ್ವಭಾವಿ ಅಂದಾಜು ವಿವರಗಳನ್ನು ವೆಚ್ಚಕ್ಕೆ ಸಂಬಂಧಿಸಿದ ಕಾರ್ಯದರ್ಶಿ ಇತರ ವಿಭಾಗಗಳ ಕಾರ್ಯದರ್ಶಿಗಳ ಜತೆಗೆ ಸಮಾಲೋಚನೆ ನಡೆಸಿ ಪೂರ್ಣಗೊಳಿಸುತ್ತಾರೆ. ಈ ಸಭೆ ಮುಂದಿನ ತಿಂಗಳ ಮೊದಲ ವಾರದವರೆಗೆ ನಡೆಯುತ್ತದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ 2ನೇ ಬಜೆಟ್ 2020ರ ಫೆಬ್ರವರಿಯಲ್ಲಿ ಮಂಡಿಸಲಾಗುತ್ತದೆ. 2017ರಿಂದ ಫೆ.1ರಂದು ಬಜೆಟ್ ಮಂಡಿಸುವ ಹೊಸ ವ್ಯವಸ್ಥೆಗೆ ಮೋದಿ ಸರಕಾರ ಶ್ರೀಕಾರ ಹಾಕಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅದು ಎರಡನೇ ಬಜೆಟ್ ಆಗಿರಲಿದೆ.