Advertisement
ಮಗ್ಗಗಳ ಮತ್ತು ಮಗ್ಗ ಪೂರ್ವ ಘಟಕಗಳಿಗೆ 10 ಎಚ್. ಪಿವರೆಗೆ ಮಾಸಿಕ ಗರಿಷ್ಠ 250 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಯೋಜನೆ ನೇಕಾರರಿಗೆ ನೆರ ವಾಗಲಿದೆ. ಆದರೆ, ಚುನಾವಣಾ ವೇಳೆ ನೇಕಾರರಿಗೆ 20 ಎಚ್.ಪಿವರೆಗೆ ಉಚಿತ ವಿದ್ಯುತ್ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು. ರಾಜ್ಯದ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ನೇಕಾರರು ಪಡೆ ಯುವ ಸಾಲದ ಮೇಲೆ ಶೇ.8ರಷ್ಟು ಬಡ್ಡಿ ಸಹಾಯಧನ ಸೌಲಭ್ಯ. ನೇಕಾರರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ ಬಿಟ್ಟರೆ ನೇಯ್ಗೆ ಉದ್ಯಮವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಇಲ್ಲ. ಕೈಗಾರಿಕಾ ವಸಾಹತು ವಸತಿ ಸಮುತ್ಛಯ, ಸಮುದಾಯ ಭವನ ನಿರ್ಮಾಣ, ಜವಳಿ ಹಾಗೂ ಸಿದ್ಧ ಉಡುಪು ವಲಯದ ಅಭಿವೃದ್ಧಿಗಾಗಿ ಹೊಸ ಜವಳಿ ನೀತಿಗಾಗಿ ಬಜೆಟ್‌ನಲ್ಲಿ ಮೀಸಲಿಡುವಂತೆ ನೇಕಾರರು ಒತ್ತಾಯಿಸಿದ್ದಾರೆ. ಮುಖ್ಯವಾಗಿ ನೇಕಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಿತ್ತು ಎನ್ನುತ್ತಾರೆ ನೇಕಾರರು.
Advertisement
ಬಜೆಟ್ ಮಿಶ್ರ ಪ್ರತಿಕ್ರಿಯೆ: ನೇಕಾರರಿಗೆ ಕೊಂಚ ಸಮಾಧಾನ
02:00 PM Jul 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.