Advertisement
ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಆಯವ್ಯಯ ಸಿದ್ಧತಾ ಪೂರ್ವ ಚನಾಯಿತ, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಯುಜಿಡಿ ಸಮಸ್ಯೆ,ತೆರಿಗೆ ವಸೂಲಿ, ಉದ್ಯಾನ ನಿರ್ವಹಣೆ, ರಸ್ತೆ ಅವ್ಯವಸ್ಥೆ, ಅಮೃತ ಸಿಟಿ ಯೋಜನೆಯಲ್ಲಿನ ಅಕ್ರಮ,ನಗರವಾಸಿಗಳ ಆಸ್ತಿಗೆ ಸಂಬಂಧಿ ಸಿದ ದಾಖಲೆನೀಡುವಲ್ಲಿನ ವಿಳಂಬ ಧೋರಣೆ, ನೀರಿನ ಸಮಸ್ಯೆಹೀಗೆ ಸಮಸ್ಯೆಗಳ ಪಟ್ಟಿಯನ್ನೇ ಹೊರ ಹಾಕಿದರು.ತೆರಿಗೆ ವಸೂಲಿಮಾಡಿ: ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆ ನಿಧಿಯಿಂದನಗರದ ಅಭಿವೃದ್ಧಿ ಸಾಧ್ಯ. ಅದಾಯ ಹೆಚ್ಚಿಸಲು ತೆರಿಗೆವಸೂಲಿ ಗುರಿ ಸಾಧನೆ ಮಾಡಬೇಕು. ತೆರಿಗೆ ವಸೂಲಿಆಗದಿರಲು ಕಾರಣವೇನು, ಅದನ್ನು ಹೆಚ್ಚಿಸಲು ಏನುಮಾಡಬೇಕು ಎಂಬುದರ ಕುರಿತು ಆಲೋಚಿಸಿ ಎಂದು ಒತ್ತಾಯಿಸಿದರು.
Related Articles
Advertisement
ನಿರ್ಲಕ್ಷ್ಯದಿಂದ ಅನುದಾನ ಕಡಿತ: ಸದಸ್ಯ ಬಿ.ಎಂ.ಮುಬಾರಕ್, ಮಂಡನೆಯಾಗಿರುವ ಬಜೆಟ್‌ಕಾರ್ಯಗತಗೊಳ್ಳಬೇಕು. ಅದು ಕೇವಲ ಖರ್ಚುವೆಚ್ಚಕ್ಕೆ ಸಿಮೀತಗೊಳ್ಳಬಾರದು. 15ನೇ ಹಣಕಾಸು,ಎಂಪಿ, ಎಂಎಲ್‌ಎ, ಎಂಎಲ್ಸಿ ನಿ ಹೀಗೆ ಅನೇಕಅನುದಾನಗಳು ಬರುತ್ತದೆ. ನಗರೋತ್ಥಾನ 4ನೇಹಂತದ ಅನುದಾನ ಶೂನ್ಯ ತೋರಿಸಿದ್ದಾರೆ, ಇದನ್ನುನೀವು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯವಹಿಸಿದರೆ ಸರ್ಕಾರದಿಂದ ಬರೋ ಅನುದಾನಕಡಿತಗೊಳ್ಳುತ್ತದೆ ಎಂದರು.
ಪೌರಕಾರ್ಮಿಕರು ಸ್ಥಿತಿ ಅತಂತ್ರ: ಪೌರಕಾರ್ಮಿಕರು ಅತಂತ್ರದ ಸ್ಥಿತಿಯಲ್ಲಿದ್ದಾರೆ. ನಿವೃತ್ತರಾದರೆ ಪಿಂಚಣಿಬರುತ್ತಿಲ್ಲ. ದಿನಗೂಲಿ, ಹೊರಗುತ್ತಿಗೆ ಆಧಾರದಮೇಲೆ ಕಾರ್ಮಿಕರು, ಜಲಗಾರರು ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ನಿವೃತ್ತರಾದರೆ ಕನಿಷ್ಠ 5ಲಕ್ಷ ಹಣ ಬರುವ ಹಾಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಚಾರ ಜಾಹಿರಾತುಗಳಿಗೆ ತೆರಿಗೆ ವಿ ಧಿಸುತ್ತಿಲ್ಲ,ನಗರಸಭೆ ಕಾಯ್ದೆ ಪ್ರಕಾರ ಟ್ಯಾಕ್ಸ್ ವಸೂಲಿಮಾಡಬೇಕು. ಈ ಬಗ್ಗೆ ತೆರೆದ ಟೆಂಡರ್ ನೀಡಿದರೆಆದಾಯ ಹೆಚ್ಚುತ್ತದೆ. ನಗರದಲ್ಲಿ ಕೇವಲ ಶೇ.25ರಷ್ಟುಮಂದಿ ಟ್ರೇಡ್ ಲೆ„ಸನ್ಸ್ ಪಡೆದುಕೊಂಡಿದ್ದಾರೆ.ಟ್ರೇಡ್ ಲೆ„ಸನ್ಸ್ ನೀಡಲು ಇರುವ ನಿಯಮಗಳ ಸಡಿಲಿಕೆ ಮಾಡಬೇಕು. ನಗರದಲ್ಲಿ ನೆಲ ಹಂತ ಬಿಟ್ಟುಎರಡು ಅಂತಸ್ತು ಮಹಡಿ ನಿರ್ಮಾಣ ಮಾಡಿಕೊಳ್ಳಲುಅವಕಾಶ ಇದೆ. ಆದರೆ, ಇದು ಮೀತಿ ಮೀರಿ ಹೋಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಶ್ವೇತಾಶಬರೀಷ್ ವಹಿಸಿದ್ದು, ಉಪಾಧ್ಯಕ್ಷ ಪ್ರವೀಣ್ ಗೌಡ,ಆಯುಕ್ತ ಶ್ರೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಎಲ್ಲಾ ನಗರ ಸಭಾ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಸಿಬ್ಬಂದಿ ಕೊರತೆ ನೀಗಿಸಿ :
ಕಚೇರಿಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕು.ಇದರಿಂದ ಅದಾಯವೂ ಹೆಚ್ಚಾಗತ್ತದೆ. ಇಲ್ಲಿನಸಿಬ್ಬಂದಿಯನ್ನು ಮತ್ತೂಂದೆಡೆಗೆ ನಿಯೋಜನೆಮಾಡುವುದನ್ನು ರದ್ದು ಮಾಡಬೇಕು. ಬಜೆಟ್‌ನಲ್ಲಿ ಸಿಬ್ಬಂದಿ ವೇತನಕ್ಕೆ ಹಣ ಮೀಸಲಿಟ್ಟು, ನೇಮಕ ಮಾಡಿಕೊಳ್ಳಬೇಕು ಎಂದು ಸದಸ್ಯ ರಾಕೇಶ್ ಗೌಡ ಸಲಹೆ ನೀಡಿದರು.
ಸೊಳ್ಳೆಕಾಟಕ್ಕೆ ಫಾಗಿಂಗ್ ಮಾಡಿ :
ನಗರದಲ್ಲಿ ಸೊಳ್ಳೆಕಾಟ ಹೆಚ್ಚಾಗಿದ್ದು, ಫಾಗಿಂಗ್‌ಮಾಡಿ ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸಬೇಕು. ನಗರದಲ್ಲಿ ಸ್ಮಶಾನಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಉದ್ಯಾನವನಗಳು ಹಾಳಾಗಿವೆ, ಮಕ್ಕಳಿಗಾಗಿ ಅಳವಡಿಸಲಾಗಿರುವ ಜಿಮ್ ಉಪಕರಣಗಳು ಹಾಳಾಗಿವೆ. ಕಳಪೆಸಾಮಾಗ್ರಿ ಅಳವಡಿಸಿರುವುದರಿಂದ ಉಪಯೋಗಕ್ಕೆ ಬಾರದೆ ಹೋಗಿದೆ ಎಂದು ವರ್ತಕರ ಸಂಘದ ಪ್ರತಿನಿಧಿ ಮನೋಹರ್ ವಿಷಾದಿಸಿದರು.