Advertisement

ಬಜೆಟ್‌ ಸಭೆ ಮೂರು ಗಂಟೆ ಅಲ್ಲ; ಅದಕ್ಕಿಂತಲೂ ಹೆಚ್ಚು

06:10 AM Jan 07, 2018 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿರುವ ಹಾಲಿ ಸರಕಾರ ಅಧಿಕಾರಕ್ಕೆ ಬರುವ ವರೆಗೆ ಬಜೆಟ್‌ ಸಿದ್ಧತೆ ಎಂದರೆ ಹಣಕಾಸು ಸಚಿವಾಲಯದ ಅಧಿಕಾರಿಗಳದ್ದೇ ಪಾರಮ್ಯ. ಅಗತ್ಯ ಬಿದ್ದರೆ ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ)ಯನ್ನು ಸಂಪರ್ಕಿಸಿ ಸಲಹೆ ಕೇಳಲಾಗುತ್ತಿತ್ತು. 

Advertisement

ಅಂತಿಮ ಕರಡನ್ನು ಪಿಎಂಒಗೆ ಸಲ್ಲಿಸಲಾಗುತ್ತಿತ್ತು. ನಾರ್ತ್‌ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿ ಫ‌ುಲ್‌ ಬ್ಯುಸಿಯಾಗಿರುತ್ತಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಬದಲಾಗಿದೆ. ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿಯೇ ಬಜೆಟ್‌ ಸಿದ್ಧತಾ ಸಭೆಗಳು ನಡೆಯುತ್ತಿವೆ. ಹಾಲಿ ಸರಕಾರ ಬರುವುದಕ್ಕಿಂತ ಮೊದಲು ಸಿದ್ಧತಾ ಸಭೆ ಹೆಚ್ಚೆಂದರೆ 3 ಗಂಟೆ ನಡೆಯುತ್ತಿತ್ತು. ಈಗ ಅದಕ್ಕಿಂತ ಹೆಚ್ಚೇ ನಡೆಯುತ್ತಿ¤ದೆ.

ಪ್ರತಿ ಬಜೆಟ್‌ ಸಿದ್ಧತೆಯಲ್ಲಿ ಪಿಎಂಒ ಮತ್ತು ಪ್ರಧಾನಿ ಮೋದಿಯವರೇ ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಈ ಬಾರಿಯೂ ಅಷ್ಟೆ. ಮುಂದಿನವಾರ ನಡೆಯಲಿರುವ ಅಂಥ ಒಂದು ಪ್ರಮುಖ ಸಿದ್ಧತಾ ಸಭೆಯಲ್ಲಿ ಪ್ರಧಾನಿ  ಮೋದಿ ಭಾಗವಹಿಸಲಿದ್ದಾರೆ.  

ಎರಡನೇ ಪ್ರಧಾನಿ:  ಮಾಸಾಂತ್ಯದಲ್ಲಿ ಸ್ವಿಜರ್ಲೆಂಡ್‌ನ‌ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಈ ಮೂಲಕ ದಾವೋಸ್‌ಗೆ ತೆರಳಲಿರುವ 2ನೇ ಪ್ರಧಾನಿ ಎಂಬ ಖ್ಯಾತಿಗಳಿಸಲಿದ್ದಾರೆ. 1997ರಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಶೃಂಗದಲ್ಲಿ ಭಾಗವಹಿಸಿದ್ದರು.

ಪ್ರಧಾನಿಗೆ ಗುಡ್‌ಮಾರ್ನಿಂಗ್‌ ಹೇಳಿದ ಸಂಸದ ಉದಾಸಿ
ಕೆಲ ದಿನಗಳ ಹಿಂದೆ ನಡೆದಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಿಎಂ ಮೋದಿ ಅವರು ಸರಕಾರದ ವಿವಿಧ ಯೋಜನೆಗಳ ಬಗ್ಗೆ ವಿಚಾರ ಮಂಡನೆಗಾಗಿ ಅಭಿವೃದ್ಧಿಪಡಿಸಲಾಗಿರುವ “ನಮೋ ಆ್ಯಪ್‌’ನಲ್ಲಿ ಸಂಸದರಿಗಾಗಿ ಇರುವ ವಿಭಾಗದಲ್ಲಿ ತಮ್ಮ ಸಂದೇಶಗಳಿಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಆಕ್ಷೇಪದ ಬಳಿಕ ಕರ್ನಾಟಕದ ಹಾವೇರಿ ಸಂಸದ ಶಿವಕುಮಾರ ಸಿ.ಉದಾಸಿ ಸೇರಿದಂತೆ ಹಲವು ಸಂಸದರು ಪ್ರತಿಕ್ರಿಯೆ ನೀಡಿದ್ದಾರೆ. ಉದಾಸಿ “ಗುಡ್‌ ಮಾರ್ನಿಂಗ್‌. ಹ್ಯಾವ್‌ ಎ ನೈಸ್‌ ಡೇ’ ಎಂದಿದ್ದರೆ, ಮಾಜಿ ಸಚಿವ ಡಾ.ಮುರಳಿ ಮನೋಹರ ಜೋಶಿ “ಹ್ಯಾಪಿ ಬರ್ತ್‌ಡೇ’ ಎಂದು ಹಾರೈಸಿದ್ದಾರೆ.  ಒಂದು ಗ್ರೂಪ್‌ನಲ್ಲಿ ಲೋಕಸಭೆಯ 285 ಬಿಜೆಪಿ ಸಂಸದರಿದ್ದಾರೆ. ಮತ್ತೂಂದರಲ್ಲಿ ಬಿಜೆಪಿಯ ರಾಜ್ಯಸಭೆ ಸದಸ್ಯರಿಗಾಗಿಯೇ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next