Advertisement

ವಿನೂತನ ವಿವಿಯೇ ಜಿಲ್ಲೆಗೆ ದೊಡ್ಡ ಕೊಡುಗೆ

01:22 PM Mar 05, 2022 | Team Udayavani |

ಚಾಮರಾಜನಗರ: ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತ ಭಿನ್ನವಾದ, ಹೆಚ್ಚುವರಿ ಮಾನವ ಸಂಪನ್ಮೂಲ ಬಳಸದೇ ಕಾರ್ಯನಿರ್ವಹಿಸುವ ವಿನೂತನ ಮಾದರಿಯ ವಿಶ್ವ ವಿದ್ಯಾನಿಲಯವನ್ನು ಜಿಲ್ಲೆಯಲ್ಲಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

Advertisement

ಇದರ ಜೊತೆಗೆ ಇನ್ನೊಂದೆರಡು ಪುಟ್ಟ ಯೋಜನೆ ಘೋಷಿಸಿರುವುದು ಬಿಟ್ಟರೆ ಹುಲಿನಾಡುಚಾಮರಾಜನಗರಕ್ಕೆ ಹೆಚ್ಚಿನ ಕೊಡುಗೆ ದೊರೆತಿಲ್ಲ.ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಬಾಗಿಲಿಗೆ ವೈದ್ಯಕೀಯ ಸೇವೆಒದಗಿಸುವ ಮುಖ್ಯಮಂತ್ರಿ ಆರೋಗ್ಯವಾಹಿನಿ ಎಂಬ ಸಂಚಾರಿ ಕ್ಲಿನಿಕ್‌ಗಳುಹಾಗೂ ವಿದ್ಯಾರ್ಥಿನಿಯರಿಗೆಪ್ರಾಯೋಗಿಕವಾಗಿ ಮೆನ್‌ಸ್ಟ್ರೆಯಲ್‌ಕಪ್‌ಗ್ಳನ್ನು ವಿತರಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಜಿಲ್ಲೆಯ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎಂಬ ಬೇಡಿಕೆ ಪ್ರಬಲವಾಗಿತ್ತು.ವಾರ್ಷಿಕ ತಲಾ 2 ಕೋಟಿ ರೂ. ಆವರ್ತಕ ವೆಚ್ಚ ಬಳಕೆಯವಿನೂತನ ಮಾದರಿಯ ವಿಶ್ವವಿದ್ಯಾಲಯವನ್ನು ಜನತೆನಿರೀಕ್ಷಿಸಿರಲಿಲ್ಲ. ಮೈಸೂರು, ಮಂಗಳೂರುಇತ್ಯಾದಿಯಲ್ಲಿರುವಂತೆ ಸಾಂಪ್ರದಾಯಿಕ ರೀತಿಯವಿಶ್ವವಿದ್ಯಾಲಯವನ್ನು ಬಯಸಿದ್ದರು. ಆದರೆ ಈಗಮುಖ್ಯಮಂತ್ರಿಯವರು ಘೋಷಿಸಿರುವ ವಿನೂತನ ವಿವಿ, ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚು ಜನಸಿಬ್ಬಂದಿಯೂ ಇಲ್ಲದೇ ಕಾರ್ಯನಿರ್ವಹಿಸಲಿದೆಯಂತೆ.ಈ ವಿನೂತನ ವಿವಿ ಯಾವ ರೀತಿ ಇರುತ್ತದೆ ಎಂಬುದು ಖಚಿತವಾಗಿಲ್ಲ.

ವರ್ಷಕ್ಕೆ 2 ಕೋಟಿ ಆವರ್ತಕ ವೆಚ್ಚ ಬಳಸಿ, ಈ ವಾರ್ಷಿಕ ಬಜೆಟ್‌ನಲ್ಲಿ ಸ್ವತಂತ್ರ ವಿವಿ ಯಾವ ರೀತಿ ಕೆಲಸಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆಅತ್ಯುತ್ತಮ ವೈದ್ಯಕೀಯ ಸೇವೆಒದಗಿಸುವ ಸಲುವಾಗಿ, ಬೀದರ್‌,ಹಾವೇರಿ, ಚಿಕ್ಕಮಗಳೂರು ಹಾಗೂಚಾಮರಾಜನಗರ ಜಿಲ್ಲೆಗಳಿಗೆಮುಖ್ಯಮಂತ್ರಿ ಆರೋಗ್ಯ ವಾಹಿನಿ ಎಂಬ ಹೊಸಯೋಜನೆಯಡಿ ಸಂಚಾರಿ ಕ್ಲಿನಿಕ್‌ಗಳನ್ನು 11 ಕೋಟಿರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 19 ಲಕ್ಷ ವಿದ್ಯಾರ್ಥಿನಿಯರಿಗೆಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯನ್ನು ಉತ್ತಮಪಡಿಸಲು ಮಹಿಳಾಸ್ವಸಹಾಯ ಸಂಘಗಳ ಗುಂಪುಗಳ ಸಹಾಯದೊಂದಿಗೆ,ದಕ್ಷಿಣಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಧ್ಯಪ್ರದೇಶದ ಮಾದರಿಯಲ್ಲಿ ಮೆನ್‌ಸ್ಟ್ರೆಯಲ್‌ ಕಪ್‌ (ಮುಟ್ಟಿನ ಕಪ್‌) ಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ವಿವಿ ಘೋಷಣೆಯೊಂದನ್ನು ಹೊರತುಪಡಿಸಿದರೆ, ಇನ್ನೆರಡು ಬಜೆಟ್‌ನಲ್ಲಿಘೋಷಿಸದೇ ಜಾರಿಗೊಳಿಸುವ ಸಾಧಾರಣಕಾರ್ಯಕ್ರಮಗಳು. ಇದಕ್ಕಿಂತ ಹೆಚ್ಚು ನಿರೀಕ್ಷಿಸಿದ್ದ ಜಿಲ್ಲೆಯ ಜನತೆಗೆ ಈ ಬಜೆಟ್‌ ನಿರಾಸೆ ತಂದಿದೆ.

Advertisement

ಈಡೇರದ ನಿರೀಕ್ಷೆಗಳು :

  • ಜಿಲ್ಲೆಯಲ್ಲಿ ಒಟ್ಟು 5 ತಾಲೂಕುಗಳಿದ್ದು, ಒಂದೇ (ಕೊಳ್ಳೇಗಾಲ) ಉಪ ವಿಭಾಗ ಇದೆ. ಕಾರ್ಯನಿರ್ವಹಣೆಗೆ ಅನುಕೂಲವಾಗಲು ಮತ್ತೂಂದು ಉಪವಿಭಾಗ ರಚನೆ ಮಾಡಬೇಕು.
  • ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲದಿಂದ ಹನೂರುವರೆವಿಗೆ ಕೆ-ಶಿಪ್‌ ಯೋಜನೆಯಡಿ ರಸ್ತೆಕಾರ್ಯ ಪ್ರಗತಿಯಲ್ಲಿದೆ. ಭಕ್ತಾದಿಗಳು ಹಾಗೂ ಸ್ಥಳೀಯರಿಗೂ ಅನುಕೂಲವಾಗುವಂತೆ ಹನೂರಿನಿಂದ ಮಲೆ ಮಹದೇಶ್ವರ ಬೆಟ್ಟದವರಗಿನ ರಸ್ತೆ ಅಭಿವೃದ್ಧಿ ಪ್ರಸ್ತಾವ ಯೋಜನೆಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಬೇಕು.
  • ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಉನ್ನತ ಆರೋಗ್ಯ ಸೌಲಭ್ಯ ಕಲ್ಪಿಸಲು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು.
  • ಹನೂರು ಜಿಲ್ಲೆಯ ಹೊಸ ತಾಲೂಕಾಗಿದೆ. ಸುಗಮ ಕಾರ್ಯನಿರ್ವಹಣೆಗಾಗಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಮಾಡಬೇಕು.
  • ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿÅàಯ ಹೆದ್ದಾರಿ 766 ಮತ್ತು 948 ಸಂಪರ್ಕಿಸುವ ಸಂತೆಮರಹಳ್ಳಿ ಮೂಗೂರು ಕ್ರಾಸ್‌ ವರೆಗಿನ 7 ಕಿ.ಮೀ. ರಸ್ತೆಯನ್ನು 18 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಪ್ರಸ್ತಾವನೆ.
  • ಯಳಂದೂರಿನ 30 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ3 ಕೋಟಿ ರೂ ವೆಚ್ಚದ ಪ್ರಸ್ತಾವ.
  • ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲು ನೂರಾರು ಕೋಟಿ ರೂ.ಗಳ ಅನುದಾನದ ಅಗತ್ಯವಿತ್ತು.
  • ಸರ್ಕಾರಿ ಕಾನೂನು ಕಾಲೇಜು ಆರಂಭವಾಗಲು ಸರ್ಕಾರ ಅನುದಾನ ಬೇಕಾಗಿತ್ತು.  ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ನಿರೀಕ್ಷಿಸಲಾಗಿದೆ. ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 279 ಕೋಟಿ ರೂ. ಅಂದಾಜಿನ ಯೋಜನೆಗೆ ಅನುದಾನ ಬೇಕಿತ್ತು.
  • ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ಬಸ್‌ ನಿಲ್ದಾಣ, ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅನುದಾನ, ಸರ್ಕಾರಿ ಕೃಷಿ ಕಾಲೇಜಿನ ನೂತನ ಕಟ್ಟಡಕ್ಕೆ ಅನುದಾನ. ಇವೆಲ್ಲವನ್ನೂ ನಿರೀಕ್ಷೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಯವರು ಇವೆಲ್ಲವನ್ನೂ ನಿರ್ಲಕ್ಷಿಸಿದ್ದಾರೆ.

ಉತ್ತಮ ಬಜೆಟ್‌ ಅನ್ನುಮುಖ್ಯಮಂತ್ರಿಗಳು ಮಂಡಿಸಿಕರ್ನಾಟಕದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆರೂಪಿಸಿದ್ದಾರೆ. ಶಿಕ್ಷಣ, ಆರೋಗ್ಯಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಿಶ್ವವಿದ್ಯಾಲಯ ಘೋಷಣೆ ಮಾಡಿದ್ದಾರೆ. ಸ್ವಾಗತಾರ್ಹ ಬಜೆಟ್‌ ಸಿ.ಎಸ್‌. ನಿರಂಜನಕುಮಾರ್‌, ಶಾಸಕ, ಗುಂಡ್ಲುಪೇಟೆ

ಸಿಎಂ ಬೊಮ್ಮಾಯಿ ಯವರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ವಿಶ್ವ ವಿದ್ಯಾನಿಲಯ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ. ಅಲ್ಲದೇ ಜಿಲ್ಲೆಗೆ ಸುಸಜ್ಜಿತಸಂಚಾರಿ ಚಿಕಿತ್ಸಾ ಘಟಕ ಹಾಗೂವಿದ್ಯಾರ್ಥಿನಿಯರ ಆರೋಗ್ಯಕ್ಕೆ ಪೂರಕವಾದಮೆನ್‌ಸ್ಟ್ರೆವಲ್‌ ಕಪ್‌ ವಿತರಣೆಗೆ ಜಿಲ್ಲೆಯನ್ನು ಆಯ್ಕೆ ಮಾಡಿರುವುದು ಮೆಚ್ಚುಗೆಯ ವಿಷಯವಾಗಿದೆ. ಡಾ.ಎ.ಆರ್‌.ಬಾಬು, ಬಿಜೆಪಿ ಮುಖಂಡ, ಚಾ.ನಗರ

ಜಿಲ್ಲೆಯಲ್ಲಿ ಸಾಂಪ್ರದಾಯಕವಲ್ಲದ ವಿನೂತನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಆದರೆನಾವು ಸಾಂಪ್ರದಾಯಕ ವಿವಿ ನಿರೀಕ್ಷಿಸಿದ್ದೆವು. ಈ ವಿವಿಯಪರಿಕಲ್ಪನೆ ಹೇಗಿರುತ್ತದೋ ಗೊತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವೊಂದು ಯೋಜನೆಗೂ ಅನುದಾನ ನೀಡದಿರುವುದು ವಿಷಾದನೀಯ. ಕೆರೆಹಳ್ಳಿ ನವೀನ್‌, ಜಿಲ್ಲಾ ಕಾಂಗ್ರೆಸ್‌ ವಕ್ತಾರ

ಬಜೆಟ್‌ ಜನಪರವಾಗಿಲ್ಲ, ಜನರಿಗೆ ಅನುಕೂಲಕರವಾದದ್ದು ಏನೂ ಇಲ್ಲ. ಏನೋ ಒಂದು ಬಜೆಟ್‌ ಮಂಡನೆ ಮಾಡಬೇಕು ಎಂಬ ಉದ್ದೇಶದಿಂದ ಮಾಡಿರುವಂತಿದೆ. ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಲಾಗಿದೆ.ಎಚ್‌.ಎಂ. ಗಣೇಶ್‌ ಪ್ರಸಾದ್‌, ಕಾಂಗ್ರೆಸ್‌ ಮುಖಂಡ, ಗುಂಡ್ಲುಪೇಟೆ

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕನ್ನಡ ಪರ ಅಭಿವೃದ್ಧಿ ಕೆಲಸಗಳಿಗೆಹೆಚ್ಚಿನ ಅನುದಾನ ನೀಡಿಲ್ಲ. ಸರ್ಕಾರಿಕನ್ನಡ ಮಾಧ್ಯಮ ಶಾಲೆಗಳಅಭಿವೃದ್ಧಿಗೂ ಹಣ ಮೀಸಲಿಟ್ಟಿಲ್ಲ. ಭಾಷೆಯನ್ನು ಇನ್ನಷ್ಟು ಪಸರಿಸುವನಿಟ್ಟಿನಲ್ಲಿ ಇಟ್ಟಿದ್ದ ಭರವಸೆ ಹುಸಿಯಾಗಿದೆ. – ವೈ.ಕೆ.ಮೋಳೆ ನಾಗರಾಜು, ಕರವೇ ತಾಲೂಕು ಅಧ್ಯಕ್ಷ

ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಪೂರಕವಾದ ಯಾವುದೇಯೋಜನೆಗಳಿಲ್ಲ. ರೈತರ ಸಾಲವನ್ನುಮನ್ನಾ ಮಾಡುವ ನಿರೀಕ್ಷೆಹುಸಿಯಾಗಿದೆ. ಕೋವಿಡ್‌ನಿಂದತತ್ತರಿಸಿರುವ ಕುಟುಂಬಗಳ ನೆರವಿಗೆ ಸರ್ಕಾರ ಬಂದಿಲ್ಲ. ಕೃಷಿ ಚಟುವಟಿಕೆಯ ನೀರಾವರಿಯೋಜನೆಗಳಿಗೆ ಹೆಚ್ಚಿನ ಅನುದಾನ ಇಟ್ಟಿಲ್ಲ. ಇದೊಂದು ನಿರಾಶದಾಯಕ ಬಜೆಟ್‌ ಆಗಿದೆ. ಆರ್‌. ಪುಟ್ಟಬಸವಯ್ಯ ಗ್ರಾಪಂ ಸದಸ್ಯ ಹೊನ್ನೂರು

ಜಿಲ್ಲೆಗೆ ಸರ್ಕಾರ ಡಾ.ಬಿ.ಆರ್‌.ಅಂಬೇಡ್ಕರ್‌ ವಿಶ್ವವಿದ್ಯಾನಿಲಯನಿರ್ಮಾಣ ಮಾಡಲು ಘೋಷಿಸಿರುವುದು ಸ್ವಾಗತ. ರಾಜ್ಯದ ಯಾವುದೇವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್‌ಹೆಸರು ನಾಮಕರಣ ಮಾಡಿಲ್ಲ. ಇದು ಮೊಟ್ಟ ಮೊದಲನೇ ವಿಶ್ವವಿದ್ಯಾನಿಲಯವಾಗಿದೆ. ಮಾಂಬಳ್ಳಿ ನಂಜುಂಡಸ್ವಾಮಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ

ಸಿಎಂ ಬೊಮ್ಮಾಯಿರವರುಬೆಂಗಳೂರಿನ ಬಿಬಿಎಂಪಿಚುನಾವಣೆ ಆಧರಿಸಿ ಬೆಂಗಳೂರಿಗೆ ಅನುಕೂಲವಾಗುವ ಬಜೆಟ್‌ ಮಂಡನೆಮಾಡಿದ್ದಾರೆಯೇ ಹೊರೆತು ಇದುಬಡವರ, ರೈತರ ಪರ ಬಜೆಟ್‌ ಅಲ್ಲ. ಅಣಗಳ್ಳಿ ಬಸವರಾಜು, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ

ಕೇಂದ್ರ ಜಾರಿಗೆ ತಂದಿದ್ದ 3 ಕೃಷಿ ಕಾಯ್ದೆಯನ್ನು ಹಿಂಪಡೆಯಲುಮುಂದಾದರೆ, ರಾಜ್ಯ ಸರ್ಕಾರ ಬಜೆಟ್‌ ಮಂಡನೆಯ ವೇಳೆ ರೈತ ವಿರೋಧಿಮೂರು ಕಾಯ್ದೆಯನ್ನು ಹಿಂಪಡೆಯದೆ ಇರುವುದು ರೈತರಿಗೆ ಅನ್ಯಾಯವಾಗಿದೆ. ನಾಗರಾಜು, ರೈತ ಮುಖಂಡ

ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next