Advertisement

Budget; ಗ್ರಾಮೀಣ ಜಮೀನಿಗೆ ಇನ್ನು “ಭೂ ಆಧಾರ್‌’; ನಗರ ಪ್ರದೇಶಗಳಲ್ಲಿ ಆಸ್ತಿಗಳ ಡಿಜಿಟಲೀಕರಣ

09:26 PM Jul 23, 2024 | Team Udayavani |

ಹೊಸದಿಲ್ಲಿ: ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಭೂಮಿ ಆಧಾರಿತವಾಗಿ ನಿಖರತೆ ಸಾಧಿಸಲು, ಸುಧಾರಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಗ್ರಾಮೀಣ ಭಾಗಗಳಲ್ಲಿ ಜಮೀನುಗಳಿಗೆ “ಭೂ ಆಧಾರ್‌’ (ಯುನಿಕ್‌ ಐಡೆಂಟಿಫಿಕೇಶನ್‌ ನಂಬರ್‌) ಜಾರಿ ಮಾಡಲು ನಿರ್ಧರಿಸಿದೆ. ನಗರ ಭಾಗಕ್ಕೆ ಬಂದರೆ ಎಲ್ಲ ದಾಖಲೆಗಳನ್ನು ಡಿಜಿಲೀಕರಣಗೊಳಿಸಲಿದೆ. ಇದಕ್ಕಾಗಿ ಪ್ರತ್ಯೇಕ ಐಟಿ ವ್ಯವಸ್ಥೆಯನ್ನೇ ಸಿದ್ಧಪಡಿಸಲಿದೆ.

Advertisement

ರಾಜ್ಯ ಸರ್ಕಾರಗಳೊಂದಿಗೆ ಸೇರಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕೆಲಸ ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ತನ್ನ ಗುರಿಯನ್ನು ಸಾಧಿಸಲು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹಧನವನ್ನೂ ಕೇಂದ್ರ ನೀಡಲಿದೆ.

ಗ್ರಾಮೀಣ ಭಾಗಕ್ಕೆ ಭೂ ಆಧಾರ್‌

ಗ್ರಾಮೀಣ ಭೂಸುಧಾರಣೆಗಳಿಗೆ ಜಮೀನುದಾರರಿಗೆ ಯುನಿಕ್‌ ಲ್ಯಾಂಡ್‌ ಪಾರ್ಸೆಲ್‌ ಐಡೆಂಟಿಫಿಕೇಶನ್‌ ನಂಬರ್‌ (ಯುಎನ್‌ಪಿಐಎನ್‌) ನೀಡಲಾಗುತ್ತದೆ. ಇದನ್ನು ಭೂ ಆಧಾರ್‌ ಎಂದೇ ಕೇಂದ್ರ ಸರ್ಕಾರ  ಕರೆದಿದೆ. ವ್ಯಕ್ತಿಗಳಿಗೆ ಆಧಾರ್‌ ಸಂಖ್ಯೆ ಕೊಡುವಂತೆ ಭೂಮಿಗೂ ಇನ್ನು ಮುಂದೆ ಆಧಾರ್‌ ಮಾದರಿಯ ಸಂಖ್ಯೆಯೊಂದು ಸಿಗಲಿದೆ. ಇದಕ್ಕಾಗಿ ಈಗಾಗಲೇ ಆಧಾರ್‌ ಸಂಖ್ಯೆಗಳನ್ನು ಜಮೀನುಗಳಿಗೆ ಲಿಂಕ್‌ ಮಾಡುವ ಕಾರ್ಯವೂ ಸಾಗಿದೆ. ಭೂಮಾಲಿಕರ ಒಡೆತನದ ಆಧಾರದಲ್ಲಿ ಸಿದ್ಧವಾಗಿರುವ ಭೂಮಿಯ ನಕ್ಷೆಗಳನ್ನು ಡಿಜಿಟಲ್‌ ಪ್ಲಾಟ್‌ಫಾರ್ಮ್ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಕೃಷಿಕರ ನೋಂದಣಿ ಪುಸ್ತಕಕ್ಕೂ ಇದನ್ನು ಸಂಪರ್ಕಿಸಲಾಗುತ್ತದೆ.

ನಗರ ಭಾಗದಲ್ಲಿ ಪಕ್ಕಾ ಡಿಜಿಟಲೀಕರಣ

Advertisement

ನಗರ ಭಾಗದಲ್ಲೂ ಭೂದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಜಿಐಎಸ್‌ ಮ್ಯಾಪಿಂಗ್‌ ಎಂಬ ಸಾಫ್ಟ್ವೇರ್‌ ಬಳಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಆಸ್ತಿ ದಾಖಲೆಗಳ ನಿರ್ವಹಣೆಗಾಗಿ ಒಂದು ಪ್ರತ್ಯೇಕ ಐಟಿ ವ್ಯವಸ್ಥೆಯನ್ನೇ ಸಿದ್ಧಪಡಿಸಲಾಗುತ್ತದೆ. ತೆರಿಗೆಗಳನ್ನು ಅಪ್ಡೇಟ್‌ ಮಾಡಲು, ನಿರ್ವಹಿಸಲು ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ನಗರಾಡಳಿತಗಳಿಗೆ ಆರ್ಥಿಕವಾಗಿ ಲಾಭವಾಗಲಿ ಎಂಬ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ. ಸದ್ಯ ಹಲವು ಆಸ್ತಿಗಳಿಗೆ ಸೂಕ್ತ ದಾಖಲೆಗಳಿರುವುದಿಲ್ಲ ಅಥವಾ ತಪ್ಪುತಪ್ಪಾಗಿ ಇರುತ್ತವೆ. ಇಂತಹ ಆಸ್ತಿಗಳ ತೆರಿಗೆ ಆಡಳಿತಗಳಿಗೆ ತಪ್ಪುತ್ತಿದೆ. ಕೇಂದ್ರದ ಕ್ರಮದಿಂದ ಇದು ಸರಿಯಾಗುವ ನಿರೀಕ್ಷೆಯಿದೆ.

ಜಿಐಎಸ್‌ ಮ್ಯಾಪಿಂಗ್‌ ಅಂದರೇನು?: ಜಿಯೋಗ್ರಾಫಿಕ್‌ ಇನ್ಫಾರ್ಮೇಶನ್‌ ಸಿಸ್ಟಮ್‌ ಎನ್ನುವುದು ಒಂದು ಸಾಫ್ಟ್ವೇರ್‌. ಸೂಕ್ತ ಅಂಕಿಸಂಖ್ಯೆಗಳ ಆಧಾರದಲ್ಲಿ ನಕ್ಷೆಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ನಿರ್ದಿಷ್ಟ ಜಮೀನಿನ ನಿಖರ ಮಾಹಿತಿ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next