Advertisement

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

11:39 PM Feb 01, 2023 | Team Udayavani |

2023-24 ಕೇಂದ್ರ ಸರ್ಕಾರದ ಬಜೆಟ್‌ನ ಆದಾಯ ತೆರಿಗೆಗೆ ಸಂಬಂಧಪಟ್ಟಂತೆ, ಹೊಸ ಮತ್ತು ಹಳೆ ತೆರಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ಅದರಲ್ಲಿ ಮಂಡಿಸಲಾಗಿರುವ ಹಲವು ಬದಲಾವಣೆಗಳು ಜನಸಾಮಾನ್ಯರಲ್ಲಿ ಅನೇಕ ಗೊಂದಲಗಳನ್ನು ಮೂಡಿಸಿದೆ. ಬಜೆಟ್‌ನ ನಂತರ ಆದಾಯ ತೆರಿಗೆಯಲ್ಲಿ ಉಂಟಾದ ಬದಲಾವಣೆಗಳು ಈ ಕೆಳಗಿನಂತಿವೆ:
1. ತೆರಿಗೆ ಪಾವತಿದಾರರು ಹೊಸ ಯೋಜನೆಯನ್ನು ಆಯ್ಕೆ ಮಾಡುವುದಾದರೆ ಮುಂಚಿತವಾಗಿ ಊಟ್ಟಞ 101ಉ ನ್ನು ಫೈಲ್‌ ಮಾಡಬೇಕಾಗುತ್ತದೆ.
2. ವೇತನದಾರರನ್ನು ಹೊರತುಪಡಿಸಿ ಯಾವುದೇ ತೆರಿಗೆದಾರರು ಒಮ್ಮೆ ಹೊಸ ಯೋಜನೆಯನ್ನು ಆಯ್ಕೆ ಮಾಡಿದರೆ ನಂತರದ ವರ್ಷಗಳಲ್ಲಿ ಹಳೆಯ ಯೋಜನೆಗೆ ಪುನಃ ಬರುವಂತಿಲ್ಲ.
3. ಹೊಸ ತೆರಿಗೆ ಯೋಜನೆಯಲ್ಲಿ ನಿಗದಿತ ಕಡಿತ 52,500 ರೂ. ಹಾಗೂ ನಿವೃತ್ತಿ ಪ್ರಯೋಜನಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಬೇರೆ ಕಡಿತಗಳ ಸೌಲಭ್ಯ ದೊರೆಯುವುದಿಲ್ಲ.
4. ಹೊಸ ಮತ್ತು ಹಳೆಯ ತೆರಿಗೆಗಳ ಯೋಜನೆಗಳು ಈ ಕೆಳಗಿನಂತಿವೆ

Advertisement

ಹೊಸ ತೆರಿಗೆ ವ್ಯವಸ್ಥೆ


ಸೂಚನೆ: ವಾರ್ಷಿಕವಾಗಿ ಏಳು ಲಕ್ಷ ರೂ. ವರೆಗೆ ಆದಾಯ ಇರುವ ವ್ಯಕ್ತಿಗೆ ಸೆಕ್ಷನ್‌ 87 ಎ ಅನ್ವಯ 25 ಸಾವಿರ ರೂ. ವರೆಗೆ ವಿನಾಯಿತಿ ಸಿಗುತ್ತದೆ. ಆದ್ದರಿಂದ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಏಳು ಲಕ್ಷ ರೂ. ವರೆಗೆ ತೆರಿಗೆ ಪಾವತಿ ಮಾಡಬೇಕಾದ ಸಂದರ್ಭ ಬರುವುದಿಲ್ಲ.

5. ಈ ಆಯ್ಕೆಗಳು 2023-24ರ ಆರ್ಥಿಕ ವರ್‌ಷ ಹಾಗೂ ನಂತರದ ಅವಧಿಗೆ ಅನ್ವಯವಾಗುತ್ತದೆ.

6. ಹಳೆಯ ಯೋಜನೆಯಲ್ಲಿ ನಿಗದಿತ ಕಡಿತ (Standard Deduction), ಮನೆ ಬಾಡಿಗೆ (HRA), LTA,, ಗೃಹ ಸಾಲದ ಮೇಲಿನ ಬಡ್ಡಿ, ಅಸಲು, ವಿಮೆ, ಶಾಲಾ- ಕಾಲೇಜು ಫೀಸ್‌, ವೈದ್ಯಕೀಯ ವಿಮೆ, ಖರ್ಚು, ಉಳಿತಾಯ ಖಾತೆಯ ಮೇಲಿನ ಬಡ್ಡಿ ಹಾಗೂ ಇನ್ನಿತರ Chapter VIA ಕಡಿತಗಳು ಲಭ್ಯವಿರುತ್ತದೆ.
ಮುಂದಿನ ದಿನಗಳಲ್ಲಿ ಹಳೆಯ ಯೋಜನೆಯನ್ನು ನಿಲ್ಲಿಸುವ ಪ್ರಯತ್ನದಲ್ಲಿ, ಈ ವರ್ಷದ ಬಜೆಟ್‌, ಹೊಸ ತೆರಿಗೆ ಯೋಜನೆಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಹಲವು ತೆರಿಗೆದಾರರಿಗೆ ಈ ಯೋಜನೆ ಲಾಭದಾಯಕವಾಗಲಿದೆ. ಆದ್ದರಿಂದ ತೆರಿಗೆದಾರರು ಎರಡು ಯೋಜನೆಗಳನ್ನು ಒಮ್ಮೆ ವಿವರವಾಗಿ ಪರಿಶೀಲಿಸಿ ಅವಶ್ಯವಿದ್ದಲ್ಲಿ ತಮ್ಮ ಆರ್ಥಿಕ ತಜ್ಞರನ್ನು ಸಂಪರ್ಕಿಸಿ ಹೆಚ್ಚಿನ ತೆರಿಗೆಯನ್ನು ಉಳಿಸಲು ಪ್ರಯತ್ನಿಸಬಹುದು.

Advertisement

ಡಾ: ಸಿ.ಎ. ನಾಗರಾಜ್‌ ಆಚಾರ್‌.
ಕಾನೂನು ಹಾಗೂ ಆರ್ಥಿಕ ತಜ್ಞರು.
ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next