Advertisement

40,000 ಸ್ಟಾಂಡರ್ಡ್‌ ಡಿಡಕ್ಷನ್‌: ನೌಕರ ವರ್ಗಕ್ಕೆ ಹಿತಾನುಭವ

04:24 PM Feb 01, 2018 | udayavani editorial |

ಹೊಸದಿಲ್ಲಿ : 2018ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್‌ ಜೇತ್ಲಿ ಅವರು ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ಮಟ್ಟದಲ್ಲೇ ಉಳಿಸಿಕೊಂಡು ತಿಂಗಳ ಸಂಬಳ ಪಡೆಯುವ ನೌಕರ ವರ್ಗಕ್ಕೆ ನಿರಾಶೆ ಉಂಟು ಮಾಡಿರಬಹುದು; ಆದರೆ ಈ ನಿರಾಶೆಯನ್ನು ಕೊಂಚ ಮಟ್ಟಿಗೆ ತಗ್ಗಿಸುವ ಪ್ರಯತ್ನವಾಗಿ ಅವರು 40,000 ರೂ.ಗಳ ಸ್ಟಾಂಡರ್ಡ್‌ ಡಿಡಕ್ಷನ್‌ಗೆ ಅವಕಾಶ ಕಲ್ಪಿಸಿದ್ದಾರೆ.

Advertisement

ಸ್ಟಾಂಡರ್ಡ್‌ ಡಿಡಕ್ಷನ್‌ ಪರಿಕಲ್ಪನೆಯನ್ನು  2005ರ ಬಜೆಟ್‌ನಲ್ಲಿ (ಅಸೆಸ್‌ಮೆಂಟ್‌ ವರ್ಷ (2006-2007) ಕೈಬಿಡಲಾಗಿತ್ತು. 2004-05ರ ಅಸೆಸ್‌ಮೆಂಟ್‌ ವರ್ಷದ ತನಕ 30,000 ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಕಲ್ಪಿಸಲಾಗಿತ್ತು. ಆದರೆ ಇದನ್ನು ಪುನಃ ಆರಂಭಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬಂದಿತ್ತು. 

ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಸ್ಟಾಂಡರ್ಡ್‌ ಡಿಡಕ್ಷನ್‌ ಪರಿಚಯಿಸಲಾಗಿರುವುದರಿಂದ ನೌಕರಿ ವರ್ಗದವರ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮಾತ್ರವಲ್ಲದೆ ತೆರಿಗೆ ಲೆಕ್ಕಾಚಾರ ಹಾಕುವಾಗಿನ ಕೆಲಸವೂ ಕಡಿಮೆಯಾಗುತ್ತದೆ. 

ಅಲ್ಲದೆ ಉದ್ಯೋಗಪತಿಗಳು ನೌಕರರ ಸಂಬಳದಿಂದ ಆದಾಯ ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡುವ ಸಂದರ್ಭದಲ್ಲಿ 40,000 ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಕಳೆದು ತೆರಿಗೆ ಹೊರೆಯನ್ನು ಅಂದಾಜಿಸುವುದಕ್ಕೆ ಅವಕಾಶವಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next