Advertisement

ನಮ್ಮ ಯುದ್ಧ ವಿಮಾನವೇ ಐಎಎಫ್ ನ ಹೆಲಿಕಾಪ್ಟರ್ ಹೊಡೆದುರುಳಿಸಿತ್ತು-ಏನಿದು ಪ್ರಮಾದ?

11:19 AM Oct 05, 2019 | Nagendra Trasi |

ನವದೆಹಲಿ:ಕಾಶ್ಮೀರದಲ್ಲಿ ಫೆಬ್ರುವರಿ 27ರಂದು ನಮ್ಮ ಹೆಲಿಕಾಪ್ಟರ್ ಅನ್ನು ನಮ್ಮ ಮಿಸೈಲ್ ಹೊಡೆದುರುಳಿಸಿದ್ದು ದೊಡ್ಡ ಪ್ರಮಾದವಾಗಿದೆ ಎಂದು ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶುಕ್ರವಾರ ತಿಳಿಸಿದ್ದಾರೆ.

Advertisement

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಶೀತಲ ಯುದ್ಧದ ಸಂದರ್ಭದಲ್ಲಿ ಎಂಐ-17 ಹೆಲಿಕಾಪ್ಟರ್ ಪತನಕ್ಕೀಡಾಗಿತ್ತು. ಇದರಿಂದ ಆರು ಮಂದಿ ಐಎಎಫ್ ನ ಯೋಧರು ಹುತಾತ್ಮರಾಗಿದ್ದರು. ಈ ಕುರಿತು ನಡೆದ ತನಿಖೆಯಲ್ಲಿ, ನಮ್ಮ ಯುದ್ಧ ವಿಮಾನವೇ ಎಂಐ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದು ದೃಢಪಟ್ಟಿದೆ ಎಂದು ಏರ್ ಚೀಫ್ ರಾಕೇಶ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಇದು ನಮ್ಮಿಂದಾದ ಬಹುದೊಡ್ಡ ಪ್ರಮಾದ ಇದನ್ನು ಒಪ್ಪಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಇನ್ನು ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರ ವಹಿಸುವುದಾಗಿ ಹೇಳಿದರು.

ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ಸೇನೆ ಜೈಶ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ಮರುದಿನ (ಫೆ.27) ಪಾಕಿಸ್ತಾನ ಪ್ರತೀಕಾರಕ್ಕಾಗಿ ಯುದ್ಧ ವಿಮಾನಗಳನ್ನು ಕಳುಹಿಸಿತ್ತು. ಈ ಸಂದರ್ಭದಲ್ಲಿ ತಪ್ಪಾಗಿ ಗ್ರಹಿಸಿದ ಭಾರತೀಯ ವಾಯುಪಡೆ ಯುದ್ಧ ವಿಮಾನ ಶ್ರೀನಗರದಲ್ಲಿ ನಮ್ಮದೇ ಎಂಐ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next