Advertisement
ಸನ್ನತಿ ಗ್ರಾಮ ಹೊರ ವಲಯದ ಕನಗನಹಳ್ಳಿ ಪ್ರದೇಶದ ಭೀಮಾ ನದಿ ದಂಡೆಯ ಜಮೀನೊಂದರಲ್ಲಿ ಬುದ್ಧನ ಮೂರ್ತಿಗಳೊಂದಿಗೆ ದೊರೆತಿರುವ ಬೌದ್ಧವಿಹಾರ ಕ್ರಿ.ಪೂ. ಮೂರನೇ ಶತಮಾನದ ಕಥೆ ಹೇಳುತ್ತಿದೆ.ಭಾರತದಲ್ಲಿ ಬೌದ್ಧ ಧರ್ಮ ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲಘಟ್ಟದ್ದು ಎನ್ನಲಾಗಿರುವ ಈ ಬೌದ್ಧ ಕುರುಹುಗಳು, ಸೂಕ್ತ ರಕ್ಷಣೆಯಿಲ್ಲದೆ ಸೊರಗುತ್ತಿವೆ.
Related Articles
Advertisement
ಇಲ್ಲಿನ ಮೂರ್ತಿಗಳ ಕುರಿತು ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಿ ವ್ಯವಸ್ಥೆಯಿಲ್ಲ. ಸೆಕ್ಯೂರಿಟಿಗಳು ಮತ್ತು ಈಸ್ಥಳದ ಮೇಲ್ವಿಚಾರಕರು ಹೇಳುವ ಅರೆಬರೆ ಕಥೆಯನ್ನೆ ಕೇಳಿ ಅತೃಪ್ತಿಯಿಂದ ಮರಳುತ್ತಿದ್ದಾರೆ. ಉತನನದಲ್ಲಿ ದೊರೆತ ಇಲ್ಲಿನ ಸಾವಿರಾರು ಶಿಲ್ಪಗಳನ್ನು ಪ್ರವಾಸಿಗರ ವೀಕ್ಷಣೆಗಾಗಿ ಸಂಗ್ರಹಿಸಿಡಲು ವಸ್ತು ಸಂಗ್ರಾಹಲಯ ಕಟ್ಟಡ ನಿರ್ಮಿಸಿ ಐದು ವರ್ಷ ಕಳೆದರೂ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರವಾಗಿಲ್ಲ. ಪರಿಣಾಮ
ಮಹತ್ವದ ಬುದ್ಧನ ಮೂರ್ತಿಗಳು, ಕಲ್ಲಿನ ಬೇಲಿ, ಶಾಸನ, ವಿಹಾರ ಗೋಪುರ ನೆಲದಲ್ಲಿಯೇ ಬಿದ್ದು ಹಾಳಾಗುತ್ತಿದೆ. ಸರಕಾರದಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟಿ ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು,
ಐತಿಹಾಸಿಕ ಬೌದ್ಧ ನೆಲೆ ಅಭಿವೃದ್ಧಿ ಮಾತ್ರ ನೆಲಕಚ್ಚಿದೆ. ಮಡಿವಾಳಪ್ಪ ಹೇರೂರ