ಬೇರೊಬ್ಬರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
Advertisement
ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು. ಮಾನವ ಧರ್ಮ ಬಹಳ ಪವಿತ್ರವಾದದ್ದು. ಮೋಸ, ವಂಚನೆ ಮಾಡದೇ ಬೇರೊಬ್ಬರಿಗೆ ಆದರ್ಶ ವ್ಯಕ್ತಿಗಳಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಅನ್ಯ ಜಾತಿಗೆ ಸಮಾನತೆ ನೀಡಿದ್ದಾರೆ. ವಿಶ್ವ ಸಂಸ್ಥೆಯೇ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಮಹಾಜ್ಞಾನಿ ಎಂದು ಬಣ್ಣಿಸಿದೆ. ಇಂಥ ವ್ಯಕ್ತಿಯ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು.
ದೇವೇಂದ್ರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಅಭಿಯೋಜಕರಾದ ಮೀನಾಕುಮಾರಿ ರಾಮದುರ್ಗ, ಎಂ.ಆರ್.ಭೇರಿ, ಗೌತಮ ಕಟ್ಟಿಮನಿ
ಶಕ್ತಿನಗರ, ಪುಣೆ ಮಹಾನಗರ ಮಾಜಿ ಸದಸ್ಯ ಹುಲಿಗೇಶ, ನರಸಿಂಹಲು ಜವಳಗೇರಾ, ಪಾಂಡುರಂಗ ಕಲಬುರಗಿ, ಪ್ರಕಾಶ ಪಾಟೀಲ ವಕೀಲ, ರಾಘವೇಂದ್ರ ಕೋಲ್ಕರ್, ಬಸವನಗೌಡ ದೇಸಾಯಿ, ಕಸಾಪ ಅಧ್ಯಕ್ಷ ಮೈನುದ್ದೀನ ಕಾಟಮಳ್ಳಿ, ತಾಪಂ ಸದಸ್ಯೆ ಪದ್ಮಾವತಿ, ಪರಮಾನಂದ
ದೇಸಾಯಿ, ಪಿಎಸ್‌ಐ ಅಗ್ನಿ ಸೇರಿ ಇತರರು ಇದ್ದರು. ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸದಾಶಿವ ರಾತ್ರಿಕರ್ ಚಾಲನೆ ನೀಡಿದರು. ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಕ್ಲಬ್ ಆವರಣಕ್ಕೆ ಆಗಮಿಸಿತು. ಮೆರವಣೆಗೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್, ಬುದ್ಧ ಘೋಷಣೆಗಳನ್ನು ಕೂಗಲಾಯಿತು.