Advertisement
ವಿಶ್ವದ ಶ್ರೇಷ್ಠ ಸೆಲೆಬ್ರಟಿಗಳೊಂದಿಗೆ ನಾಲ್ಕು ದಿನಗಳ ಸಂಗೀತ ಕಚೇರಿಯನ್ನೊಳಗೊಂಡು ಹಲವಾರು ಕಾರ್ಯಕ್ರಮಗಳಿಗೆ ಈಗಾಗಲೇ ರೂಪುರೇಷೆ ತಯಾರಿ ಹಂತದಲ್ಲಿದ್ದು, ಬ್ರಿಟನ್ ನ ಬಕಿಂಗ್ಹ್ಯಾಮ್ ಅರಮನೆಯ ರಾಣಿಯಾಗಿ 70 ವರ್ಷ ಪೂರೈಸಿದ ಮೊದಲ ರಾಣಿಯಾಗಿ ಎಲಿಜಬೆತ್ || ಸಂಭ್ರಮದ ದಿನಗಳನ್ನು ಎದುರುಗಾಣುತ್ತಿದ್ದಾರೆ.
Related Articles
Advertisement
ರಾಣಿಯ ಏಳು ದಶಕಗಳ ಆಳ್ವಿಕೆಗಾಗಿ ಥ್ಯಾಂಕ್ಸ್ ಗಿವಿಂಗ್ ಅಥವಾ ಕೃತಜ್ಞತಾ ಸಮರ್ಪಣಾ ಸಮಾರಂಭವು ಲಂಡನ್ನಿನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ನಲ್ಲಿ ನಡೆಯಲಿದೆ. ರಾಣಿಯ ಏಳು ದಶಕಗಳ ಆಳ್ವಿಕೆಯ ಅತ್ಯಂತ ಮಹತ್ವದ ಮತ್ತು ಸಂತೋಷದಾಯಕ ಕ್ಷಣಗಳನ್ನು ಸಂಭ್ರಮಿಸಲು ಜಗತ್ತಿನ ಖ್ಯಾತ ಸಂಗೀತಗಾರರ ಕೂಡುವಿಕೆಯಲ್ಲಿ ಬಕಿಂಗ್ಹ್ಯಾಮ್ ಅರಮನೆಯಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಜೊತೆಗೆ ಎಲಿಜೆಬೆತ್ ಏಳು ದಶಕಗಳನ್ನು ಆಳ್ವಿಕೆನ್ನು ನೆನಪಿಸುವ ವಿಶೇಷ ಕಾರ್ಯಕ್ರಮಗಳನ್ನು ಬಕಿಂಗ್ಹ್ಯಾಮ್ ಅರಮನೆಯಿಂದ ಬಿಬಿಸಿ ವಿಶೇಷ ಲೈವ್ ಪ್ರಸಾರ ಮಾಡಲು ಅರಮನೆ ನಿರ್ಧರಿಸಿದೆ.
ಇನ್ನು, ಈ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವನ್ನು ಒದಗಿಸಲಾಗುತ್ತಿದೆ. ಭಾಗವಹಿಸುವವರಿಗೆ ನಿಗದಿತ ಟಿಕೇಟ್ ದರವನ್ನೂ ಕೂಡ ಇಡಲಾಗುತ್ತದೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಅರಮನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಕೈಗಾರಿಕಾ ಸಮಸ್ಯೆಗಳಿಗೆ ಸ್ಪಂದಿಸಲು ಶೀಘ್ರ ತೀರ್ಮಾನ : ಸರ್ಕಾರದ ಮುಖ್ಯ ಕಾರ್ಯದರ್ಶಿ ಭರವಸೆ