Advertisement

ಜಾಗತಿಕ ವ್ಯಾಪ್ತಿ ವಿಸ್ತರಿಸುತ್ತಿರುವ ಬಿಟಿಎಸ್‌

09:59 AM Nov 13, 2021 | Team Udayavani |

ಬೆಂಗಳೂರು: ರಾಜಧಾನಿಯಿಂದ ಆಚೆಗೆ ವಿಸ್ತಾರಗೊಂಡಂತೆಯೇ “ಬೆಂಗಳೂರು ಟೆಕ್‌ ಸಮಿಟ್‌’ ಜಾಗತಿಕ ಮಟ್ಟದಲ್ಲಿ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಏಷ್ಯಾದ ಈ ಅತಿದೊಡ್ಡ ತಂತ್ರಜ್ಞಾನಗಳ ಸಂತೆಯಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ. 98.6ರಷ್ಟು ವೃದ್ಧಿಯಾಗುತ್ತಿದೆ.

Advertisement

2018ರಲ್ಲಿ ನಡೆದ ಟೆಕ್‌ ಸಮಿಟ್‌ 12 ದೇಶಗಳಿಂದ ಕಡಿಮೆ ವಿದೇಶಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಕೇವಲ ಐದು ಉನ್ನತ ಮಟ್ಟದ ಪ್ರತಿನಿಧಿಗಳು ಇದ್ದರು. ಈ ಬಾರಿ 30ಕ್ಕೂ ಅಧಿಕ ದೇಶಗಳು ಭಾಗವಹಿಸುತ್ತಿದ್ದು, 800ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಸಾಕ್ಷಿಯಾಗಲಿದ್ದಾರೆ. ಈ ಪೈಕಿ 25ಕ್ಕೂ ಅಧಿಕ ಉನ್ನತ ಮಟ್ಟದ ಪ್ರತಿನಿಧಿಗಳು ಇರಲಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ, ಯೂರೋಪಿಯನ್‌ ಒಕ್ಕೂಟ ಮತ್ತು ಕಾಮನ್‌ವೆಲ್ತ್‌ ದೇಶಗಳು ಭಾಗವಹಿಸಲಿದ್ದಾರೆ.

ಅಷ್ಟೇ ಅಲ್ಲ, ಈ ಬಾರಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಹಾಗೂ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮೇಳ ಉದ್ದೇಶಿಸಿ ಮಾತನಾಡಲಿದ್ದಾರೆ. “ಎರಡು ದೇಶಗಳದೇಶದ ಪ್ರಧಾನಿ ಸೇರಿದಂತೆ ಈ ಬಾರಿ ವಿವಿಧ ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಮೇಳಕ್ಕೆ ಸಾಕ್ಷಿಯಾಗಲಿದ್ದು, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಖುದ್ದು ಆಗಮಿಸಲಿದ್ದಾರೆ.

ಇದನ್ನೂ ಓದಿ:- ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ: ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆ ಯತ್ನ

ಜಾಗತಿಕ ಮಟ್ಟದ ಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳ ವಿನಿಮಯಕ್ಕೆ ಬೆಂಗಳೂರು ಟೆಕ್‌ ಸಮಿಟ್‌ ವೇದಿಕೆ ಆಗಲಿದೆ. ಮೇಳದಲ್ಲಿ ಪಾಲ್ಗೊಳ್ಳುವ ದೇಶಗಳಿಗೆ ಆತಿಥ್ಯ ನೀಡಲು ನಾವು ಉತ್ಸುಕರಾಗಿದ್ದು, ಈ ಸಂಬಂಧ ಸಿದ್ಧತೆಗಳೂ ಪೂರ್ಣಗೊಂಡಿವೆ’ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಭಾಗವಹಿಸುವ ದೇಶಗಳ ಸಂಖ್ಯೆ ಮಾತ್ರ ಹೆಚ್ಚಳವಾಗಿಲ್ಲ; ಇದರೊಂದಿಗೆ ಭಾರತದೊಂದಿಗೆ ಆಯಾ ದೇಶಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ರಾಜ್ಯದ ಯುವಕರನ್ನು ತಂತ್ರಜ್ಞಾನ ಕೌಶಲ್ಯ ಕಲಿಕೆಗೆ ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಕಳುಹಿಸಲಾಗಿದೆ.

ಅದೇ ರೀತಿ, ವಿದೇಶಗಳಿಂದಲೂ ಇಲ್ಲಿಗೆ ಬಂದು ಕಲಿಯಲು ವೇದಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಸೈಬರ್‌ ಸೆಕ್ಯುರಿಟಿ ಮತ್ತು ಸಂಬಂಧಿತ ಸಂಶೋಧನಾ ಅಪ್ಲಿಕೇಷನ್‌ಗಳು, ಡಿಜಿಟಲ್‌ ಹೆಲ್ತ್‌ ಕೇರ್‌, ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ಮತ್ತಿತರ ವಿಚಾರಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ಜಪಾನಿನ ಕಾನ್ಸೂಲ್‌ ಜನರಲ್‌ ಅಕಿಕೊ ಸುಗಿತಾ, ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್ ಇಂಡಿಯಾ ನಿರ್ದೇಶಕ ಶೈಲೇಂದ್ರ ಕುಮಾರ್‌ ತ್ಯಾಗಿ, ಕರ್ನಾಟಕ ವಿಜನ್‌ ಗ್ರೂಪ್‌ ಫಾರ್‌ ಸ್ಟಾರ್ಟ್‌ಅಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next