Advertisement
ಮೈಸೂರಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿದ್ದ ವಿಕ್ರಂ ಆಮ್ಟೆ ಸ್ಥಾನಕ್ಕೆ ರಾಜ್ಯ ಗುಪ್ತ ವಾರ್ತೆ ಬೆಂಗಳೂರು ವಿಭಾಗದ ಅಧೀಕ್ಷಕರಾಗಿದ್ದ ಬಿ.ಟಿ.ಕವಿತಾ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಆಗಮಿಸಿದ್ದರು. ಆದರೆ, ವಿಕ್ರಂ ಆಮ್ಟೆ ಕಚೇರಿಯಲ್ಲಿ ಹಾಜರಿರಲಿಲ್ಲ. ಈ ಹಿನ್ನೆಲೆಯಲ್ಲಿ ಕವಿತಾ ರಾತ್ರಿ 9.30ರವರೆಗೂ ಕಚೇರಿಯಲ್ಲೇ ಕಾದರು. ಈ ವೇಳೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು, ಜಿಲ್ಲೆಯ ಪ್ರಮುಖ ಸಚಿವರೊಬ್ಬರನ್ನು ಭೇಟಿ ಮಾಡಿದ ನಂತರವಷ್ಟೇ ಅಧಿಕಾರ ಸ್ವೀಕರಿಸಲು ಬಿಡುವುದಾಗಿ ಕವಿತಾ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರ ಆದೇಶವಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳನ್ನು ಭೇಟಿಯಾಗಲು ಕವಿತಾ ಒಪ್ಪಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕವಿತಾ ಅವರು ಮೈಸೂರಿನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಉಪ ಕಾರ್ಯದರ್ಶಿ
ಜೆ.ಡಿ.ಮಧುಚಂದ್ರ ತೇಜಸ್ವಿ ಆದೇಶ ಹೊರಡಿಸಿದ್ದಾರೆ.