ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಉಳಿದವರೆಲ್ಲಾ ಸುಮ್ಮನೆ ಇರುವುದು ಒಳ್ಳೆಯದು ಎಂದು ಬಿಜೆಪಿ ನೂತನ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ನಗರಸಭೆ ಆವರಣದಲ್ಲಿ ಸೋಮವಾರ ದಿವ್ಯಾಂಗರಿಗೆ ತ್ರಿಚಕ್ರ ವಾಹನಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಮಾನ್ಯ ರವಿ ಅವರು ಪ್ರವಾಸೋದ್ಯಮ ಇಲಾಖೆ ಬಗ್ಗೆ ಹೆಚ್ವು ಗಮನ ಹರಿಸಲಿ ಎಂದು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿ.ಎಂ. ನಿರ್ಣಯ ಅಂತಿಮವಾಗಿರುತ್ತದೆ. ಉಳಿದವರು ಒತ್ತಡ ಹಾಕದೆ ಸುಮ್ಮನೆ ಇರುವುದು ಒಳಿತು ಎಂದರು.
ಇತ್ತೀಚೆಗೆ ಸಚಿವ ಸಿ.ಟಿ.ರವಿ ಉಪ ಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏನು ಹೇಳುತ್ತಾರೆ ಅದು ನಮಗೆ ಮುಖ್ಯವಾಗುತ್ತದೆಂದು ಪರೋಕ್ಷವಾಗಿ ಸಚಿವ ಸಿ.ಟಿ.ರವಿ ಹೇಳಿಕೆ ವಿರುದ್ಸ ಕಿಡಿಕಾರಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳಿಕೆ ಕೊಡಕ್ಕೆ ಯಾರಿಗಾದರೂ ಅರ್ಹತೆ ಇದ್ದರೆ ಅದು ಸಿಎಂ ಯಡಿಯೂಪ್ಪಗೆ ಮಾತ್ರ, ಆದರೆ ಈ ವಿಚಾರದಲ್ಲಿ ನನ್ನನ್ನು ಸೇರಿಕೊಂಡು ಗೊಂದಲ ನಿರ್ಮಾಣ ಮಾಡುವಂತಹ ಹೇಳಿಕೆ ಯಾರು ಕೊಡಬಾರದು. ನಮಗೆ ಸಿಎಂ ಯಡಿಯೂರಪ್ಪ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಬಗ್ಗೆ ಇತರೇ ನಾಯಕರು ಯಾವುದೇ ಹೇಳಿಕೆ ಕೊಡದೇ ಸಮ್ಮನೆ ಇರುವುದು ಒಳ್ಳೆಯದು ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕೇವಲ 8 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ನಿರ್ಧರಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಡದೇ ಸಾಂಕ್ರಾಂತಿ ಬಳಿಕ ಎಲ್ಲವೂ ತಿಳಿಯಲಿದೆ ಎಂದರು.