ಹುಬ್ಬಳ್ಳಿ: ಸಮ್ಮಿಶ್ರ ಸರಕಾರದಲ್ಲಿ ರೈತರ ಸಾಲ ಮನ್ನಾ ಘೋಷಣೆ ಕುರಿತು ರಾಜ್ಯಪಾಲರ ಭಾಷಣದಲ್ಲಿ ಸೇರಿಸಿದ ಪ್ಯಾರಾವನ್ನೇ ಕಿತ್ತು ಹಾಕಿಸಿದ್ದ ಯಡಿಯೂರಪ್ಪ, ಇದೀಗ ರೈತರ ಸಾಲ ಮನ್ನಾ ಹೋರಾಟದ ಹೇಳಿಕೆ ಹಾಸ್ಯಾಸ್ಪದ ಹಾಗೂ ರೈತರನ್ನು ನಂಬಿಸುವ ನಾಟಕವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಸಾಲ ಮನ್ನಾ ತೀರ್ಮಾನಕ್ಕೆ ತೀವ್ರ ವಿರೋಧ ತೋರಿದ್ದ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾತನಾಡಲು ಕನಿಷ್ಠ ನೈತಿಕತೆಯೂ ಇಲ್ಲ ಎಂದರು.
ಯಡಿಯೂರಪ್ಪ ನೆನಪಿಸಿಕೊಳ್ಳಲಿ: ಬಿಜೆಪಿಗೆ 150 ಸ್ಥಾನಗಳನ್ನು ಗೆಲ್ಲಿಸುವುದಾಗಿ ಹೇಳುವ ಯಡಿಯೂರಪ್ಪ, ಕೆಜೆಪಿಯಲ್ಲಿದ್ದಾಗ ಏನೆಲ್ಲಾ ಆರೋಪಿಸಿದ್ದರು. ಬಿಜೆಪಿ ನಾಯಕರು ಅವರ ವಿರುದ್ಧ ಏನೆಲ್ಲ ಆಪಾದನೆಗಳನ್ನು ಮಾಡಿದ್ದರು ಎಂಬುದನ್ನು ನಾಯಕರುಗಳೂ ನೆನಪಿಸಿಕೊಳ್ಳಲಿ ಎಂದರು.
ಯಡಿಯೂರಪ್ಪನವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ದ್ರೋಹ ಬಗೆದಿವೆ. ಜಗದೀಶ ಶೆಟ್ಟರ ಕುಟುಂಬ ಹಗಲು ದರೋಡೆ ಮಾಡಿದೆ. ಬಸವರಾಜ ಬೊಮ್ಮಾಯಿಯನ್ನು ಮಗನಂತೆ ನಂಬಿ ಪ್ರಮುಖ ಖಾತೆ ನೀಡಿದ್ದೆ. ನನ್ನ ಹೆಸರೇಳಿ ಹಣ ಲೂಟಿ ಹೊಡೆದು ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದೆಲ್ಲ ಆರೋಪಿಸಿದ್ದರು.
ಭಷ್ಯದಲ್ಲಿ ನಾನೆಂದೂ ಬಿಜೆಪಿ ಸೇರುವುದಿಲ್ಲ. ಅಂತಹ ಸ್ಥಿತಿ ಎದುರಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅಬ್ಬರಿಸಿದ್ದ ಯಡಿಯೂರಪ್ಪ, ಇದೀಗ ಅದೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜ್ಯ ಕಂಡ ಅತ್ಯಂತ ಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಎಂದೆಲ್ಲ ಬಿಜೆಪಿ ನಾಯಕರು ಆರೋಪಿಸಿದ್ದರು ಎಂದರು.
ರಾಜ್ಯದಲ್ಲಿ ಸರಕಾರ ಇದೆ ಎಂಬ ಭಾವನೆಯೇ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿನ ಪೇದೆಯೊಬ್ಬರು ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಿಲುಕಿ ಮಕ್ಕಳು-ಪತ್ನಿಗೆ ವಿಷ ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಸರಕಾರ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತೊರಿಸುತ್ತದೆ ಎಂದರು.