ಬೆಂಗಳೂರು: ಯೋಗ್ಯತೆ ಇದ್ದರೆ ಅಧಿಕಾರ ನಡೆಸಿ, ಇಲ್ಲವಾದರೆ ನಾವು 105 ಇದ್ದೇವೆ ಉಳಿದವರನ್ನು ಕರೆದುಕೊಂಡು ನಾವು ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಿಎಂ, ಬಿಎಸ್‌ವೈ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಒಂದು ಕಡೆ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ, ಇನ್ನೊಂದೆಡೆ ಅವರ ಅಪ್ಪ ದೇವೇಗೌಡರು ಮಧ್ಯಂತರ ಚುನಾವಣೆ ಕುರಿತು ಮಾತನಾಡುತ್ತಿದ್ದಾರೆ. ಇವರುಗಳ ಗೊಂದಲದಿಂದ ರಾಜ್ಯದಲ್ಲಿ ಅಧಿಕಾರಿಗಳಲ್ಲೂ ಗೊಂದಲ, ಅಭಿವೃದ್ಧಿ ಕಾರ್ಯಗಳೂ ಸ್ಥಗಿತವಾಗಿವೆ ಎಂದು ಕಿಡಿ ಕಾರಿದರು.
ಚಟ ತೀರಿಸಿಕೊಳ್ಳೋಕೆ ರಾಜಕೀಯ ಮಾಡುವುದು ಬೇಡ ನೀವು 25- 35 ಜನ ಇರುವುದು. ರಾಜ್ಯ ದುಸ್ಥಿತಿ ಗೆ ಬಂದಿದೆ. ಅಧಿಕಾರ ನಡೆಸಲು ಸಾಧ್ಯವಿಲ್ಲವಾದರೆ ಬಿಡಿ, ನಾವು ಅಧಿಕಾರ ನಡೆಸುತ್ತೇವೆ ಎಂದರು.
ಚುನಾವಣೆಗೆ ಜನ ಒಪ್ಪುವುದಿಲ್ಲ
ಮಧ್ಯಂತರ ಚುನಾವಣೆಗೆ ನಾವು ಅವಕಾಶ ಕೊಡುವುದಿಲ್ಲ, ನಾವು ಕೊಡುವುದಿಲ್ಲ ಎನ್ನುವುದಕ್ಕಿಂತಲೂ ಜನರು ಒಪ್ಪುವುದಿಲ್ಲ ಎಂದರು.