Advertisement
ಕುಷ್ಟಗಿ ಹಾಗೂ ಕನಕಗಿರಿಯಲ್ಲಿ ಮಾತನಾಡಿದ ಅವರು, 2008-2013ರಲ್ಲಿ 110 ಸ್ಥಾನಗಳೊಂದಿಗೆ ಜನತೆ ಬಿಜೆಪಿಗೆ ಅಧಿಕಾರ ನೀಡಿದ್ದರೂ 5 ವರ್ಷದಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿ ಸರಿಯಾಗಿ ಆಡಳಿತ ನಿರ್ವಹಿಸಲಾಗಲಿಲ್ಲ. ಸಿಎಂ ಆಗಿದ್ದ ಯಡಿಯೂರಪ್ಪ ಅವರು ನೇರವಾಗಿ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದರು. ಸಿಎಂ ಆಗಿ ಜೈಲಿಗೆ ಹೋದವರು ಯಡಿಯೂರಪ್ಪ ಅವರೊಬ್ಬರೇ. ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ದನ ರೆಡ್ಡಿ, ಹಾಲಪ್ಪ, ಆನಂದ ಸಿಂಗ್, ಸುರೇಶ ಬಾಬು ಇವರೆಲ್ಲ ಜೈಲಿಗೆ ಹೋಗಿದ್ದು ಬೀಗತನಕ್ಕಾಗಿ ಎಂದು ವ್ಯಂಗ್ಯವಾಡಿದರು.
Related Articles
ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡ್ತೀವಿ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅವರು ಅಧಿ ಕಾರಕ್ಕೆ ಬರಲ್ಲ. ಇನ್ನು ಎಲ್ಲಿಂದ ಸ್ಥಾನ ಕೊಡ್ತಾರೆ. ಹಾಗಾದ್ರೆ ಜೆಡಿಎಸ್ ದಲಿತರಿಗೆ ಸಿಎಂ ಸ್ಥಾನ ಕೊಡ್ತೀವಿ ಎಂದು ಏಕೆ ಘೋಷಣೆ ಮಾಡುತ್ತಿಲ್ಲ. ದೇವೇಗೌಡರಿಗೆ ದಲಿತರ ಬಗ್ಗೆ ಎಷ್ಟು ಕಾಳಜಿಯಿದೆ ಎಂದು ನನಗೆ ಗೊತ್ತು. ತಮ್ಮ ಕೊನೆಯಾಸೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಎಂದು ದೇವೇಗೌಡರೇ ಹೇಳಿದ್ದಾರೆ’ ಎಂದರು.
Advertisement
“ದಲಿತರು ಸಿಎಂ ಆಗುವುದು ನನ್ನಾಸೆ. ನಾನು ಶೇ.100ರಷ್ಟು ದಲಿತರ ಪರ. ದಲಿತರ ಮನೆಗೆ ಉಪಾಹಾರಕ್ಕೆ ತೆರಳಿದ್ದ ಯಡಿಯೂರಪ್ಪಗೆ ಅಷ್ಟೊಂದು ಅಭಿಮಾನ ಇದ್ದರೆ ದಲಿತರೊಂದಿಗೆ ಬೀಗತನ ಮಾಡಲಿ’ ಎಂದು ಸವಾಲು ಹಾಕಿದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶೀಘ್ರ ಶಿಫಾರಸುಕೊಪ್ಪಳ: “ವೀರಶೈವ-ಲಿಂಗಾಯತ ಧರ್ಮದ ವಿಚಾರದಲ್ಲಿ ನಾನು ಯಾವುದೇ ಧರ್ಮ, ಜಾತಿಯನ್ನು ಒಡೆಯುವ ಕೆಲಸ ಮಾಡಿಲ್ಲ. ಲಿಂಗಾಯತರೇ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಇಬ್ಬರೂ ಒಟ್ಟಿಗೆ ಬನ್ನಿ ಎಂದಿದ್ದೆ. ಮೂರು ತಿಂಗಳಾದರೂ ಅವರು ಒಟ್ಟಾಗಿ ಬರಲಿಲ್ಲ. ಹೀಗಾಗಿ, ಶೀಘ್ರದಲ್ಲೇ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಈಗಾಗಲೆ ಮಾತೆ ಮಹಾದೇವಿ ಸೇರಿ ನನಗೆ ಪ್ರತ್ಯೇಕವಾಗಿ 5-6 ಮಂದಿ ಮನವಿ ಸಲ್ಲಿಸಿದ್ದಾರೆ. ಅದೆಲ್ಲವನ್ನೂ ಪರಿಶೀಲಿಸಿ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಧರ್ಮ ಒಡೆಯುವ ವಿಚಾರದಲ್ಲಿ ನಾನು ಬಸವರಾಜ ರಾಯರಡ್ಡಿ, ಎಂ.ಬಿ.ಪಾಟೀಲ ಸೇರಿ ಯಾವುದೇ ಸಚಿವರನ್ನು ನೇಮಕ ಮಾಡಿಲ್ಲ’ ಎಂದರು. ರಾಹುಲ್ ಗಾಂಧಿ ಹತ್ಯೆ ಎಂದ ಸಿಎಂ !
ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ಭರದಲ್ಲಿ ರಾಹುಲ್ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ನಾನು ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು’ ಎಂದು ಹೇಳಿ ಪೇಚಿಗೆ ಸಿಲುಕಿದರು. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಸಾವರಿಸಿಕೊಂಡ ಸಿಎಂ, ಇಲ್ಲಾ ಇಲ್ಲಾ ರಾಹುಲ್ ಗಾಂ ಧಿ ಅಲ್ಲ, ರಾಜೀವ್ ಗಾಂಧಿ ಹತ್ಯೆ ನಡೆದ ಸಂದರ್ಭದಲ್ಲಿ ನಾನು ಸೋತೆ ಎಂದು ತಿದ್ದಿಕೊಂಡರು. ನಾನು 1991ರ ಅವ ಧಿಯಲ್ಲಿ ಕೊಪ್ಪಳ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೆ. ಆ ವೇಳೆ ಕೇವಲ 11 ಸಾವಿರ ಮತಗಳ ಅಂತರದಿಂದ ನಾನು ಸೋಲಬೇಕಾಯಿತು. ರಾಜೀವ್‌ಗಾಂಧಿ ಹತ್ಯೆಗಿಂತ ಮೊದಲೇ ಚುನಾವಣೆ ನಡೆದಿದ್ದರೆ ನಾನು ಕೊಪ್ಪಳದಲ್ಲಿ ಗೆಲ್ಲುತ್ತಿದ್ದೆ ಎಂದರು. ಸಿಎಂಗೆ ಹಾರ ಹಾಕಲು ಅವಕಾಶ
ನೀಡದ್ದಕ್ಕೆ ಕಲ್ಲು, ಕುರ್ಚಿ ತೂರಾಟ
ಕುಷ್ಟಗಿ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿಗೆ ಹೂಹಾರ ಹಾಕಲು ಪೊಲೀಸರು ಬಿಡದ ಕಾರಣ
ಅಸಮಾಧಾನಗೊಂಡ ಮುಖಂಡ, ಅಭಿಮಾನಿಗಳು ಪೊಲೀಸರ ಮೇಲೆ ಕಲ್ಲು, ಕುರ್ಚಿ ತೂರಾಟ ನಡೆಸಿದರು. ಸಿಎಂ
ಭಾಷಣದಲ್ಲಿ ಮುಖಂಡರ ಬೆವರಿಳಿಸಿದರು. ಇಲ್ಲಿನ ಟಿಎಪಿಸಿಎಂಎಸ್ ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ದಿಲೀಪಕುಮಾರ್ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಲು ಮುಂದಾದರು. ಆದರೆ ಪೊಲೀಸರು ಭದ್ರತೆ ದೃಷ್ಟಿಯಿಂದ ಅವರನ್ನು ವೇದಿಕೆಗೆ ಬಿಡಲಿಲ್ಲ. ಇದರಿಂದ ಕೆರಳಿದ ದಿಲೀಪಕುಮಾರ ಅಭಿಮಾನಿಗಳು ಎಸ್ಪಿಯ ಮಾತನ್ನು ಲೆಕ್ಕಿಸದೆ ವೇದಿಕೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದರು. ಇದರ ವಿರುದಟಛಿವಾಗಿ ಕಾರ್ಯಕರ್ತರು ಪ್ರತಿಭಟಿಸಿ, ತಳ್ಳಾಟ ನೂಕಾಟ ನಡೆಸಿದರು. ಪೊಲೀಸರು ಅವರನ್ನು ಮತ್ತೂಮ್ಮೆ ಚದುರಿಸಿದರು. ಕೋಪಗೊಂಡ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ಕುರ್ಚಿಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಪರಿಸ್ಥಿತಿ ಸುಧಾರಿಸಿದರು. ಈ ಮಧ್ಯೆ ಗಲಾಟೆ ಸದ್ದಿಗೆ ಸಿಎಂ ಸುಮ್ಮನಿರಿ ಎಂದು ಆದೇಶಿಸಿದರೂ, ಗದ್ದಲ ಹೆಚ್ಚಾದಾಗ, “ಈ ರೀತಿಯ ವರಸೆ ಬಿಡಬೇಕು. ಗದ್ದಲ ಮಾಡಿ, ಜನ ಸೇರಿಸಿ ಟಿಕೆಟ್ ನಿರೀಕ್ಷಿಸದಿರಿ. ಎಷ್ಟೇ ಪ್ರಭಾವ ಇದ್ದರೂ, ಎಷ್ಟೇ ಜನರನ್ನು ಕರೆದುಕೊಂಡು ಬಂದರೂ ಅಷ್ಟೇ. ಟಿಕೆಟ್ ಸಿಗದವರು ಗಲಾಟೆ ಮಾಡಿಸ್ತಾರೆ. ಟಿಕೆಟ್ ಖಚಿತವಾಗಿರುವವರು ಸುಮ್ಮನೆ ಇರ್ತಾರೆ ಎಂದು ಬೆವರಿಳಿಸಿದರು.