Advertisement

BSY 20 ಹಗರಣಗಳ ಪಾಲುದಾರ: 22 ಕಂಪೆನಿಗಳ ಗಣಿಗಾರಿಕೆಗೆ ಎಚ್‌ಡಿಕೆ ಅಕ್ರಮ ಅನುಮತಿ

12:08 AM Aug 10, 2024 | Team Udayavani |

ಮೈಸೂರು: ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯೇ? 82ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿ, ದೋಷಾರೋಪಣ ಪಟ್ಟಿ ಸಿದ್ಧವಾಗಿದೆ. ಅವರೂ ಆ. 10ರೊಳಗೆ ನಾನು ರಾಜೀನಾಮೆ ನೀಡಬೇಕು ಎಂದು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

Advertisement

ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ಅವರೇ 18-20 ಹಗರಣಗಳಲ್ಲಿ ಪಾಲುದಾರರಾಗಿದ್ದಾರೆ. ಅವರ ಮಗ ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಅವರ ಪಕ್ಷದ ಹಿರಿಯ ನಾಯಕ ಯತ್ನಾಳ್‌ ಅವರೇ ಹೇಳಿದ್ದಾರೆ ಎಂದರು.

ಕುಮಾರಸ್ವಾಮಿ ಜಂತಕಲ್‌ ಸೇರಿದಂತೆ 22 ಕಂಪೆನಿಗಳಿಗೆ ಗಣಿಗಾರಿಕೆಗೆ ಅಕ್ರಮವಾಗಿ ಅನುಮತಿ ಕೊಟ್ಟಿದ್ದಾರೆ. ಅಶೋಕ್‌ ಅವರು ಬಿ.ಎಂ. ಕಾವಲ್‌ ಹಗರಣದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ ನಾನೇನಾದರೂ ಈ ರೀತಿ ತಪ್ಪು ಮಾಡಿದ್ದೇನಾ? ಚೆಕ್‌ ಮೂಲಕ ಹಣ ಪಡೆದಿದ್ದೇನಾ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ದ್ವೇಷದ ರಾಜಕಾರಣದಲ್ಲಿ
ಗೌಡರ ಕುಟುಂಬ ಮುಂದು
ಶೋಷಿತರು ಅಧಿಕಾರ ಮಾಡುವುದನ್ನು ಮನುವಾದಿಗಳು, ಜಾತಿವಾದಿಗಳು, ಪಾಳೆಗಾರಿಕೆ ಪ್ರವೃತ್ತಿಯವರು ಸಹಿಸುವುದಿಲ್ಲ. ಅರಸು, ಬಂಗಾರಪ್ಪ, ಮೊಯ್ಲಿ, ಧರಂಸಿಂಗ್‌ ಅವರನ್ನು ಸಹಿಸಿಕೊಳ್ಳಲಿಲ್ಲ. ಕರ್ನಾಟಕದಲ್ಲಿ ಡಿ. ದೇವರಾಜ ಅರಸು ಅವರನ್ನು ಬಿಟ್ಟರೆ ಸಿದ್ದರಾಮಯ್ಯ ಒಬ್ಬನೇ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವುದು. ಹಿಂದುಳಿದ ವರ್ಗದ ನಾಯಕ 2ನೇ ಬಾರಿ ಸಿಎಂ ಆಗಿ ದ್ದನ್ನು ಸಹಿಸಲು ಆಗದೇ ವಿರೋಧ ಪಕ್ಷದವರು ಈ ರೀತಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಸೇಡಿನ ರಾಜಕಾರಣ, ದ್ವೇಷದ ರಾಜಕಾರಣ ಮಾಡುವುದರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬ ಮುಂದು. ಅವರು ಕೊಟ್ಟ ಮಾತನ್ನು ಎಂದೂ ಉಳಿಸಿಕೊಳ್ಳುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next