ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬಾೖ ಪ್ರವಾಸದಲ್ಲಿದ್ದು, ಮಂಗಳವಾರ ದುಬಾೖ ಎಕ್ಸ್‌ಪೋಕ್ಕೆ ಭೇಟಿ ನೀಡಿದ್ದಾರೆ.
190ಕ್ಕೂ ಹೆಚ್ಚಿನ ದೇಶಗಳು ಪಾಲ್ಗೊಂಡಿರುವ ಈ ಪ್ರದರ್ಶನ ಮೇಳದಲ್ಲಿ ನಮ್ಮ ಭಾರತದ ಪೆವಿಲಿಯನ್ ಅತ್ಯದ್ಭುತವಾಗಿದ್ದು, “ಮುಕ್ತ ವಾತಾವರಣ, ಅವಕಾಶಗಳು ಮತ್ತು ಬೆಳವಣಿಗೆ’ ಎನ್ನುವ ಆಶಯ ಅತ್ಯಂತ ಸಮರ್ಥವಾಗಿ ಪ್ರತಿಬಿಂಬಿತವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ದುಬಾೖ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ ಅವರು ಕಳೆದ ಆರು ದಿನಗಳಿಂದ ದುಬಾೖನಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿ ಹೆಚ್ಚಳಕ್ಕೆ ಕಾರಣ?: ಮಾಹಿತಿಗೆ ನಕಾರ
ರಾಜ್ಯ ಬಿಜೆಪಿಯಲ್ಲಿ ರಾಜ್ಯ ಕಾರ್ಯಕಾರಿಣಿ ಹಾಗೂ ಮಹತ್ವದ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಈ ಸಂದರ್ಭ ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಂಡಿರುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.